Asianet Suvarna News Asianet Suvarna News

ಗಂಡು ಮಗುವಿಗೆ ಜನ್ಮ ಕೊಟ್ಟ ಮೇಘನಾ ರಾಜ್!

ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಧರ್ಮಪತ್ನಿ ಮೇಘನಾ ರಾಜ್‌ ಕುಟುಂಬಕ್ಕೆ ಜೂ. ಚಿರಂಜೀವಿ ಸರ್ಜಾನನ್ನು ಬರ ಮಾಡಿಕೊಂಡಿದ್ದಾರೆ.
 

Kannada meghana raj and sarja family welcomes baby boy vcs
Author
Bangalore, First Published Oct 22, 2020, 11:19 AM IST

ಇಡೀ ಕನ್ನಡ ಚಿತ್ರರಂಗ ಹಾಗೂ ಅಪಾರ ಅಭಿಮಾನಿಗಳ ಬಳಗ ಸರ್ಜಾ ಕುಟುಂಬದ ಕುಡಿಯನ್ನು ಬರ ಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

"

ಮೇಘನಾ ದಾಖಲಾಗಿರೋ ಆಸ್ಪತ್ರೆಯ ವಾರ್ಡ್‌ನಲ್ಲಿ ಚಿರು ಪೋಟೋ....! 

ಸುಂದರ್ ರಾಜ್, ಪ್ರಮೀಳಾ , ಪನ್ನಗಾಭರಣ ಹಾಗೂ ಮೇಘನಾ ಸ್ನೇಹಿತರು ಆಸ್ಪತ್ರೆಯ ಬಳಿಯೇ ಇದ್ದು ಮೇಘನಾ ಆರೈಕೆ ಮಾಡಿದ್ದಾರೆ. ವಿಶೇಷ ಏನೆಂದರೆ ಮೇಘನಾ ವಿಶ್ರಾಂತಿ ಪಡೆಯುತ್ತಿರುವ ವಾರ್ಡ್‌ನಲ್ಲಿ ಚಿರಂಜೀವಿ ಜೊತೆಗಿರುವ ಫೋಟೋಗಳನ್ನು ಹಾಕಲಾಗಿದೆ. 

"

ಪುಟ್ಟ ಕಂದಮ್ಮನನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಬೇಕೆಂದು ಧ್ರುವ ಸರ್ಜಾ 10 ಲಕ್ಷ ಬೆಲೆಯ ಬೆಳ್ಳಿ ತೊಟ್ಟಲು ಹಾಗೂ ಚಿನ್ನದ ಬಟ್ಟಲನ್ನು ಖರೀಸಿದ್ದಾರೆ. ಅಣ್ಣನ ಆಸೆಯೆಂತೆ ಬೇಬಿ ಶವರ್ ಹಾಗೂ ಸೀಮಂತ ಆಯೋಜಿಸಿದ್ದರು. 

Kannada meghana raj and sarja family welcomes baby boy vcs

'ಚಿರು, ನಿನ್ನ ಹಾಗೆ ನಮ್ಮ ಮಗುವನ್ನು ಬೆಳೆಸ್ತೀನಿ' ಮೇಘನಾ ಭಾವುಕ ಮಾತು, ವಿಡಿಯೋ ವೈರಲ್ 

ಗಂಡು ಕಂದಮ್ಮನನ್ನು ಬರ ಮಾಡಿಕೊಂಡಿರುವ ಕುಟುಂಬಕ್ಕೆ ಶುಭವಾಗಲಿ. ಮೇಘನಾ ಮುಖದಲ್ಲಿ ಮಂದಹಾಸ ಹೀಗೆ ತುಂಬಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಮಗುವಿಗೆ ಏನೆಂದು ಹೆಸರಿಡಬೇಕು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಏನೇ ಇರಲಿ ಮಗನನ್ನು ಚಿರಂಜೀವಿ ದೊಡ್ಡ ಹೆಸರು ಮಾಡಿದಂತೆ ದೊಡ್ಡ ವ್ಯಕ್ತಿಯಾಗಿ ಬೆಳೆಸುವುದಾಗಿ ಮೇಘನಾ ಮಾತು ನೀಡಿದ್ದಾರೆ.

ಮತ್ತೊಂದು ವಿಶೇಷವೇನೆಂದು ಇಂದು ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಮಾಡಿಕೊಂಡ ದಿನ. ಅಲ್ಲದೇ ಇದೇ ತಿಂಗಳು ಚಿರಂಜೀವಿಯ ಹುಟ್ಟುಹಬ್ಬವೂ ಇತ್ತು. ಒಟ್ಟಿನಲ್ಲಿ ಸರ್ಜಾ ಕುಟುಂಬದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಸಂಭ್ರಮವೋ ಸಂಭ್ರಮ. ಆದರೆ, ಆ ಸಂಭ್ರಮದಲ್ಲಿ ಚಿರುವಿಲ್ಲ ಎಂಬ ನೋವು ಮಾತ್ರ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ.

 

Follow Us:
Download App:
  • android
  • ios