ಮೇಲೊಬ್ಬ ಮಾಯಾವಿ ಟ್ರೇಲರ್‌ ರಿಲೀಸ್‌ ನವೀನ್‌ ಕೃಷ್ಣ ನಿರ್ದೇಶನದ ಸಿನಿಮಾ ಏ.29ಕ್ಕೆ ಬಿಡುಗಡೆ

ಸಂಚಾರಿ ವಿಜಯ್‌ ನಟನೆಯ ‘ಮೇಲೊಬ್ಬ ಮಾಯಾವಿ’ ಚಿತ್ರದ ಟ್ರೇಲರ್‌ ಅನ್ನು ಶ್ರೀನಗರ ಕಿಟ್ಟಿಬಿಡುಗಡೆ ಮಾಡಿದರು. ಪತ್ರಕರ್ತ ನವೀನ್‌ ಕೃಷ್ಣ ಚೊಚ್ಚಲ ನಿರ್ದೇಶನದ ಈ ಸಿನಿಮಾ ಏ.29ರಂದು ತೆರೆ ಮೇಲೆ ಮೂಡುತ್ತಿದೆ. ಚಕ್ರವರ್ತಿ ಚಂದ್ರಚೂಡ್‌ ಚಿತ್ರದಲ್ಲಿ ವಿಲನ್‌ ಪಾತ್ರ ಮಾಡಿದ್ದಾರೆ.

‘ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಹರಳು ಮಾಫಿಯಾದ ಕುರಿತಾದ ಸಿನಿಮಾ ಇದು. ಸಕ್ಕರೆ, ಇರುವೆ ಹಾಗೂ ಸುಲೇಮಾನ್‌ ಹೀಗೆ ಚಿತ್ರದಲ್ಲಿ ಮೂರು ಪಾತ್ರಗಳು ಬರುತ್ತವೆ. ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆ ಪಾತ್ರದಲ್ಲಿ ಸಂಚಾರಿ ವಿಜಯ… ಹಾಗೂ ಸುಲೇಮಾನ್‌ ಪತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್‌ ಅಭಿನಯಿಸಿದ್ದಾರೆ. ಒಬ್ಬರಿಗಿಂತ ಒಬ್ಬರ ಅಭಿನಯ ಅದ್ಭುತ’ ಎಂದು ನವೀನ್‌ ಕೃಷ್ಣ ಹೇಳಿದರು.

ಆ ಗಾಯಕನಿಗಾಗಿ ಮಿಡಿದ ಈ ಗಾಯಕನ ಹೃದಯ; ಕೇಳಲೇ ಬೇಕು 'ಮೇಲೊಬ್ಬ ಮಾಯಾವಿ'!

ಚಿತ್ರದ ಟ್ರೇಲರ್‌ ನೋಡಿ ಸುದೀಪ್‌ ಚಿತ್ರತಂಡಕ್ಕೆ ಶುಭ ಕೋರಿರುವುದು ಚಿತ್ರತಂಡದ ಉತ್ಸಾಹಕ್ಕೆ ಕಾರಣವಾಗಿದೆ. ಭರತ್‌ ಕುಮಾರ್‌ ಈ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನನ್ಯ ಶೆಟ್ಟಿಆಡಿಷನ್‌ ಮೂಲಕ ನಾಯಕಿಯಾಗಿ ಆಯ್ಕೆ ಆದವರು. ದಕ್ಷಿಣ ಕನ್ನಡದ ಹರಳು ದಂಧೆಯ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿ ಬಂದಿಗೆ. ಈ ಚಿತ್ರಕ್ಕೆ ಸಂಗೀತ ನೀಡಿರುವುದು ಎಲ್‌ ಎನ್‌ ಶಾಸ್ತ್ರಿ. ಇದು ಅವರ ಕೊನೆಯ ಸಿನಿಮಾ. ಅವರ ಪತ್ನಿ ಸುಮಾ ಶಾಸ್ತ್ರಿ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಕೃಷ್ಣಮೂರ್ತಿ ಕವತ್ತಾರ್‌, ಬೆನಕ ನಂಜಪ್ಪ, ಎಂ ಕೆ ಮಠ, ನವೀನ್‌ ಕುಮಾರ್‌ ನಟಿಸಿದ್ದಾರೆ.

YouTube video player

ಡೈಮಂಡ್‌ ಕ್ರಾಸ್‌ ಚಿತ್ರದ ಟ್ರೇಲರ್‌ ಬಿಡುಗಡೆ

ನಾಗತಿಹಳ್ಳಿ ಸಿನಿ ಕ್ರಿಯೇಶನ್ಸ್‌ ನಿರ್ಮಾಣದ ರಾಮ್‌ದೀಪ್‌ ನಿರ್ದೇಶನದ ‘ಡೈಮಂಡ್‌ ಕ್ರಾಸ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಸುದೀಪ್‌ ಮಾತನಾಡಿದರು.

ನಾಗತಿಹಳ್ಳಿ ಚಂದ್ರಶೇಖರ್‌, ‘ಡೈಮಂಡ್‌ ಕ್ರಾಸ್‌ ಚಿತ್ರ ಹೊಸ ಬಗೆಯ ಸಿನಿಮಾ ಪರಂಪರೆಯ ಭಾಗವಾಗಿ ಹೊರಬರುತ್ತಿದೆ. ಆರು ವರ್ಷಗಳ ಕೆಳಗೆ ನಮ್ಮ ಟೆಂಟ್‌ ಸಿನಿಮಾದ ಗ್ಯಾರೇಜ್‌ ಜಾಗದಲ್ಲಿ ಎಸ್‌ಎಲ್‌ವಿ ತಿಂಡಿ ತಿನ್ನುತ್ತಾ ಈ ಸಿನಿಮಾ ಚರ್ಚೆ ಶುರು ಮಾಡಿದ್ದೆವು. ಈಗ ಚಿತ್ರ ಈ ಮಟ್ಟಕ್ಕೆ ಬೆಳೆದು ನಿಂತಿರೋದಕ್ಕೆ ಖುಷಿ ಇದೆ’ ಎಂದರು.

ಚಿತ್ರದ ನಿರ್ದೇಶಕ ರಾಮ್‌ದೀಪ್‌, ‘ಸೈಬರ್‌ ಜಗತ್ತು ಹೇಗೆ ಸಮಾಜದ ಒಳ್ಳೆಯದಕ್ಕೂ ಕೆಟ್ಟದಕ್ಕೂ ಕಾರಣವಾಗುತ್ತದೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು. ರೋಜರ್‌ ನಾರಾಯಣ್‌, ರಜತ್‌ ಅಣ್ಣಪ್ಪ, ರೂಪಿಕಾ ಹಾಗೂ ಮನು ಕೆ ಎಂ ಚಿತ್ರದ ಮುಖ್ಯಪಾತ್ರಗಳಲ್ಲಿದ್ದಾರೆ. ಲೇಖನ್‌ ಸಂಗೀತ, ರಾಮಚಂದ್ರ ಬಾಬು ಅವರ ಕತೆ, ಚಿತ್ರಕತೆ, ಸಂಭಾಷಣೆ, ಸಂತೋಷ್‌ ರಾಧಾಕೃಷ್ಣನ್‌ ಛಾಯಾಗ್ರಹಣ ಚಿತ್ರಕ್ಕಿದೆ.