ಒಂದಕ್ಕಿಂತ ಒಂದು ವಿಭಿನ್ನ ಕಥೆಗಳು, ಪ್ರೀತಿಸಿದವರು ಸದಾ ಪಕ್ಕದಲ್ಲೇ ಇರ್ಬೇಕು, ಬಿಟ್ಟು ಹೋದರೆ ಹೇಗಾದ್ರೂ ಮಾಡಿ ಪಡಯಲೇಬೇಕು ಎಂಬ ತವಕ ಸೃಷ್ಟಿಸುವ ಚಿತ್ರಗಳಿವು. ಹೌದು! ಇದೇ ಲವ್‌ ಮಾಕ್‌ಟೇಲ್‌ ಮತ್ತು ದಿಯಾ ಕ್ರಿಯೇಟ್‌ ಮಾಡಿರುವ ಟ್ರೆಂಡ್‌.

'ಲೈಫ್‌ನಲ್ಲಿ ಹುಡುಗ ಅಂತ ಇದ್ರೆ ದಿಯಾ ಚಿತ್ರದ ಆದಿ ತರ ಇರ್ಬೇಕು, ಹುಡುಗಿ ಸಿಕ್ಕಿದ್ರೆ ಲವ್‌ ಮಾಕ್‌ಟೇಲ್‌ ಚಿತ್ರದ ನಿಧಿ ತರ ಇರ್ಬೇಕು'. ಇದನ್ನು ನಾವ್‌ ಹೇಳ್ತಿಲ್ಲ, ಸಿನಿಮಾ ವೀಕ್ಷಿಸಿ, ಪ್ರೇಕ್ಷಕರೇ ಹೇಳುತ್ತಿದ್ದಾರೆ. ಕಳೆದ ತಿಂಗಳು ಅದ್ದೂರಿಯಾಗಿ ಬಿಡಗಡೆಯಾದ ಈ ಚಿತ್ರಗಳು ಚಿತ್ರಮಂದಿರಗಳಲ್ಲಿ ವಾರವೂ ಉಳಿಯಲಿಲ್ಲ. ಆದರೀಗ ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಿದ್ದೇ ಅಗಿದ್ದು, ಸಿಕ್ಕಾಪಟ್ಟೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿವೆ. ಪ್ರತಿ ಪಾತ್ರಧಾರಿಗಳನ್ನು ಹಾಡಿ ಹೋಗಳುತ್ತಿದ್ದಾರೆ ಓಟಿಟಿಯಲ್ಲಿ (over-the-top media service) ಚಿತ್ರ ನೋಡಿದ ಕನ್ನಡಾಭಿಮಾನಿಗಳು! 

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

ಕಳೆದ ವರ್ಷ ಪ್ರಕಾಶ್‌ ಬೆಳವಾಡಿ ಪುತ್ರಿ ತೇಜು ಬೆಳವಾಡಿ ಅಭಿನಯದ 'ಗಂಟುಮೂಟೆ'ಯೂ ಚಿತ್ರಮಂದಿರಗಳಲ್ಲಿ ಕ್ಲಿಕ್‌ ಆಗದಿದ್ದರೂ ಅಮೇಜಾನ್ ಪ್ರೈಮ್‌ನಲ್ಲಿ ಭರ್ಜರಿ ಮೆಚ್ಚುಗೆ ಪಡೆದುಕೊಂಡಿತ್ತು.  OTT ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಹೊಸ ತಂಡಕ್ಕೆ, ಹೊಸ ಪ್ರತಿಭೆಗಳಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಇನ್ನಷ್ಟು ಅವಕಾಶ ನೀಡಿದಂತಾಗುತ್ತಿವೆ.

ಇದೀಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್‌ಗಳು ಇರುತ್ತವೆ. ಕೈಗೆಟಕುವ ಬೆಲೆಯಲ್ಲಿ ಇಂಟರ್ನೆಟ್ ಸೌಲಭ್ಯವೂ ಸಿಗುತ್ತಿವೆ. ಜೊತೆಗೆ ಚಿತ್ರಮಂದಿರಕ್ಕೆ ಎಡತಾಕಲು ಯಾರಿಗೂ ಟೈಮ್ ಸಹ ಇಲ್ಲ. ಪುರುಸೊತ್ತಿದ್ದಾಗ ಕೈಯಲ್ಲಿಯೇ ಸುಲಭವಾಗಿ ಸಿಗೋ ಮನೋರಂಜನೆಯನ್ನು ಪಡೆಯುತ್ತಾರೆ. ಈ ಕಾರಣಕ್ಕೆ ಇನ್ನು ಒಟಿಟಿಯದ್ದೇ ಕಾರುಬಾರು ಎನ್ನುವುದು ಈ ಟ್ರೆಂಡ್‌ನಿಂದ ಸಾಬೀತಾಗುತ್ತಿದೆ.

ನಟಿ ಮಿಲನ ಕೃಷ್ಣ ಡಾರ್ಲಿಂಗ್, ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಜೋಡಿ ಮದುವೆ