ಕೊನೆಗೂ ‘ಭೀಮಸೇನ ನಳಮಹಾರಾಜ’ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರೆಯುತ್ತಿದೆ. ಚಿತ್ರೀಕರಣ ಮುಗಿಸಿದರೂ ಬೇರೆ ಬೇರೆ ಕಾರಣಗಳಿಗೆ ಬಿಡುಗಡೆ ಆಗದೆ ಇದ್ದವನ್ನು ಈ ಓಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ತಿಂಗಳಲ್ಲಿ ಅಮೆಜಾನ್‌ ಪ್ರೈಮ್‌ನಲ್ಲಿ ಅರವಿಂದ್‌ ಅಯ್ಯರ್‌ ಹಾಗೂ ಆರೋಹಿ ನಾರಾಯಣ್‌ ಜೋಡಿಯ ‘ಭೀಮಸೇನ ನಳಮಹಾರಾಜ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಪತ್ರಕರ್ತೆಯಾಗಿ ತೆರೆ ಮೇಲೆ ಬರ್ತಿದ್ದಾರೆ ಕೃಷಿ ತಾಪಂಡ..! ಕಿಶೋರ್‌ ಪೊಲೀಸ್‌ ಪಾತ್ರದಲ್ಲಿ

ನಟ ರಕ್ಷಿತ್‌ ಶೆಟ್ಟಿಹಾಗೂ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಜಂಟಿಯಾಗಿ ನಿರ್ಮಾಣ ಮಾಡಿರುವ, ಕಾರ್ತಿಕ್‌ ಸರಗೂರು ನಿರ್ದೇಶನದ ಈ ಚಿತ್ರಕ್ಕೆ 2017ರಲ್ಲೇ ಶೂಟಿಂಗ್‌ ಮುಕ್ತಾಯ ಆಗಿತ್ತು.

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕಾರಣಕ್ಕೆ ಬಿಡುಗಡೆ ತಡ ಮಾಡುತ್ತ ಬಂದವರು ಈಗ ಓಟಿಟಿಯಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. ಅಚ್ಯುತ್‌ ಕುಮಾರ್‌, ಪ್ರಿಯಾಂಕ ತಿಮ್ಮೇಶ್‌, ವಿಜಯ್‌ ಚಂಡೂರು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.