ಹೊಸಬರೇ ಸೇರಿ ಮಾಡಿರುವ ಕಾಡುಮಳೆ ಹೆಸರಿನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಕಾಸ್ಮೋಸ್ ಮೂವೀಸ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

ಹರ್ಷನ್, ಸಂಗೀತ, ಗೌತಮ್, ಗಿಲ್ಲಿ ಮಂಜು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ವಿಜಯಲಕ್ಷ್ಮೀ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ವರ್ಕ್‌ ಕೂಡಾ ಸುಂದರವಾಗಿ ಮೂಡಿ ಬಂದಿದೆ.

ಓ ಮೈ ಕಡವುಳೆ ಕನ್ನಡ ರೀಮೇಕ್‌ನಲ್ಲಿ ರೋಶಿನಿ ಪ್ರಕಾಶ್..       

ಸಮಯ ಇರದ ಜಾಗದ ಬಗ್ಗೆ ಕೇಳಿದ್ದೀರಾ ? ಎಂಬ ಪ್ರಶ್ನೆಯೊಂದಿಗಿನ ಟೀಸರ್‌ನಲ್ಲಿ ಪ್ರಕೃತಿ ಸೌಂದರ್ಯದ ಭರ್ಜರಿ ರಸದೌತಣ ಇದೆ. ನೋಡಿದಷ್ಟೂ ಬೇಕೆನಿಸುವ ನದಿ, ಕಾಡು, ಬೆಟ್ಟಗಳ ಸುಂದರ ದೃಶ್ಯಗಳಿವೆ.