Asianet Suvarna News Asianet Suvarna News

ಗರುಡಗಮನ ವೃಷಭವಾಹನ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿ ಸಾಥ್‌

  • ಗರುಡಗಮನ ವೃಷಭವಾಹನ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿಸಾಥ್‌
  • ಪರಂವಃ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ಬಿಡುಗಡೆ
Rakshith shetty supports kannada movie Garuda Gamana Vrishabha Vahana dpl
Author
Bangalore, First Published Oct 6, 2021, 11:55 AM IST
  • Facebook
  • Twitter
  • Whatsapp

ರಿಷಬ್‌ ಶೆಟ್ಟಿಹಾಗೂ ರಾಜ್‌ ಬಿ. ಶೆಟ್ಟಿಕಾಂಬಿನೇಷನ್‌ನ ‘ಗರುಡಗಮನ ವೃಷಭವಾಹನ’(Garuda Gamana Vrishabha Vahana) ಚಿತ್ರಕ್ಕೆ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಜತೆಯಾಗಿದ್ದಾರೆ. ಈ ಚಿತ್ರವನ್ನು ತಮ್ಮ ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುತ್ತಿರುವುದಾಗಿ ರಕ್ಷಿತ್‌ ಶೆಟ್ಟಿಹೇಳಿಕೊಂಡಿದ್ದಾರೆ.

ಈ ಕುರಿತು ನಟ ರಕ್ಷಿತ್‌ ಶೆಟ್ಟಿ, ‘ರಾಮಾ ರಾಮಾ ರೇ, ‘ಲೂಸಿಯಾ’, ‘ದಿಯಾ’, ‘ಕವಲುದಾರಿ’, ‘ಒಂದು ಮೊಟ್ಟೆಯ ಕಥೆ’, ‘ರಂಗಿತರಂಗ’ ಚಿತ್ರಗಳು ನನ್ನ ಬೀರಿದ ಪ್ರಭಾವ ದೊಡ್ಡದಾಗಿತ್ತು.

ಸತ್ಯಜಿತ್‌ ನೆರವಿಗೆ ನಿಂತ ಕಾಗೆಮೊಟ್ಟೆ ಚಿತ್ರತಂಡ

ಈಗ ಅಂಥದ್ದೇ ಪರಿಣಾಮಕಾರಿಯಾದ ಗರುಡಗಮನ ವೃಷಭವಾಹನ ಚಿತ್ರವನ್ನು ನಾನು ನನ್ನ ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.‘ಗರುಡಗಮನ ವೃಷಭವಾಹನ’ ಚಿತ್ರ ಒಂದು ಗಾಂಗ್‌ಸ್ಟರ್‌ ಕತೆಯಾಗಿದ್ದು, ಇಲ್ಲಿ ರಿಷಬ್‌ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿಮುಖಾಮುಖಿ ಆಗುತ್ತಿರುವುದು ವಿಶೇಷ.

ರಾಜ್‌ ಬಿ ಶೆಟ್ಟಿಚಿತ್ರದ ನಿರ್ದೇಶಕರು. ಮಂಗಳೂರಿನ ಭೂಗತ ಜಗತ್ತಿನ ಸುತ್ತ ಕಥಾಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿಚಿತ್ರ ನಿರ್ಮಿಸಿದ್ದಾರೆ.

Follow Us:
Download App:
  • android
  • ios