1980 ಚಿತ್ರ ಅ.15ಕ್ಕೆ ನಮ್ಮ ಫ್ಲಿಕ್ಸ್ OTTಯಲ್ಲಿ ರಿಲೀಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕ ಉಪೇಂದ್ರ 

ಪ್ರಿಯಾಂಕಾ ಉಪೇಂದ್ರ ನಟನೆಯ ‘1980’ ಚಿತ್ರ ಅಕ್ಟೋಬರ್ 15ಕ್ಕೆ ‘ನಮ್ಮ ಫ್ಲಿಕ್ಸ್‌ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸುದೀಪ್, ‘ಎಷ್ಟೋ ಲದ ಬಳಿಕ ದೊಡ್ಡ ಪರದೆಯ ಮೇಲೆ ಚಿತ್ರದ ಟ್ರೈಲರ್ ನೋಡಿ ರೋಮಾಂಚನವಾಯ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರದೆ ಎಷ್ಟು ಮುಖ್ಯ ಅನ್ನೋದರ ಅರಿವಾಯ್ತು. ಕನ್ನಡ ಚಿತ್ರ ಜಗತ್ತು ಬೇಗ ಹಿಂದಿನ ಚೈತನ್ಯ ತುಂಬಿಕೊಳ್ಳಲಿ. ದೊಡ್ಡ ಪರದೆ ಮೇಲೆ ಸಿನಿಮಾ ನೋಡೋಕೆ, ತೆರೆ ಮೇಲೆ ಬರೋದಕ್ಕೆ ಕಾಯ್ತಿದ್ದೀನಿ’ ಎಂದರು.

ಪುರುಷೋತ್ತಮ ಚಿತ್ರದ ಆಡಿಯೋ ಬಿಡುಗಡೆ

ಪರ್ಯಾಯ ವಿಶ್ವದ ಕಥಾವಸ್ತು ಹೊಂದಿರುವ 1980 ಸಿನಿಮಾಕ್ಕೆ ಉಪೇಂದ್ರ ಶುಭ ಕೋರಿದರು. ಪ್ರಿಯಾಂಕಾ ಉಪೇಂದ್ರ, ‘ಚಿತ್ರದಲ್ಲಿ ನನಗೆ
ಇಂಟರೆಸ್ಟಿಂಗ್ ಪಾತ್ರವಿದೆ. ಈ ರೆಟೊ್ರೀ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಜನರ ಮನ ಗೆಲ್ಲೋದು ಖಚಿತ’ ಎಂದರು.

ನಿರ್ಮಾಪಕ ಜಾಕ್ ಮಂಜುನಾಥ್, ಚಿತ್ರದ ನಿರ್ದೇಶಕ ರಾಜ್ ಕಿರಣ್, ನಮ್ಮ ಫ್ಲಿಕ್‌ಸ್ ಓಟಿಟಿಯ ಸಿಇಓ ವಿಜಯ ಪ್ರಕಾಶ್, ನಿರ್ಮಾಪಕರಾದ
ಪೂಜಶ್ರೀ, ಸ್ವಾಮಿರಾಜ್, ನಟಿ ಶರಣ್ಯಾ ಮತ್ತಿತರರು ಉಪಸ್ಥಿತರಿದ್ದರು.