ಬೆಳಗಾವಿಯಿಂದ ಬೆಂಗಳೂರಿಗೆ ಬರುವ ಸಾಲಗಾರನೊಬ್ಬನ ಕಥೆ "ನನಗೂ ಲವ್ವಾಗಿದೆ". ಕುಟುಂಬದ ವಿವಿಧ ಸದಸ್ಯರ ಪ್ರೇಮಕಥೆಗಳನ್ನು ಒಳಗೊಂಡ ಈ ಚಿತ್ರವು ಥ್ರಿಲ್ಲರ್‌ ಅಂಶಗಳನ್ನೂ ಹೊಂದಿದೆ. ನಿರ್ಮಾಪಕರಾದ ನೀಲಕಂಠನ್‌ ಖಳನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸೋಮವಿಜಯ್ ನಾಯಕ, ತೇಜಸ್ವಿನಿ ನಾಯಕಿ. ಫೆಬ್ರವರಿಯಲ್ಲಿ ಬಿಡುಗಡೆ.

'ನಾನು ಚಿತ್ರಕ್ಕೆ ಕೆಲಸ ಮಾಡಲು ಹೋಗಿದ್ದೆ. ನಿರ್ಮಾಪಕರು ಶಾಂತಿನಗರ ಸ್ಮಶಾನದಲ್ಲಿ ಕಥೆ ಹೇಳುತ್ತಾ, ನೀವೇ ನಿರ್ದೇಶನ ಮಾಡಿರೆಂದು ಕೋರಿಕೊಂಡರು. ಅದರಂತೆ ಕಣ್ಣಿಗೆ ಒತ್ತಿಕೊಂಡು ಶುರು ಮಾಡಿದ್ದು, ಇಲ್ಲಿಯ ತನಕ ಬಂದಿದೆ. ಇದು ನನಗೆ ಐದನೇ ಚಿತ್ರ. ಶೀರ್ಷಿಕೆ ಕೇಳಿದೊಡನೆ ಇದೊಂದು ಹುಡುಗ, ಹುಡುಗಿ ಲವ್‌ಸ್ಟೋರಿ ಇರಬಹುದು ಅಂದುಕೊಳ್ತಾರೆ.' ಎಂದಿದ್ದಾರೆ ನಿರ್ದೇಶಕರು.

ಇಲ್ಲಿ ತಂದೆ,ತಾಯಿ, ಚಿಕ್ಕಪ್ಪ ಇಡೀ ಕುಟುಂಬದಲ್ಲಿ ಒಂದೊಂದು ರೀತಿಯಲ್ಲಿ ಲವ್ವಾಗುವುದನ್ನು ತೋರಿಸಲಾಗಿದೆ. ಬೆಳಗಾಂದಲ್ಲಿ ನಾಯಕ ಸಾಲಗಾರರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗೆ ಬರುತ್ತಾನೆ. ಇಲ್ಲಿಗೆ ಬಂದಾಗ ಏನೇನು ಸಮಸ್ಯೆಗಳನ್ನು ಎದುರಿಸುತ್ತಾನೆ. ಕೊನೆಗೆ ಎಲ್ಲವನ್ನು ಹೇಗೆ ಬಗೆಹರಿಸಿಕೊಳ್ಳುತ್ತಾನೆ ಎಂಬುದನ್ನು ಥ್ರಿಲ್ಲರ್, ಕುತೂಹಲದ ಸನ್ನಿವೇಶಗಳೊಂದಿಗೆ ಸಾರಾಂಶವಾಗಿದೆ. ಹೊನ್ನಾವರದಲ್ಲಿ ಒಂದು ಹಾಡು ಹೊರತುಪಡಿಸಿ, ಉಳಿದುದನ್ನು ಬೆಂಗಳೂರು ಸುತ್ತಮುತ್ತ ಚಿತ್ರಿಸಲಾಗಿದೆ ಎಂದರು.

