ಕನ್ನಡ ಚಿತ್ರರಂಗದ ಬಹು ನೀರಿಕ್ಷಿತ ಚಿತ್ರ 'ಗಡಿನಾಡು' ಇದೇ ವಾರ ತೆರೆ ಕಾಣಲು ಸಜ್ಜಾಗುತ್ತಿದೆ. ಇನ್ನೇನು ಫೈನಲ್ ವರ್ಕ್ ಮುಗಿದು, ಚಿತ್ರ ಬಿಡುಗಡೆಯಾಗಬೇಕೆನ್ನುವ ಸಂದರ್ಭದಲ್ಲಿ ನಿರ್ದೇಶಕ ನಾಗ್‌ ಹುಣಸೂದ್‌ಗೆ ಟೈಟಲ್‌ ಬದಲಾಯಿಸುವಂತೆ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. 

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ಗಡಿನಾಡಿನಲ್ಲಿ ಎದುರಾಗುವ ಸಂಕಷ್ಟಗಳನ್ನು ಅಲೆ ಅಲೆಯಾಗಿ ತೋರಿಸುತ್ತಿರುವ ನಾಗ್‌ ಅವರಿಗೆ ಮಧ್ಯರಾತ್ರಿ 12ಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಈ ಕರೆಯ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಗಡಿನಾಡು ಚಿತ್ರತಂಡ ನಿರ್ಧರಿಸಿದೆ.

ತಲ್ವಾರ್‌ನಿಂದ ಕೇಕ್ ಕಟ್; ಕ್ಷಮೆಯಾಚಿಸಿದ ದುನಿಯಾ ವಿಜಿ..!

ಗಡಿನಾಡು ಚಿತ್ರದಲ್ಲಿ ಮರಾಠಿ-ಕನ್ನಡಿಗನ ಪ್ರೇಮ ಕಥೆಯಿದೆ. ಚಿತ್ರದ ನಾಯಕ ಪ್ರಭುಸೂರ್ಯ ಹಾಗೂ ನಾಯಕಿಯಾಗಿ ಸಂಚಿತಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಖಳನಾಯಕರು ಇರುವುದು ವಿಶೇಷ. ಚರಣ್‌ ರಾಜ್‌, ಶೋಭರಾಜ್‌, ದೀಪಕ್‌ ಶೆಟ್ಟಿ ಮತ್ತು ರಘುರಾಜು ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.