Asianet Suvarna News Asianet Suvarna News

ಗರುಡ ಗಮನ ವೃಷಭ ವಾಹನ ಚಿತ್ರದ 'ಎಂದೋ ಬರೆದ ಕವಿತೆ' ಹಾಡು ರಿಲೀಸ್

ಗರುಡಗಮನ ವೃಷಭವಾಹನ ಚಿತ್ರದ ಎಂದೋ ಬರೆದ ಕವಿತೆ ಸಾಲು ಎಂಬ ಹಾಡು ಬಿಡುಗಡೆಯಾಗಿದ್ದು, ಪವನ್ ಭಟ್ ಸಾಹಿತ್ಯ ರಚಿಸಿದ್ದಾರೆ. ವಾಸುಕಿ ವೈಭವ್ ಈ ಹಾಡಿಗೆ ದನಿಯಾಗಿದ್ದು, ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. 
 

Kannada Movie Garuda Gamana Vrishabha Vahana Song Out Starrer Raj B Shetty gvd
Author
Bangalore, First Published Nov 15, 2021, 7:27 PM IST

ರಿಷಬ್‌ ಶೆಟ್ಟಿ (Rishab Shetty) ಹಾಗೂ ರಾಜ್‌ ಬಿ. ಶೆಟ್ಟಿ (Raj B Shetty) ಕಾಂಬಿನೇಷನ್‌ನ 'ಗರುಡಗಮನ ವೃಷಭವಾಹನ' (Garuda Gamana Vrishabha Vahana) ನವೆಂಬರ್‌ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಶಿವ ಮತ್ತು ಹರಿಯಾಗಿ ರಾಜ್‌ ಶೆಟ್ಟಿ ಮತ್ತು ರಿಷಬ್‌ ಅವರ ಪರ್ಫಾರ್ಮೆನ್ಸ್‌ಗೆ ಸಿನಿರಸಿಕರು ಭಲೇ ಅಂದಿದ್ದಾರೆ. ಇದೀಗ ಚಿತ್ರತಂಡ ಚಿತ್ರದ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದು, ಸಂಗೀತ ಪ್ರಿಯರು ಈ ಹಾಡಿಗೆ ಮನಸೋತಿದ್ದಾರೆ. ಲೈಟರ್ ಬುದ್ಧ ಫಿಲ್ಮ್ಸ್ (Lighter Buddha Films) ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ರಿಲೀಸ್ ಆಗಿದೆ

'ಎಂದೋ ಬರೆದ ಕವಿತೆ ಸಾಲು' (Endo Bareda) ಎಂಬ ಹಾಡು ಬಿಡುಗಡೆಯಾಗಿದ್ದು, ಪವನ್ ಭಟ್ (Pavan Bhaat) ಸಾಹಿತ್ಯ ರಚಿಸಿದ್ದಾರೆ. ವಾಸುಕಿ ವೈಭವ್ (Vasuki Vaibhav) ಈ ಹಾಡಿಗೆ ದನಿಯಾಗಿದ್ದು, ಮಿದುನ್ ಮುಕುಂದನ್ (Midhun Mukundan) ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ನಿರ್ದೇಶಕ ಮಿದುನ್ ಅವರಿಗೆ ಈ ಚಿತ್ರ 11ನೇ ಸಿನಿಮಾ. ಸಿನಿಮಾ ನಿರ್ದೇಶಿಸಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಜೊತೆ ಈ ಹಿಂದೆ 'ಒಂದು ಮೊಟ್ಟೆಯ ಕಥೆ' (Ondu Motteya Kathe) ಚಿತ್ರದಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು. ಹಾಗಾಗಿ ರಾಜ್ ಬಿ. ಶೆಟ್ಟಿ ಜೊತೆ ಮಿದುನ್ ಅವರಿಗೆ ಇದು ಎರಡನೇ ಸಿನಿಮಾ. ಈ ಚಿತ್ರಕ್ಕೆ ಸಂಗೀತ ನೀಡುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಕೊರೊನಾ ಲಾಕ್‌ಡೌನ್ ಸಮಯದಲ್ಲೇ ಸಂಗೀತ ಸಂಯೋಜನೆ ನಡೆದಿತ್ತು ಎಂದು ಮಿದುನ್ ಹೇಳಿದ್ದಾರೆ.

