Asianet Suvarna News Asianet Suvarna News

Love Mocktail 2: ಡಾರ್ಲಿಂಗ್ ಕೃಷ್ಣ ಮೆಚ್ಚಿನ 'ದೂರ ಹೋದರೂ ನನ್ನೊಳವೇ' ಹಾಡು ರಿಲೀಸ್

ನಟ  ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿರುವ 'ಲವ್ ಮಾಕ್ಟೇಲ್ 2' ಚಿತ್ರದ 'ಸಂಚಾರಿಯಾಗು ನೀ'  ಲಿರಿಕಲ್ ವಿಡಿಯೋ ಸಾಂಗ್ ಜೆಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿದೆ. 

Kannada Movie Love Mocktail 2 Sanchariyagu Nee Song Out Starrer Darling Krishna gvd
Author
Bangalore, First Published Dec 4, 2021, 11:41 PM IST
  • Facebook
  • Twitter
  • Whatsapp

'ಮದರಂಗಿ' (Madarangi) ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ  ಡಾರ್ಲಿಂಗ್ ಕೃಷ್ಣ (Darling Krishna). 'ಲವ್ ಮಾಕ್ಟೇಲ್' (Love Mocktail) ಚಿತ್ರದ ಮೂಲಕ ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡು ಯಶಸ್ವಿಯಾದರು. ಈಗ 'ಲವ್ ಮಾಕ್ಟೇಲ್ 2'(Love Mocktail 2) ಚಿತ್ರ ಮಾಡುವುದಾಗಿ ಘೋಷಣೆ ಮಾಡಿ, ಚಿತ್ರದ ಫಸ್ಟ್‌ಲುಕ್, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಈಗಾಗಲೇ ಈ ಚಿತ್ರದ ಎಲ್ಲ ಕೆಲಸಗಳೂ ಮುಗಿದಿದೆ. ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಮತ್ತೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

'ಸಂಚಾರಿಯಾಗು ನೀ' (Sanchariyagu Nee) ಲಿರಿಕಲ್ ವಿಡಿಯೋ ಸಾಂಗ್ ಜೆಂಕಾರ್ ಮ್ಯೂಸಿಕ್ (Jhankar Music) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿದೆ. ರಾಘವೇಂದ್ರ ಕಾಮತ್ (Raghavendra Kamath) ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನಕುಲ್ ಅಭಯಂಕರ್ (Nakul Abhyankar) ಸಂಗೀತ ಸಂಯೋಜನೆ ಮಾಡಿದ್ದಾರೆ. 'ದೂರ ಹೋದರೂ ನನ್ನೊಳವೇ, ನೂರು ಜನ್ಮಕೂ ಕಾಯುವೆ' ಎಂಬ ಹಾಡಿನ ಸಾಲಿಗೆ ರಕ್ಷಿತಾ ಸುರೇಶ್ (Rakshita Suresh) ಹಾಗೂ ವಿಜಯ್ ಪ್ರಕಾಶ್ (Vijay Prakash) ದನಿ ನೀಡಿದ್ದಾರೆ. 

DilPasand: ಬೋಲ್ಡ್‌ ಲುಕ್‌ನಲ್ಲಿ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಜೋಡಿ

ಈ ಹಾಡಿನ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ 'ಲವ್ ಮಾಕ್ಟೇಲ್ 2' ಚಿತ್ರದಿಂದ ನನ್ನ ಮೆಚ್ಚಿನ ಹಾಡು ಇದೀಗ ಬಿಡುಗಡೆಯಾಗಿದೆ. ಇಂತಹ ಹಾಡಿಗೆ ಸಂಗೀತ ಸಂಯೋಜಿಸಿದಕ್ಕಾಗಿ ನಕುಲ್ ಅಭಯಂಕರ್‌ಗೆ ಧನ್ಯವಾದಗಳು. ಹಾಗೂ ಹಾಡಿಗೆ ಅರ್ಥಪೂರ್ಣ ಸಾಹಿತ್ಯವನ್ನು ಬರೆದವರು ನನ್ನ ಮೆಚ್ಚಿನ ರಾಘವೇಂದ್ರ ಕಾಮತ್. ಮತ್ತು ವಿಜಯ್ ಪ್ರಕಾಶ್ ಸರ್ ಈ ಹಾಡಿಗೆ ಧ್ವನಿ ನೀಡುವ ಮೂಲಕ ಜೀವ ತುಂಬಿದ್ದೀರಾ. ರಕ್ಷಿತಾ ಸುರೇಶ್ ನಿಮ್ಮದು ಎಂತಹ ಧ್ವನಿ ಎಂದು ಪೋಸ್ಟ್‌ ಮಾಡಿದ್ದಾರೆ.
 


'ಲವ್ ಮಾಕ್ಟೇಲ್ 2' ಸೆನ್ಸಾರ್ (Censor) ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' (U Certificate) ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ (Milana Nagaraj) ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಲವ್‌ ಮಾಕ್ಟೇಲ್‌' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಆದರೆ 'ಹೆಂಗೆ ನಾವು' ಎಂದು ಹೇಳುತ್ತಿದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಇರುತ್ತರಾ ಎಂದು ಕಾದು ನೋಡಬೇಕಿದೆ. ಮೊದಲ ಭಾಗಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಆದರೆ ಎರಡನೇ ಭಾಗಕ್ಕೆ ರಘು ದೀಕ್ಷಿತ್ ಬದಲಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಮೂರು ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸೆನ್ಸಾರ್‌ನಿಂದ ಯು ಸರ್ಟಿಫೀಕೆಟ್

ಇನ್ನು ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದು, ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ 'ದಿಲ್​ ಪಸಂದ್​' ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ರಶ್ಮಿ ಫಿಲಂಸ್ (Rashmi Films) ಲಾಂಛನದಲ್ಲಿ ಸುಮಂತ್ ಕ್ರಾಂತಿ (Sumant Kranthi) ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ರೊಮ್ಯಾಂಟಿಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು (Nishvika Naidu) ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ‌. ಚಿತ್ರಕ್ಕೆ ಶಿವ ತೇಜಸ್ (Shiva Tejas) ಆಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ', 'ಮಿಸ್ಟರ್ ಬ್ಯಾಚುಲರ್', 'ಲಕ್ಕಿ ಮ್ಯಾನ್' ಹಾಗೂ 'ಲವ್ ಮಿ ಔರ್ ಹೇಟ್ ಮಿ'ಸಿನಿಮಾಗಳು ಅನೌನ್ಸ್ ಆಗಿ ಚಿತ್ರೀಕರಣದ ಹಂತದಲ್ಲಿವೆ.
 

Follow Us:
Download App:
  • android
  • ios