ವೈರಲ್‌ ಆಯ್ತು 'ಬಿಚ್ಚುಗತ್ತಿ' ಟೀಸರ್‌; ಹೈದರಾಬಾದ್‌ನಲ್ಲಿ ನಡೆದ ಗ್ರಾಫಿಕ್ಸ್‌ ಹೇಗಿದೆ ನೋಡಿ!

ಚಂದವನದಲ್ಲೀಗ ಐತಿಹಾಸಿಕ ಸಿನಿಮಾ ಅಂದಾಕ್ಷಣ ನೆನಪಾಗೋದು ಕೋಟೆ ನಾಡು ಚಿತ್ರದುರ್ಗ. ಈಗ ಅಲ್ಲಿನ ಐತಿಹಾಸಿಕ ಕತೆ ಹೇಳಲು ಹರಿ ಸಂತು ನಿರ್ದೇಶನದ ‘ಬಿಚ್ಚುಗತ್ತಿ’ ಸಿನಿಮಾ ರೆಡಿ ಆಗಿದೆ. ಸದ್ಯಕ್ಕೆ ಸಿನಿಮಾ ರಿಲೀಸ್‌ ದಿನಾಂಕ ಇನ್ನು ಫಿಕ್ಸ್‌ ಆಗಿಲ್ಲ.

Kannada movie bicchugatti  hits youtube trending list

ಚಿತ್ರದ ಪ್ರಚಾರಕ್ಕೆ ಮುಂದಾಗಿರುವ ಚಿತ್ರತಂಡವೀಗ ಟೀಸರ್‌ ಲಾಂಚ್‌ ಮಾಡಿದೆ. ಸೋಷಲ್‌ ಮೀಡಿಯಾದಲ್ಲಿ ಟೀಸರ್‌ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದುರ್ಗ ಪಾಳೇಗಾರರ ಪೈಕಿ ಬಿಚ್ಚುಗತ್ತಿ ಭರಮಣ್ಣ ನಾಯಕ ಕುರಿತು ಸಾಹಿಸಿ ಬಿ.ಎಲ್‌. ವೇಣು ಕಾದಂಬರಿ ಆಧರಿಸಿ ಬರುತ್ತಿರುವ ಸಿನಿಮಾ ಇದು. ಸಿನಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ಫೆ. 9ಕ್ಕೆ ಟ್ರೇಲರ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಕನ್ನಡದ ಸ್ಟಾರ್‌ ನಟರೊಬ್ಬರು ಟ್ರೇಲರ್‌ ಲಾಂಚ್‌ ಮಾಡಲಿದ್ದಾರೆನ್ನುವುದು ಚಿತ್ರತಂಡ ಮಾತು.

'ಬಿಚ್ಚುಗತ್ತಿ' ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ನಟ

ಟೀಸರ್‌ನಲ್ಲಿ ಚಿತ್ರದ ಮೇಕಿಂಗ್‌ ಜತೆಗೆ ಕತೆಯ ಸಣ್ಣದೊಂದು ಸ್ಯಾಂಪಲ್‌ ತೋರಿಸಲಾಗಿದೆ. ಯಾವುದಕ್ಕೂ ಕಮ್ಮಿ ಇಲ್ಲದಂತೆ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿರುವುದಕ್ಕೆ ಈ ಟೀಸರ್‌ ಸಾಕ್ಷಿ ಆಗಿದೆ. ಟೀಸರ್‌ಗೆ ಶರತ್‌ ಲೋಹಿತಾಶ್ವ ಧ್ವನಿ ನೀಡಿದ್ದು, ಹುಲಿಯ ಗ್ರಾಫಿಕ್ಸ್‌ ಕೂಡ ಅದ್ಭುತವಾಗಿ ಬಂದಿದೆ. ಹೈದರಾಬಾದ್‌ನ ನಾಗೇಶ್‌ ಹಾಗೂ ತಂಡವು ಚಿತ್ರಕ್ಕೆ ಗ್ರಾಫಿಕ್ಸ್‌ ವರ್ಕ್ ಮಾಡಿದೆ. ಅದರಲ್ಲೂ ಟೈಗರ್‌ ಎಪಿಸೋಡ್‌ ಕುತೂಹಲಕಾರಿಯಂತೆ. ನಾಲ್ಕು ನಿಮಿಷಗಳ ಕಾಲ ಟೈಗರ್‌ ಎಪಿಸೋಡ್‌ ಮೂಡಿಬಂದಿದ್ದು, ಮುದ್ದಣ್ಣ ಸಾಕಿದ ಹುಲಿ ಜೊತೆ ಭರಮಣ್ಣ ಕಾಳಗ ನಡೆಸುವ ಸೀನ್‌ ಚಿತ್ರದ ಹೈಲೈಟ್‌ ಅಂತೆ.

'ಬಿಚ್ಚುಗತ್ತಿ' ಚಿತ್ರೀಕರಣ ವೇಳೆ ಅವಗಢ

ಉಳಿದಂತೆ, ಭರಮಣ್ಣ ಯಾಕೆ ಆ ಟೈಗರ್‌ ಜೊತೆ ಸೆಣೆಸಾಟ ನಡೆಸುತ್ತಾರೆ ಅನ್ನೋದನ್ನು ಚಿತ್ರದಲ್ಲೇ ಕಾಣಬೇಕು ಎಂಬುದು ಚಿತ್ರತಂಡದ ಮಾತು. ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ತಯಾರಾಗಿರುವ ‘ಬಿಚ್ಚುಗತ್ತಿ’ಗೆ ಹಂಸಲೇಖ ಅವರ ಸಂಗೀತವಿದೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್‌ ಸಂಕಲನವಿದೆ. ಟೀಸರ್‌ನಲ್ಲಿ ರಾಜವರ್ಧನ್‌, ಹರಿಪ್ರಿಯಾ, ವಿಲನ್‌ ಪ್ರಭಾಕರ್‌ ಪಾತ್ರಗಳು ಸಾಕಷ್ಟುನಿರೀಕ್ಷೆ ಹುಟ್ಟಿಸಿವೆ.

 

Latest Videos
Follow Us:
Download App:
  • android
  • ios