ಬೆಂಗಳೂರು (ಮಾ. 24): ಬಾಲಿವುಡ್ ನಟಿ ಕಂಗನಾ ರಾಣಾವತ್ ಸದ್ಯ ಬಹುಬೇಡಿಕೆಯ ಹಾಗೂ ಯಶಸ್ವೀ ನಟಿ.  ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಕಂಗನಾ, ತಮ್ಮ ಪ್ರತಿಯೊಂದು ಸಿನಿಮಾದಲ್ಲಿಯೂ ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. 

ಅಬ್ಬಾ...! ಹಾಲುಗೆನ್ನೆ ಚೆಲುವೆ ಕಂಗನಾ ರಾಣಾವತ್ ಫೋಟೋ ನೋಡಿ

ಮಣಿಕರ್ಣಿಕಾ ಯಶಸ್ಸಿನ ನಂತರ ಜಯಲಲಿತಾ ಬಯೋಪಿಕ್ ಮಾಡುವ ಯೋಚನೆಯಲ್ಲಿದ್ದಾರೆ. ಮಣಿಕರ್ಣಿಕಾ ಯಶಸ್ಸಿನ ನಂತರ ಪಾತ್ರದ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ. ಕೆಲವೊಮ್ಮೆ ಇವರ ಲೆಕ್ಕಾಚಾರ ತಲೆಕೆಳಗಾಗಿದೆ. ಇವರು ರಿಜೆಕ್ಟ್ ಮಾಡಿರುವ 5 ಸಿನಿಮಾಗಳು ಹಿಟ್ ಆಗಿವೆ. 

2011 ರಲ್ಲಿ ತೆರೆ ಕಂಡಿರುವ ’ದಿ ಡರ್ಟಿ ಪಿಕ್ಚರ್’ ಸಿನಿಮಾಗೆ ವಿದ್ಯಾಬಾಲನ್ ಗೂ ಮುಂಚೆ ಕಂಗಾನಾಗೆ ಆಫರ್ ಮಾಡಲಾಗಿತ್ತಂತೆ. ಆದರೆ ಅದ್ಯಾಕೋ ಕಂಗನಾ ಮನಸ್ಸು ಮಾಡಲೇ ಇಲ್ಲ. ನೋ ಎಂದು ಬಿಟ್ರು. ನಂತರ ವಿದ್ಯಾ ಬಾಲನ್ ಆ ಪಾತ್ರವನ್ನು ಮಾಡಿದರು. ಈ ಚಿತ್ರ ದೊಡ್ಡ ಮಟ್ಟಿಗಿನ ಯಶಸ್ಸು ಕಂಡಿತ್ತು. 

ನಿತ್ಯಾ ಮೆನನ್ ಅಲ್ಲ, ಈ ನಟಿ ಆಗಲಿದ್ದಾರೆ ’ಜಯಲಲಿತಾ’!

2016 ರಲ್ಲಿ ತೆರೆ ಕಂಡ ಸೂಪರ್ ಹಿಟ್ ಚಿತ್ರ ಭಜರಂಗಿ ಭಾಯಿಜಾನ್. ಈ ಚಿತ್ರದಲ್ಲಿ ಸಲ್ಲು ಭಾಯ್ ಜೊತೆ ಕಂಗನಾ ನಟಿಸಿದ್ರೆ ಚೆನ್ನಾಗಿರತ್ತೆ ಎಂದು  ನಿರ್ದೇಶಕ ಕಬೀರ್ ಖಾನ್ ಆಫರ್ ಮಾಡಿದ್ರೆ ಕಂಗನಾ ನೋ ಎಂದು ಬಿಟ್ಟರು. ನಂತರ ಕರೀನಾ ಸಲ್ಲು ಭಾಯ್ ಗೆ ನಾಯಕಿಯಾದರು. 

ಸಲ್ಲುಭಾಯ್ ಜೊತೆ ’ಸುಲ್ತಾನ್’ ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದಾಗ ಅದನ್ನು ನಿರಾಕರಿಸಿಬಿಟ್ಟರು. ಕಂಗನಾ ನಿರಾಕರಿಸಿದ್ದಕ್ಕೆ ಅನುಷ್ಕಾ ಶರ್ಮಾ ಆ ಪಾತ್ರ ಮಾಡಿ ಹಿಟ್ ಆದರು. 

ಅಕ್ಷಯ್ ಕುಮಾರ್ ’ಏರ್ ಲಿಫ್ಟ್’ ಸಿನಿಮಾ ಭರ್ಜರಿ ಯಶಸ್ಸು ಪಡೆದುಕೊಂಡ ಚಿತ್ರ. ಈ ಚಿತ್ರಕ್ಕಾಗಿ ಸಂಪರ್ಕಿಸಿದಾಗ ಸಾಧ್ಯವಿಲ್ಲ ಎಂದು ತಿರಸ್ಕರಿಸಿದರಂತೆ ಕಂಗಾನ. ನಂತರ ಅಮೃತಾ ಕೌರ್ ಕಾಣಿಸಿಕೊಂಡಿದ್ದಾರೆ. 

ಪುನೀತ್ ‘ಯುವರತ್ನ’ ಬೈಕ್ ನಂಬರ್ ಸೀಕ್ರೆಟ್ ರಿವೀಲ್!

ಹಿಂದೆ ಮಾಡಿದ ತಪ್ಪನ್ನು ಸಂಜು ಚಿತ್ರದಲ್ಲಿ ಪುನಾರಾವರ್ತಿಸಿದ್ದಾರೆ ನಟಿ ಕಂಗನಾ. ಅದೂ ಕೂಡಾ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ.