ಕಿಶೋರ್‌ ಹಾಗೂ ನಟಿ ಕೃಷಿ ತಾಪಂಡ ಹೊಸ ಚಿತ್ರವೊಂದಕ್ಕೆ ಜೋಡಿಯಾಗಿ ಸದ್ದಿಲ್ಲದೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದ ಹೆಸರು ‘ಐದು’. ಬೆಂಗಳೂರು ಹಾಗೂ ಮೈಸೂರಿನಲ್ಲಿ ಶೂಟಿಂಗ್‌ ನಡೆಸಿದ್ದು, ಇನ್ನೂ ಮೂರು ದಿನ ಮಾತ್ರ ಚಿತ್ರೀಕರಣ ಬಾಕಿ ಇರುವಾಗ ಅನಿವಾರ್ಯವಾಗಿ ಚಿತ್ರೀಕರಣ ಸ್ಥಗಿತವಾಗಿದೆ.

ಚಿತ್ರದ ಛಾಯಾಗ್ರಾಹಕರಿಗೆ ಕೊರೋನಾ ಪಾಸಿಟಿವ್‌ ಬಂದು ಚಿತ್ರೀಕರಣಕ್ಕೆ ಬ್ರೇಕ್‌ ನೀಡಿದ್ದಾರೆ. ಇದು ಎರಡು ಕಾಲಘಟ್ಟಗಳ ಕತೆ. 80 ಹಾಗೂ 90 ದಶಕದ ನಡುವೆ ನಡೆಯುವ ಕತೆ. ಈ ಹಳೆಯ ಕತೆಯನ್ನು ಮೈಸೂರಿನಲ್ಲಿ ಚಿತ್ರೀಕರಣ ಮಾಡಿದರೆ, ಪ್ರೆಸೆಂಟ್‌ ಕತೆಯನ್ನು ಬೆಂಗಳೂರಿನಲ್ಲಿ ಶೂಟಿಂಗ್‌ ಮಾಡಲಾಗಿದೆ.

ಹೊಸ 'ಸಿನಿ ಮನೆ' ಸೇರುವ ಬಗ್ಗೆ ಅನು ಸಿರಿಮನೆ ಮಾತು..!

ರಿವಾನ್‌ ವಿಕ್ರಮ್‌ ಈ ಚಿತ್ರದ ನಿರ್ದೇಶಕರು. ಈ ಕತೆಯಲ್ಲಿ ಕಿಶೋರ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಕೃಷಿ ತಾಪಂಡ ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಕತೆ ಇವರ ಸುತ್ತಲೇ ಸಾಗುತ್ತದೆ.

‘ಓಟಿಟಿಗೆ ಅಂತಲೇ ಮಾಡುತ್ತಿರುವ ಸಿನಿಮಾ. ಕ್ರೈಮ್‌ ಕತೆಯನ್ನು ಹೊಂದಿದ ಸಿನಿಮಾ. ನಾನು ತುಂಬಾ ದಿನಗಳ ನಂತರ ಒಪ್ಪಿಕೊಂಡಿರುವ ಸಿನಿಮಾ’ ಎನ್ನುತ್ತಾರೆ ನಟಿ ಕೃಷಿ ತಾಪಂಡ.