Asianet Suvarna News Asianet Suvarna News

'ಗಂಡುಲಿ' ಚಿತ್ರ ಆಡಿಯೋ ಬಿಡುಗಡೆ ಮಾಡಿದ ಬಿಗ್‌ಬಾಸ್‌ ಖ್ಯಾತಿಯ Pratham

ವಿನಯ ರತ್ನ ಸಿ ನಿರ್ಮಾಣ ಹಾಗೂ ನಟನೆಯ ‘ಗಂಡುಲಿ’ ಚಿತ್ರದ ಆಡಿಯೋವನ್ನು ಬಿಗ್‌ಬಾಸ್‌ ಖ್ಯಾತಿಯ ನಟ ಪ್ರಥಮ್‌ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಡಾ. ರಾಜ್‌ಕುಮಾರ್‌ ಅವರ ಬೆಟ್ಟದ ಹುಲಿ, ಹುಲಿ ಹೆಬ್ಬುಲಿ, ನಂತರದ ರಾಜಾ ಹುಲಿ ಚಿತ್ರಗಳೆಲ್ಲ ಸೂಪರ್‌ಹಿಟ್‌ ಆಗಿದ್ದವು.

Kannada Movie Ganduli Audio Launch by Pratham gvd
Author
Bangalore, First Published Jan 10, 2022, 7:44 AM IST

ವಿನಯ ರತ್ನ ಸಿದ್ಧಿ (Vinay Ratna Siddhi) ನಿರ್ಮಾಣ ಹಾಗೂ ನಟನೆಯ ‘ಗಂಡುಲಿ’ (Ganduli) ಚಿತ್ರದ ಆಡಿಯೋವನ್ನು ಬಿಗ್‌ಬಾಸ್‌ ಖ್ಯಾತಿಯ ನಟ ಪ್ರಥಮ್‌ (Pratham) ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಡಾ. ರಾಜ್‌ಕುಮಾರ್‌ ಅವರ ಬೆಟ್ಟದ ಹುಲಿ, ಹುಲಿ ಹೆಬ್ಬುಲಿ, ನಂತರದ ರಾಜಾ ಹುಲಿ ಚಿತ್ರಗಳೆಲ್ಲ ಸೂಪರ್‌ಹಿಟ್‌ ಆಗಿದ್ದವು. ವಿನಯ್‌ ಅವರ ಗಂಡುಲಿಯೂ ಈ ಸಾಲಿಗೆ ಸೇರಲಿ’ ಎಂದು ಶುಭ ಹಾರೈಸಿದರು. ಈ ಚಿತ್ರದ ಆಡಿಯೋ ಹಕ್ಕುಗಳನ್ನು ದಿಲೀಪ್‌ ಪಡೆದಿದ್ದಾರೆ.

‘ಮ್ಯೂಸಿಕ್‌ ಬಾಕ್ಸ್‌’ ಯೂಟ್ಯೂಬ್‌ ಚಾನೆಲ್‌ನಲ್ಲಿ ಚಿತ್ರದ ಹಾಡುಗಳನ್ನು ಕೇಳಬಹುದು. ಗಂಡುಲಿ ಹಳ್ಳಿಯೊಂದರಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡ ಸಿನಿಮಾ. ದೇವಸ್ಥಾನದ ಕುರಿತು ಸರ್ವೆಗೆಂದು ಬರುವ ಪುರಾತತ್ವ ಇಲಾಖೆಯ ಅಧಿಕಾರಿಗಳು ನಿಗೂಢವಾಗಿ ಕೊಲೆಯಾಗುತ್ತಾರೆ, ಈ ಕೊಲೆಗೆ ಕಾರಣವೇನು ಅದರ ಹಿಂದಿರುವ ರಸಹಸ್ಯವೇನು ಎನ್ನುವುದೇ ಸಿನಿಮಾದ ಒನ್ ಲೈನ್ ಕಹಾನಿ. ಇದನ್ನು ಅಷ್ಟೇ ರೋಚಕವಾಗಿ ಕಥೆ ಬರೆದು ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ ನಟ, ಕಂ ನಿರ್ದೇಶಕ ವಿನಯ್ ರತ್ನಸಿದ್ದಿ. 

