ನಟಿ ಆಶಿಕಾ ರಂಗನಾಥ್ ಹುಟ್ಟುಹಬ್ಬದ ದಿನ ವೈರಲ್ ಪೋಸ್ಟರ್ ರಿಲೀಸ್ ಮಾಡಿದ ಮದಗಜ ಚಿತ್ರತಂಡ. ಆಶಿಕಾ ಕೈಯಲ್ಲಿ ಧಮ್‌ ನೋಡಿ ನೆಟ್ಟಿಗರು ಶಾಕ್. 

ಪಟಾಕಿ ಪೋರಿ ಆಶಿಕಾ ರಂಗನಾಥ್‌ ಅವರ ಹ್ಯಾಪಿ ಬತ್‌ರ್‍ಡೇಗೆ ‘ಮದಗಜ’ ಟೀಮ್‌ ಬೋಲ್ಡ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಬಿಂದಾಸ್‌ ಆಗಿ ಸಿಗರೇಟ್‌ ಹೊಡೀತಿರೋ ಆಶಿಕಾ ಲುಕ್‌ ‘ಮದಗಜ’ದ ಆಕೆಯ ಪಾತ್ರದ ಬಗ್ಗೆ ಕುತೂಹಲ ಮೂಡಿಸುವಂತಿದೆ.

ಉಳಿದಂತೆ ಕುಟುಂಬದ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಆಶಿಕಾ ಹುಟ್ಟುಹಬ್ಬ ಸೆಲೆಬ್ರೇಟ್‌ ಮಾಡಿದರು. ಕೋವಿಡ್‌ ಸಮಸ್ಯೆ ಮುಂದುವರಿದಿರುವ ಕಾರಣ ಮತ್ತು ತಾನು ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣ ಈ ಬಾರಿ ಅಭಿಮಾನಿಗಳ ಜೊತೆಗೆ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ಸೋಷಿಯಲ್‌ ಮೀಡಿಯಾದಲ್ಲೆ ಅಭಿಮಾನಿಗಳು ವಿಶ್‌ ಮಾಡಬಹುದು ಎಂದು ನಟಿ ಹೇಳಿದ್ದರು.

ಫಾರ್ಮ್ ಹೌಸ್ ಮಾವಿನ ತೋಪಿನಲ್ಲಿ ಆಶಿಕಾ..! ಒಬ್ಬರೇ ಅಲ್ಲ

ತಮಿಳಿಗೆ ಎಂಟ್ರಿ

ಆಶಿಕಾ ರಂಗನಾಥ್‌ ಈ ಚಿತ್ರದ ಬಳಿಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಎ ಸರ್ಕುಣಂ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ಜೊತೆಗೆ ಅಥರ್ವ ಮುರಳಿ ನಾಯಕನಾಗಿ ನಟಿಸಿದ್ದಾರೆ. ಅಥರ್ವ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ. ತಮಿಳು ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಪ್ರತಿಭೆ. ಕಬಡ್ಡಿ ಆಟದ ಹಿನ್ನೆಲೆಯ ಕಥೆ ಹೊಂದಿರುವ ಚಿತ್ರವಿದು.

View post on Instagram