ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಬರೆದ ಸಿನಿಮಾ ಕೆಜಿಎಫ್. ಇದೀಗ ಕೆಜಿಎಫ್-2 ಶೂಟಿಂಗ್ ಶುರುವಾಗಿದೆ. ಈ ಸಿನಿಮಾದಲ್ಲಿ ನಟಿಸಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ. 

ರಾಕಿಂಗ್ ಸ್ಟಾರ್ ಯಶ್‌ರೊಂದಿಗೆ ಅಭಿನಯಿಸೋ ಸಿಗುವ ಅವಕಾಶವೆಂದರೆ ಯಾರು ತಾನೇ ಬಿಡುತ್ತಾರೆ ಹೇಳಿ. ಒಂದು ಸಾರಿ ಅವಕಾಶ ಸಿಕ್ಕರೆ, ಸಿಗಲೆಂದು ಕಾಯುತ್ತಿರುತ್ತಾರೆ. ಅದಕ್ಕೆ ಕೆಜಿಎಫ್-2 ನಲ್ಲಿ ಅವಕಾಶ ನೀಡುತ್ತಿದ್ದಾರೆ. ಆಡಿಶನ್‌ಗೆ ಕಲಾವಿದರನ್ನು ಆಹ್ವಾನಿಸಲಾಗಿದೆ. ಮಲ್ಲೇಶ್ವರಂನ GM Rejyoj ಹೊಟೇಲಿನಲ್ಲಿ ಆಡಿಶನ್‌ಗೆ ಕರೆಯಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಭಾರೀ ಜನಸಾಗರವನ್ನು ಕಂಡು ಚಿತ್ರತಂಡವೇ ಅಚ್ಚರಿಗೊಂಡಿದೆ. 

8-16 ವರ್ಷದೊಳಗಿನ ಮಕ್ಕಳು ಹಾಗೂ 25 ವರ್ಷ ಮೇಲ್ಪಟ್ಟ ಯುವಕರನ್ನು ಆಡಿಶನ್‌ನಲ್ಲಿ ಭಾಗವಹಿಸಲು ಕೇಳಿ ಕೊಳ್ಳಲಾಗಿತ್ತು. ಅಲ್ಲಿ ಸೇರಿದ್ದ ಜನರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.