B.Sarojadevi: ಅದ್ಭುತ ಕಲಾವಿದೆ ಎದುರಿಸಿದ ನೋವು ಒಂದೆರಡಲ್ಲ!

ಸಸ್ಸನ್ಸ್ ಥ್ರಿಲ್ಲರ್ ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಎಳೆ, ಒಂದೊಳ್ಳೆ ಲವ್ ಕಹಾನಿ ಒಳಗೊಂಡಂತೆ ಮಾಸ್, ಕ್ಲಾಸ್, ಸೆಂಟಿಮೆಂಟ್, ಆಕ್ಷನ್ ಎಲ್ಲಾ ಎಲಿಮೆಂಟ್ ಸಿನಿಮಾದಲ್ಲಿದೆ ಎನ್ನುತ್ತದೆ ಗಂಡುಲಿ ಚಿತ್ರತಂಡ. ಸದ್ಯ ಸಿನಿಮಾದ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಛಾಯಾ ತೆರೆಹಂಚಿಕೊಂಡಿದ್ದು, ಸುಧಾ ನರಸಿಂಹರಾಜು ನಾಯಕನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. 

ಡ್ಯುಯೆಟ್ ಹಾಡು ತುಂಬಾ ಖುಷಿ ಕೊಡುತ್ತೆ. ತುಂಬಾ ಕ್ಯಾಚಿ ಟ್ಯೂನ್ ಹೊಂದಿರುವ ಈ ಹಾಡು ಹೊಸವರ್ಷದ ವಿಶೇಷವಾಗಿ ಬಂದಿದೆ. ಇದರ ಜೊತೆಗೆ ಅಮ್ಮ ಮಗನ ಸೆಂಟಿಮೆಂಟ್ ಹಾಡು ಕೂಡ ಚಿತ್ರದಲ್ಲಿದೆ. ಹಿಂದಿನ ಹುಲಿ ಸೀರಿಸ್ ಚಿತ್ರಗಳಂತೆ ಈ ಚಿತ್ರವೂ ಜನರ ಮನ ಗೆಲ್ಲಲಿದೆ ಎಂದು ಸುಧಾ ನರಸಿಂಹರಾಜು ಹೇಳಿದರು. ಹಳ್ಳಿಯ ಪರಿಸರದಲ್ಲಿ ನಡೆಯೋ ಕಥೆಯಿದಾಗಿದ್ದು, ದಿವಾನರ ಕುಟುಂಬದ ಹೆಣ್ಣುಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ಮನರಂಜನಾತ್ಮಕ ಕಥೆಯೂ ಚಿತ್ರದಲ್ಲಿದೆ ಎಂದು ಹೇಳಿದರು.

Danish Saitಗೆ ದೊಡ್ಡ ವ್ಯಕ್ತಿಗಳು ಪರಿಚಯವಿದೆ, ಕೆಎಲ್‌ ರಾಹುಲ್‌ ಮನೆಗೆ ಬಂದಿದ್ರು: ನಟ Vijay Chendur

ಉಳಿದಂತೆ ಧರ್ಮೇಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಮೂರು ಹಾಡುಗಳಿದ್ದು, ಅಜಯ್ ಮತ್ತು ರವಿದೇವ್ ಸಂಗೀತ ನಿರ್ದೇಶನ, ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಸುರೇಶ್ ಸಾಹಸ ನಿರ್ದೇಶನವಿದೆ. ವಿ. ಆರ್ ಫಿಲ್ಮಂಸ್ ಬ್ಯಾನರ್‍ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅಮರೇಂದ್ರ, ಪುನೀತ್, ಲೋಕೇಶ್ ರಾಜಣ್ಣ ಹಾಗೂ ಚಂದನ ಸೇರಿ ನಾಲ್ಕು ಜನ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

Follow Us:
Download App:
  • android
  • ios