ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಇದೀಗ 'ಗರುಡಾಕ್ಷ' ಎಂದು ಟೈಟಲ್ ಇಟ್ಟುಕೊಂಡು ನಿರ್ಮಾಣ ಆಗಿರುವ ಹೊಸ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 

ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಇದೀಗ 'ಗರುಡಾಕ್ಷ' (Garudaaksha) ಎಂದು ಟೈಟಲ್ ಇಟ್ಟುಕೊಂಡು ನಿರ್ಮಾಣ ಆಗಿರುವ ಹೊಸ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಶ್ರೀಧರ್‌ ವೈಷ್ಣವ್‌ (Sridhar Vaishnav) ನಿರ್ದೇಶನದ ಈ ಚಿತ್ರದ ಟ್ರೇಲರ್‌ (Trailer) ಹಾಗೂ ಹಾಡುಗಳನ್ನು (Songs) ನಟರಾದ ಮಿತ್ರ (Mithra), 'ಒರಟ' ಸಿನಿಮಾ ಖ್ಯಾತಿಯ ಪ್ರಶಾಂತ್ (Prashanth) ಹಾಗೂ 'ನೀರ್ ದೋಸೆ' ಸಿನಿಮಾ ನಿರ್ಮಾಪಕ ಪ್ರಸನ್ನ (Prasanna) ಬಿಡುಗಡೆ ಮಾಡಿದ್ದಾರೆ. ಚೇತನ್ ಯದು (Chethan Yadu) ಈ ಚಿತ್ರದ ನಾಯಕ.

Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

ಸಿನಿಮಾದಲ್ಲಿ ತಂದೆಯ ಅಚ್ಚುಮೆಚ್ಚಿನ ಮಗನಾಗಿ, ಕುಟುಂಬಕ್ಕೆ ಮೊದಲ ಆದ್ಯತೆ ಕೊಡುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲವ್‌, ಆ್ಯಕ್ಷನ್‌, ಎಮೋಶನ್ಸ್‌ ಎಲ್ಲವನ್ನೂ ಒಳಗೊಂಡಿರುವ ಪಾತ್ರ ನನ್ನದು ಎನ್ನುವುದು ಚೇತನ್‌ ಯದು ಮಾತು. ಇದೊಂದು ತಂದೆ ಮಗನ ಬಾಂಧವ್ಯದ ಸುತ್ತ ನಡೆಯುವಂಥ ಸಿನಿಮಾ. ತನ್ನ ತಂದೆಯೇ ಕೊಲೆ ಮಾಡಿದವರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕುವ ಥ್ರಿಲ್ಲಿಂಗ್‌ ಕಥೆ ಸಿನಿಮಾದಲ್ಲಿದೆ. ಸಿನಿಮಾದ ಕಥೆಗೆ ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ 'ಗರುಡಾಕ್ಷ' ಟೈಟಲ್‌ (Title) ಇಡಲಾಗಿದೆ ಎಂದು ನಿರ್ದೇಶಕ ಶ್ರೀಧರ್‌ ವೈಷ್ಣವ್‌ ಹೇಳುತ್ತಾರೆ. 

ಈ ಸಿನಿಮಾದಲ್ಲಿ ರಕ್ಷ (Raksha) ನಾಯಕಿಯಾಗಿ ನಟಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಖ್ಯಾತಿಯ ವಸಂತ್ ಕುಮಾರ್ (Vasanth Kumar) ಹಾಗೂ ಕುಮುದಾ (Kumuda) ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸತ್ಯರಾಜ್, ರಫೀಕ್, ವಸಂತ ಕುಮಾರ್, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ ಒಳಗೊಂಡಂತೆ ನವ ಕಲಾವಿದರ ದಂಡು ಚಿತ್ರದಲ್ಲಿದೆ. ಇನ್ನು ನಿರ್ಮಾಪಕ ನರಸಿಂಹಮೂರ್ತಿ, ಚಿತ್ರದ ಮೂಲಕ ಚಿಕ್ಕ ಗೆಲುವು ಕೊಡಿ ಇನ್ನೂ ಇಂತಹ ಹತ್ತಾರು ಚಿತ್ರಗಳನ್ನು ನಿರ್ಮಾಣ ಮಾಡುತ್ತೇನೆ, ಜೊತೆಗೆ ಕನ್ನಡಕ್ಕೆ ಒಳ್ಳೆಯ ಚಿತ್ರ ನೀಡೋಣ ಎಂದು ಮನವಿ ಮಾಡಿಕೊಂಡರು. ನಟರಾದ ಮಿತ್ರ, ಪ್ರಶಾಂತ್‌ ಸೇರಿದಂತೆ ಹಲವು ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. 

Puneeth Rajkumar: ಜೇಮ್ಸ್‌ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್‌

ಕ್ಷಿರಪಥ ಮೂವೀಸ್ ಬ್ಯಾನರ್‌ನಡಿ, ಎಸ್.ನರಸಿಂಹ ಮೂರ್ತಿ (S.Narasimha Murthy) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ನರಸಿಂಹ ಮೂರ್ತಿ ಮೂಲತಃ ಅರ್ಚಕರು. ಹೊಸ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರಂತೆ. ಎನ್‌.ಎಂ.ವಿಶ್ವ (N.M.Vishwa) ಸಂಕಲನ, ವೀರೇಶ್ (Veeresh) ಛಾಯಾಗ್ರಹಣ ಹಾಗೂ ಚಿತ್ರದ ಹಾಡುಗಳಿಗೆ ಶ್ರೀವತ್ಸ (Srivatsa) ಸಂಗೀತ ನಿರ್ದೇಶನ ಇದೆ. ಸೆನ್ಸಾರ್ (Censor) ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ (U/A Certificate) ಪಡೆದುಕೊಂಡು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.

YouTube video player