Asianet Suvarna News Asianet Suvarna News

Madhagaja Title Song: ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರ ಜೋರು

ಮದಗಜ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು, ಬೃಹತ್​ ಸೆಟ್​ ಮತ್ತು ಅದ್ಧೂರಿ ಮೇಕಿಂಗ್‌ನಿಂದಾಗಿ ಈ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ. ಜೊತೆಗೆ ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. 

Kannada  Movie Madhagaja Title Song out Starrer Srii Murali gvd
Author
Bangalore, First Published Nov 11, 2021, 6:07 PM IST
  • Facebook
  • Twitter
  • Whatsapp

ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ' (Madhagaja) ಸಿನಿಮಾದ ಟೈಟಲ್ ಸಾಂಗ್ (Title Song) ಆನಂದ್​ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಅದ್ಧೂರಿಯಾಗಿ ಚಿತ್ರದ ಟೈಟಲ್ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು, ಬೃಹತ್​ ಸೆಟ್​ ಮತ್ತು ಅದ್ಧೂರಿ ಮೇಕಿಂಗ್‌ನಿಂದಾಗಿ ಈ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ. ಜೊತೆಗೆ ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯವಿದ್ದು, ಸಂತೋಷ್ ವೆಂಕಿ ಹಾಡಿದ್ದಾರೆ. 'ಕೆಜಿಎಫ್' (KGF) ಖ್ಯಾತಿಯ ರವಿ ಬಸ್ರೂರು (Ravi Basrur) ಸಂಗೀತ ನೀಡಿದ್ದು, ಸಿನಿರಸಿಕರು ಹಾಡಿಗೆ ಕೂಡಾ ಫಿದಾ ಆಗಿದ್ದಾರೆ.

ಚಿತ್ರದ ಹಾಡು ಬಿಡುಗಡೆಗೂ ಮುನ್ನ ಚಿತ್ರತಂಡ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಈ ವೇಳೆ ಭಾವುಕರಾದ ಶ್ರೀಮುರಳಿ, 'ಮದಗಜ' ಟೈಟಲ್​ ಸಾಂಗ್ ಅಪ್ಪುಮಾಮಗೆ ಅರ್ಪಣೆ ಮಾಡಿದರು.'ಮದಗಜ' ಚಿತ್ರ ಈಗಾಗಲೇ ಪೋಸ್ಟರ್ (Poster) ಮತ್ತು ಫಸ್ಟ್ ಲುಕ್‌ನಿಂದ (Firstlook) ಸದ್ದು ಮಾಡುತ್ತಿದೆ. ಅಲ್ಲದೇ  ಚಿತ್ರದ ಟೀಸರ್ (Teaser) ಕೂಡಾ ಬಿಡುಗಡೆಯಾಗಿ ಚಿತ್ರರಸಿಕರ ಗಮನ ಸೆಳೆದಿತ್ತು. ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಟೀಸರ್‌ನಲ್ಲಿ ಮುರಳಿ ಅವರ ಖಡಕ್ ಲುಕ್, ಪಂಚಿಂಗ್ ಡೈಲಾಗ್ಸ್  ಸೇರಿದಂತೆ ಭರ್ಜರಿ ಆಕ್ಷನ್‌ ಕಾಣಬಹುದಾಗಿದೆ.

ಡಿಸೆಂಬರ್.3ಕ್ಕೆ ಶ್ರೀಮುರಳಿ ಮದಗಜ ಆಗಮನ

ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu) ಅವರ ಟೆರರ್ ಲುಕ್ ನೋಡುಗರ ಮೈಜುಮ್ಮೆನಿಸುತ್ತದೆ. ಅಲ್ಲದೇ 'ರಕ್ತ ಒಳಗಿನಿಂದ ಹರಿದರೆ ಸಂಬಂಧ, ಹೊರಗಿನಿಂದ ಹರಿಸಿದ್ರೆ ಕ್ರೌರ್ಯ' ಎಂದು ಡೈಲಾಗ್ ಹೊಡೆಯುವ ಮೂಲಕ ಆಕ್ಷನ್‌ ಲುಕ್‌ನಲ್ಲಿ ಮುರಳಿ ಅಬ್ಬರಿಸಿದ್ದರು.ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda)  ಬಂಡವಾಳ ಹೂಡಿದ್ದಾರೆ. ಈ ಚಿತ್ರವು ಶ್ರೀ ಮುರಳಿ ಅವರ 22ನೇ ಸಿನಿಮಾವಾಗಿದ್ದು ಇದೊಂದು ಆಕ್ಷನ್‌ ಫ್ಯಾಮಿಲಿ ಎಂಟರ್‌ಟೇನರ್‌ ಚಿತ್ರ. 

ವಾರಾಣಸಿ ಗ್ಯಾಂಗ್‌ಸ್ಟರ್‌ (Gangster) ಆಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. 74 ದಿನಗಳ ಕಾಲ ಬೆಂಗಳೂರು, ಮೈಸೂರು, ಹೈದರಾಬಾದ್, ವಾರಾಣಸಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದ್ದು, ರವಿ ಬಸ್ರೂರ್‌ ಸಂಗೀತ ಚಿತ್ರಕ್ಕಿದೆ. 2019ರಲ್ಲಿ ತೆರೆಕಂಡ 'ಭರಾಟೆ' (Bharaate) ಚಿತ್ರದ ನಂತರ ಶ್ರೀ ಮುರಳಿ ನಟನೆಯ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ. ಆದ್ದರಿಂದಲೇ 'ಮದಗಜ' ಚಿತ್ರಕ್ಕೆ ಅಪಾರ ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಮೊದಲ ಬಾರಿಗೆ ಮುರಳಿ ಎದುರಿಗೆ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುವ ಪೋಸ್ಟರನ್ನು ಸಹ ಚಿತ್ರತಂಡ ಹಂಚಿಕೊಂಡಿತ್ತು.

ಬರ್ತಡೇ ದಿನ ಬಿಂದಾಸ್‌ ಆಗಿ ಧಮ್‌ ಹೊಡೀತಿರೋ ಆಶಿಕಾ ರಂಗನಾಥ್‌!

ಇನ್ನು ಚಿತ್ರಕ್ಕೆ  'ಮಫ್ತಿ' (Mufti) ಖ್ಯಾತಿಯ ನವೀನ್‌ ಕುಮಾರ್‌ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದು, ಅಯೋಗ್ಯ (Ayogya) ಸಿನಿಮಾ ಖ್ಯಾತಿಯ ಎಸ್.ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ನಟಿಸಿದ್ದು, ಚಿಕ್ಕಣ್ಣ (Chikkanna), ಶಿವರಾಜ್ ಕೆ.ಆರ್. ಪೇಟೆ (Shivraj K.R.Pete) ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. ಕನ್ನಡ ,ತೆಲುಗು, ತಮಿಳು ಭಾಷೆಗಳಲ್ಲಿ 'ಮದಗಜ' ಸಿನಿಮಾ ಬಿಡುಗಡೆಯಾಗಲಿದೆ.
 

Follow Us:
Download App:
  • android
  • ios