Asianet Suvarna News Asianet Suvarna News

Ek Love Ya: ಅನಿತಾ ಹಾಡಿನ ಬಗ್ಗೆ ಮತ್ತೊಂದು ಮಾಹಿತಿ ಹಂಚಿಕೊಂಡ ಜೋಗಿ ಪ್ರೇಮ್

ರಾಣಾ ಹಾಗೂ ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ 'ಏಕ್ ಲವ್ ಯಾ' ಚಿತ್ರದ 'ಅನಿತಾ ಅನಿತಾ' ಹಾಡಿನ ಬಿಡುಗಡೆ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Kannada Movie Ek Love Ya Anitha Anitha Song Release on December 11th gvd
Author
Bangalore, First Published Dec 9, 2021, 8:49 PM IST
  • Facebook
  • Twitter
  • Whatsapp

ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ (Raanna) ಅಭಿನಯದ 'ಏಕ್ ಲವ್ ಯಾ' (Ek LOve Ya) ಚಿತ್ರದ 'ಅನಿತಾ ಅನಿತಾ' ಎಂಬ ಸಾಂಗನ್ನು ಡಿಸೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಎ2 ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ ಮುಖಾಂತರ ಬಿಡುಗಡೆ ಮಾಡುವುದಾಗಿ ಜೋಗಿ ಪ್ರೇಮ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಇದೀಗ ಈ ಹಾಡಿನ ಬಿಡುಗಡೆ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ, 'ಗಂಡು ಮೆಟ್ಟಿದ ನಾಡು ಹುಬ್ಬಳ್ಯಾಗ ನಮ್ 'ಏಕ್ ಲವ್ ಯಾ' ನ 4ನೇ ಸಾಂಗ್ ರಿಲೀಸ್ ಮಾಡಕ್ ಡಿಸೆಂಬರ್ 11 ರಂದು ಬರ್ತಾಯಿದೀವ್ರಿ ಯಪ್ಪಾ. 11 ಗಂಟೆಗೆ ಎ2 ಮ್ಯೂಸಿಕ್‌ನಲ್ಲಿ. ನಿಮ್ಮ ಆಶೀರ್ವಾದ ಸದಾ ನಮ್ಯಾಲಿರ್ಲಿ ನಮಸ್ಕಾರ' ಎಂದು ಹುಬ್ಬಳ್ಳಿ ಭಾಷೆಯಲ್ಲಿ ಕ್ಯಾಪ್ಷನ್ ಬರೆದು 'ಅನಿತಾ ಅನಿತಾ' ಹಾಡಿನ ವಿಡಿಯೋ ಝಲಕ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 'ಅನಿತಾ ಅನಿತಾ' ಸಾಂಗ್‌ನ್ನು ಗಾಯಕ ಶಂಕರ್ ಮಹಾದೇವನ್ (shankar mahadevan) ಹಾಡುತ್ತಿರುವುದರ ಜೊತೆಗೆ ಚಿತ್ರದ ನಾಯಕ ರಾಣಾನ ಜೊತೆಗೆ ಜೈಲಿನ ಖೈದಿಗಳು ಅವರ ಹಿಂದೆ ನಿಂತು ಈ ಹಾಡಿಗೆ ಸ್ಟೆಪ್ಸ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ.

Ek Love Ya: ಎಣ್ಣೆ, ಹೆಣ್ಣು, ಲವ್ ಸೆಕ್ಸಲ್ಲೇ ಮುಗಿದೋಯ್ತಲ್ಲಾ ಹಾಡು ರಿಲೀಸ್

ಇತ್ತೀಚೆಗೆ ಜೋಗಿ ಪ್ರೇಮ್ ನೀವೆಲ್ಲರೂ ನಮ್ಮ ಚಿತ್ರದ 'ಯಾರೇ ಯಾರೆ', 'ಹೇಳು ಯಾಕೆ', ಹಾಗೂ 'ಎಣ್ಣೆಗೂ ಹೆಣ್ಣಿಗೂ' ಹಾಡುಗಳನ್ನು ವೀಕ್ಷಿಸಿ ಸೂಪರ್ ಹಿಟ್‌ ಮಾಡಿದ್ದೀರಾ. ಈಗ ನಮ್ಮ ಚಿತ್ರದ 4ನೇ ಹಾಡು 'ಅನಿತಾ ಅನಿತಾ' ಎಂಬ ಸಾಂಗನ್ನು ಎ2 ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ ಮುಖಾಂತರ ಬಿಡುಗಡೆ ಮಾಡುವುದಾಗಿ ಬರೆದುಕೊಂಡು ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಈ ಪೋಸ್ಟರ್‌ನಲ್ಲಿ 'ಪ್ರೀತೀನೇ ದೇವರು ಅಂತ ಹೇಳಿದವರು ಯಾರು? ದೇವರೊಬ್ಬ ಬಿಸಿನೆಸ್‌ಮ್ಯಾನ್ ಕಣೋ!' ಎಂಬ ಬರಹವಿತ್ತು. 'ಏಕ್‌ ಲವ್‌ ಯಾ' ಚಿತ್ರದ 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್‌ ಇಟ್ಟೆ ಭಗವಂತ' ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. 

ತೆಲುಗು ಗಾಯಕಿ ಮಂಗ್ಲಿ (Mangli) ಹಾಗೂ ಕೈಲಾಶ್ ಕೇರ್ (Kailash Kher) ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಈಗ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ಗಂಡು ಮಕ್ಕಳು ಲವ್‌ ಫೇಲ್ಯೂರ್‌ ಆದರೆ, ಬಾರ್‌ಗೆ ಹೋಗಿ ಕುಡಿಯುತ್ತಾರೆ ಎಂಬ ಕಾನ್ಸೆಪ್ಟ್‌ನಲ್ಲಿ ಸಾಕಷ್ಟು ಬ್ರೇಕಪ್‌ ಸಾಂಗ್‌ಗಳು ಬಂದಿವೆ. ಆದರೆ, ಬ್ರೇಕಪ್‌ ಹೆಣ್ಣುಮಕ್ಕಳಿಗೂ ಆಗುತ್ತದೆ. ಹಾಗಾದರೆ ಅವರಿಗೆ ಯಾಕೆ ಒಂದು ಬ್ರೇಕಪ್‌ ಸಾಂಗ್‌ ಇಡಬಾರದು ಎಂದು ಯೋಚಿಸಿದ ಚಿತ್ರತಂಡ ಹೆಣ್ಣು ಮಕ್ಕಳಿಗಾಗಿ ಬ್ರೇಕಪ್‌ ಸಾಂಗ್‌ವೊಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದ ಈ ಹಾಡು ಈಗ ಹಿಟ್‌ಲಿಸ್ಟ್‌ ಸೇರಿದೆ.

'ಅಪ್ಪು ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ': ನಿರ್ದೇಶಕ ಜೋಗಿ ಪ್ರೇಮ್

ಇನ್ನು 'ಏಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ. 2022ರ ಜನವರಿ 21ನೇ ತಾರೀಖಿನಂದು 'ಏಕ್ ಲವ್ ಯಾ' ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
 

 
 
 
 
 
 
 
 
 
 
 
 
 
 
 

A post shared by Prem❣️s (@directorprems)

Follow Us:
Download App:
  • android
  • ios