ಗರುಡಗಮನ ವೃಷಭವಾಹನ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿ ಸಾಥ್‌

'ಗರುಡಗಮನ ವೃಷಭವಾಹನ' ಚಿತ್ರದ 'ಎಂದೋ ಬರೆದ ಕವಿತೆ ಸಾಲು, ಬೊಗಸೆ ಹಿಡಿದ ಮಳೆಯ ನೀರು, ಊರ ದಾರಿ , ಬೀಸೋ ಗಾಳಿ ಹೇಳುತಲಿವೆ ನವಿರಾದ ಕಥೆಯೊಂದನು...' ಹಾಡಿಗೆ ಸಿನಿಪ್ರೇಕ್ಷಕರು, 'ಹಾಡು ಬಹಳ ಸೊಗಸಾಗಿದೆ, ಗಾಯನ, ಸಂಗೀತ, ಕನ್ನಡದಲ್ಲಿ ಸಾಹಿತ್ಯ ಕೇಳಿ ಮತ್ತು ನೋಡಿ ಖುಷಿ ಆಯಿತು, ನಾನಂತೂ ಚಿತ್ರಕ್ಕೆ ಕಾಯ್ತಾ ಇದ್ದೀನಿ ಒಳ್ಳೆದಾಗಲಿ'. 'ಕನ್ನಡ ಸ್ಪಷ್ಟವಾಗಿದೆ ಹಾಡು ಮಾತ್ರ ಚಿಂದಿ ಗುರು, ಹಾಡು ಬೇಗ ಹಾಕಿ ಪ್ರಕೃತಿ ಸೌಂದರ್ಯ ಬಗ್ಗೆ ಸುಂದರವಾಗಿ ವರ್ಣಿಸಿದ್ದಾರೆ'. 'ಈ ಹಾಡು ಕೇಳೋಕೆ ಎರಡು ಕಿವಿ ಸಾಲದು, ಆ ನಿಸರ್ಗ ನೋಡಲು ಎರಡು ಕಣ್ಣು ಸಾಲದು'. 'ಎಲ್ಲಿ ನೋಡಿದರೂ ವಾಸುಕಿ ವೈಭವ್ ಸರ್ ಹಾಡಿರುವ ಹಾಡುಗಳು ರಾರಾಜಿಸುತ್ತಿವೆ, ಈ ಚಿತ್ರ ಕನ್ನಡ ಚಿತ್ರರಂಗದ ಮತ್ತೊಂದು ಮೈಲಿಗಲ್ಲು ಆಗೋದು ಪಕ್ಕ'. 'ಪವನ್ ಭಟ್ ಅವರ ಸಾಹಿತ್ಯ, ಮಿದುನ್ ಮುಕುಂದನ್‌ರವರ ಸಂಗೀತ, ಬಹಳ ಇಷ್ಟ ಆಯಿತು ಹಾಡು' ಎಂದು ಒಳ್ಳೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಪಕ್ಕಾ ದಕ್ಷಿಣ ಕನ್ನಡ ಸೊಗಡಿನ ಡೈಲಾಗ್‌, ಆ ಪರಿಸರದ ಕತೆ ಇರುವುದು ಇತ್ತೀಚೆಗಷ್ಟೇ ಬಿಡುಗಡೆಯಾದ ಟ್ರೇಲರ್‌ನಿಂದ ರಿವೀಲ್‌ ಆಗಿದೆ. 'ಒಂದು ಮೊಟ್ಟೆಯ ಕತೆ' ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್‌ ಶೆಟ್ಟಿ ಅವರನ್ನು ಹಾಸ್ಯ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರು, ಇದರಲ್ಲಿ ಚೂರಿ ಹಿಡಿದು ಮುನ್ನುಗ್ಗಿ ಅರ್ಭಟಿಸುವ ರೆಬೆಲ್‌ ಶಿವನ ಪಾತ್ರದಲ್ಲಿ ಕಣ್ತುಂಬಿಕೊಳ್ಳಬೇಕಿದೆ. ಹರಿಯಾಗಿ ಪೊಲೀಸ್‌ ಪಾತ್ರದಲ್ಲಿ ರಿಷಬ್‌ ಇದ್ದಾರೆ. ಈ ಸಿನಿಮಾದ ಟ್ರೇಲರ್‌ ಅನ್ನು ರಕ್ಷಿತ್‌ ಶೆಟ್ಟಿ (Rakshit Shetty) ಅವರ ಪರಂವಃ ಸ್ಟುಡಿಯೋಸ್‌ (Paramvah Studios) ಮೂಲಕ ಲೈಟರ್‌ ಬುದ್ಧ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 

ನ.19ಕ್ಕೆ ಗರುಡ ಗಮನ ವೃಷಭ ವಾಹನ ರಿಲೀಸ್‌

ರಾಜ್‌ ಬಿ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮಂಗಳೂರಿನ ಭೂಗತ ಜಗತ್ತಿನ ಸುತ್ತ ಕಥಾಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಹಾಗೂ ಪರಂವಃ ಸ್ಟುಡಿಯೋ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ರಕ್ಷಿತ್‌ ಶೆಟ್ಟಿ ಹೇಳಿಕೊಂಡಿದ್ದಾರೆ.
 

Follow Us:
Download App:
  • android
  • ios