‘ಯುವರತ್ನ’ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಲೇಜು ಹುಡುಗ ಪಾತ್ರದಲ್ಲಿ ಅದೂ ಬರೋಬ್ಬರಿ 16 ವರ್ಷಗಳ ನಂತರ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ ನಟಿಸಲಿದ್ದಾರೆ.

ಇನ್ನು ಪುನೀತ್ ಹುಟ್ಟು ಹಬ್ಬದಂದು ಯುವರತ್ನ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು ಬೈಕೇರಿ ಬರುವ ಪುನೀತ್ ನನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಟ್ ಆ ಬೈಕ್ ನಂಬರ್ ಯಾರಾದರೂ ಗಮನಿಸಿದರೆ ಅದರ ಹಿಂದಿರುವ ಪವರ್ ಫುಲ್ ಮೆಸೇಜ್ ತಿಳಿದು ಬರುತ್ತದೆ.

ಗೊಂಬೆಯಂಥ ಈ ನಟಿ 'ಯುವರತ್ನ' ಚಿತ್ರಕ್ಕೆ ನಾಯಕಿ!

KA 01 PS 0029 ಇದು ಪುನೀತ್ ಚಿತ್ರದಲ್ಲಿ ಬಳಸಿರುವ ಬೈಕ್ ನಂಬರ್. ಇದರ ಅರ್ಥ ಇಲ್ಲಿದೆ....

KA- ಕರ್ನಾಟಕ

01 - ನಂಬರ್ 1 ಸ್ಟಾರ್

0029 - ಯುವರತ್ನ ಪುನೀತ್ 29ನೇ ಚಿತ್ರ. ಅಂದರೆ ಕರ್ನಾಟಕದ ನಂಬರ್ 01 ಸ್ಟಾರ್ ಪುನೀತ್ ಅವರ 29ನೇ ಚಿತ್ರ ಯುವರತ್ನ!