Asianet Suvarna News Asianet Suvarna News

ರಾಣಾ ಫಸ್ಟ್‌ ಲುಕ್, ಟೀಸರ್ ಬಿಡುಗಡೆ ಮಾಡಿದ ಉಪೇಂದ್ರ

  • ರಾಣಾ ಫಸ್ಟ್‌ ಲುಕ್, ಟೀಸರ್ ಬಿಡುಗಡೆ ಮಾಡಿದ ಉಪೇಂದ್ರ
  • ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆ
Kannada movie Raana first look and teaser released dpl
Author
Bangalore, First Published Sep 15, 2021, 10:53 AM IST
  • Facebook
  • Twitter
  • Whatsapp

ನಂದಕಿಶೋರ್ ನಿರ್ದೇಶನದ ಶ್ರೇಯಸ್ ಮಂಜು ನಟನೆಯ ‘ರಾಣಾ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಉಪೇಂದ್ರ, ‘ಹೀರೋ ಶ್ರೇಯಸ್‌ನ ಇನ್ನೋಸೆಂಟ್ ಮುಖದಲ್ಲಿ ಇಂಥಾ ವೈಲೆಂಟ್ ಲುಕ್ ಬರುವಂತೆ ಮಾಡಿದ್ದು ನಿರ್ದೇಶಕ ನಂದಕಿಶೋರ್ ಹೆಚ್ಚುಗಾರಿಕೆ.

ಶ್ರೇಯಸ್‌ಗೆ ಬ್ರೇಕ್ ನೀಡುವಂಥಾ ಹೆಚ್ಚೆಚ್ಚು ಸಿನಿಮಾಗಳು ಬರಲಿ’ ಎಂದು ಹಾರೈಸಿದರು. ನಿರ್ದೇಶಕ ನಂದಕಿಶೋರ್ ಸಿನಿಮಾದ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟುಕೊಡದೇ, ‘ಶೀಘ್ರ ಶೂಟಿಂಗ್ ಮುಂದುವರಿಸಲಾಗುವುದು’ ಎಂದಷ್ಟೇ ತಿಳಿಸಿದರು.

1980 ಚಿತ್ರ ಅ.15ಕ್ಕೆ ನಮ್ಮ ಫ್ಲಿಕ್ಸ್ OTTಯಲ್ಲಿ ರಿಲೀಸ್

ನಾಯಕ ಶ್ರೇಯಸ್, ‘ಮುಂದೊಂದು ದಿನ ತಂದೆಯೇ ತನ್ನ ಡೇಟ್ಸ್‌ ಕಾಯುವಂತಾಗಬೇಕು. ಅಂಥಾ ಟೈಮಿಗೆ ಕಾಯುತ್ತೇನೆ’ ಎಂದು ಉತ್ಸಾಹದಿಂದ ನುಡಿದರು. ನಿರ್ಮಾಪಕ ಕೆ ಮಂಜು, ನಾಯಕಿಯರಾದ ರೀಷ್ಮಾ ನಾಣಯ್ಯ, ರಜನಿ, ಚಿತ್ರದ ನಿರ್ಮಾಪಕ ಗುಜ್ಜಾಲ್ ಪುರುಷೋತ್ತಮ ಇದ್ದರು.

ಕಂಪ್ಲಿ ಶಾಸಕ ಜೆ ಎನ್ ಗಣೇಶ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಛಾಯಾಗ್ರಾಹಕ ಶೇಖರ್ ಚಂದ್ರು, ಕ್ರೀಡಾಪಟು ರಘು, ಆನಂದ್ ಆಡಿಯೋದ ಶ್ಯಾಮ್ ಇದ್ದರು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆಯಾಗಿದೆ

Follow Us:
Download App:
  • android
  • ios