ಬೆಂಗಳೂರು (ಮಾ. 24): ಐಪಿಎಲ್ ಪಂದ್ಯ ಶುರುವಾದ ಆರಂಭದಲ್ಲೇ ಆರ್ ಸಿಬಿ ಸೋತು ಬೇಸರದಲ್ಲಿದ್ದರೇ ಪಡ್ಡೆಹುಲಿ ಚಿತ್ರ ತಂಡ ಮಾತ್ರ ಆರ್ ಸಿಬಿ ಬಗ್ಗೆ ಹಾಡೊಂದನ್ನು ಬರೆದಿದೆ.

ಬಾಲಿವುಡ್ ’ಕ್ವೀನ್’ ತಿರಸ್ಕರಿಸಿದ ಈ ಐದು ಚಿತ್ರಗಳು ಸೂಪರ್ ಹಿಟ್ 

ಐಪಿಎಲ್ ಹೋಗಲಿ ಆರ್ ಸಿಬಿ ಬೀಳಲಿ ಈ ಸಲ ಕಪ್ ನಮ್ದೆ ಎಂಬ ವಿಡಿಯೋ ಸಾಂಗ್ ವೊಂದನ್ನು ಬಿಡುಗಡೆ ಮಾಡಿದೆ. ಚೂರು ಚೂರಾಗಿದೆ ಎನ್ನುವ ಶೀರ್ಷಿಕೆಯಲ್ಲಿ ಈ ಹಾಡು ಶುರುವಾಗುತ್ತದೆ. ಐಪಿಎಲ್ ಹೋಗಲಿ ಆರ್ ಸಿಬಿ ಬೀಳಲಿ ಈ ಸಲ ಕಪ್ ನಮ್ದೆ  ಎಂದು ನಾಯಕ ನಾಯಕಿಗೆ ಹೇಳುತ್ತಾನೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಮತ್ತು ಸಿ ಆರ್ ಬಾಬಿ ಈ ಹಾಡನ್ನು ಹಾಡಿದ್ದಾರೆ. 

ಪುನೀತ್ ‘ಯುವರತ್ನ’ ಬೈಕ್ ನಂಬರ್ ಸೀಕ್ರೆಟ್ ರಿವೀಲ್!

ಈ ಸಾಂಗಿನಲ್ಲಿ ನಾಯಕ ಶ್ರೇಯಸ್ ಹಾಗೂ ನಾಯಕಿ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ನೃತ್ಯ  ಸಂಯೋಜನೆ ಮಾಡಿದವರು ಜಾನಿ ಮಾಸ್ಟರ್.