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

ಹುಡುಗನಾಗಿದ್ದಾಗ ನಾಯಕನಾಗಬೇಕೆಂದು ಆಸೆ ಪಟ್ಟಿದೆ. ಅದು ಫಲಿಸಲಿಲ್ಲ. ಮಗನ್ನು ಹೀರೋ ಮಾಡಿ ನನ್ನ ಚಪಲವನ್ನು ತೀರಿಸಿಕೊಂಡಿದ್ದೇನೆ. ಶಾಂತಿನಗರ ಸ್ಮಶಾನದಲ್ಲಿ ಗ್ರಂಥಿಗೆ ಅಂಗಡಿ ವ್ಯಾಪಾರ ಮಾಡುತ್ತಿದ್ದೇನೆ. ಅದರಲ್ಲಿ ದುಡಿದ ಹಣದಲ್ಲಿ ನಿರ್ಮಾಣ ಮಾಡಿದ್ದೇನೆ. ಮಾಧ್ಯಮದವರು ನನ್ನ ಮಗನಿಗೆ ಪ್ರೋತ್ಸಾಹ ಕೊಡಬೇಕೆಂದು ಕೆ. ನೀಲಕಂಠನ್ ಕೇಳಿಕೊಂಡರು.

'ನನಗೂ ಲವ್ವಾಗಿದೆ' ಚಿತ್ರದ ಟ್ರೇಲರ್ ಮತ್ತು ಮೂರು ಹಾಡುಗಳ ಅನಾವರಣ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಕಾಳಿಅಮ್ಮನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕೆ. ನೀಲಕಂಠನ್ ಕಥೆ,ಚಿತ್ರಕಥೆ ಬರೆದು ಬಂಡವಾಳ ಹೂಡುವ ಜೊತೆಗೆ ಖತರ್‌ನಾಕ್ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಿ.ಎಸ್.ರಾಜಶೇಖರ್ ಸಂಭಾಷಣೆ, ಎರಡು ಹಾಡಿಗೆ ಸಾಹಿತ್ಯ ಒದಗಿಸಿ ನಿರ್ದೇಶನ ಮಾಡಿರುತ್ತಾರೆ.

ಡಾಲಿ ಧನಂಜಯ್ ಮದುವೆಗೆ ಇವ್ರೆಲ್ಲಾ ಹೋಗಿಲ್ಲ, ಏನೇನು ಕಾರಣ ಅಂತ ಒಮ್ಮೆ ನೋಡ್ಬಿಡಿ..!

ನಾಯಕ ಸೋಮವಿಜಯ್. ಬಾಲನಟಿಯಾಗಿದ್ದ ತೇಜಸ್ವಿನಿ ರೆಡ್ಡಿ ಈಗ ಈ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬೆಳಗಾವಿ ಕಾರ್ಪೋರೇಟರ್ ಆಗಿ ಪಿ.ಮೂರ್ತಿ. ಉಳಿದಂತೆ ಕಾರ್ತಿಕ್‌ರಾಮಚಂದ್ರ, ದೊರೆ, ಶಿಲ್ಪ, ನವೀನ್, ಸವಿತಾ, ಶಾಂತಆಚಾರ್ಯ, ರಾಜ್‌ಕುಮಾರ್ ಪತ್ತಾರ್ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ಬಿಆರ್ ಹೇಮಂತ್‌ಕುಮಾರ್, ಛಾಯಾಗ್ರಹಣ ಅಣಜಿ ನಾಗರಾಜ್, ಸಂಕಲನ ಕವಿತಾ ಬಂಡಾರಿ, ನೃತ್ಯ ಬಾಲಕೃಷ್ಣ, ಸಾಹಸ ಸುಪ್ರೀಸುಬ್ಬು ಅವರದಾಗಿದೆ. ಫೆಬ್ರವರಿ ಮೂರನೇ ವಾರದಂದು ಸಿನಿಮಾವು ರಾಜ್ಯಾದಾದ್ಯಂತ ತೆರೆ ಕಾಣುತ್ತಿದೆ.