Asianet Suvarna News Asianet Suvarna News

ಮೇಘನಾ ದಾಖಲಾಗಿರೋ ಆಸ್ಪತ್ರೆಯ ವಾರ್ಡ್‌ನಲ್ಲಿ ಚಿರು ಪೋಟೋ....!

 ದಿವಂಗತ ನಟ ಚಿರು ಸರ್ಜಾ ಪತ್ನಿ ಮೇಘನಾ ಹೆರಿಗೆಗಾಗಿ ಅಡ್ಮಿಟ್ ಆಗಿರುವ ಅಕ್ಷ ಆಸ್ಪತ್ರೆಯ ವಾರ್ಡ್​ನಲ್ಲಿ ಚಿರು ಫೋಟೋವನ್ನ ನೇತುಹಾಕಲಾಗಿದೆ.

Chiru Photo In meghana raj Hospital Ward rbj
Author
Bengaluru, First Published Oct 21, 2020, 11:05 PM IST

ನಟಿ ಮೇಘನಾ ರಾಜ್ ಸರ್ಜಾ ಅವರು ಶೀಘ್ರದಲ್ಲೇ ತಾಯಿ ಆಗಲಿದ್ದಾರೆ. ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾರೆ. ಇಡೀ ಸರ್ಜಾ ಕುಟುಂಬ ಮಗುವಿನ ಆಗಮನಕ್ಕಾಗಿ ಕಾದಿದೆ. ಆ ಮಗುವಿನ ರೂಪದಲ್ಲಿ ಮತ್ತೆ ಚಿರಂಜೀವಿ ಸರ್ಜಾ ಅವರನ್ನು ಕಾಣುವ ಆಸೆಯನ್ನು ಅವರ ಕುಟುಂಬ, ಅಭಿಮಾನಿಗಳು ಹೊಂದಿದ್ದಾರೆ. 

ಈ ಹಿನ್ನೆಲೆಯಲ್ಲಿ ಮೇಘನಾ ಅವರು ಡೆಲಿವರಿಗಾಗಿ ಕೆ.ಆರ್ ರಸ್ತೆಯ ಅಕ್ಷ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ವಿಶೇಷ ಅಂದ್ರೆ ಮೇಘಣಾ ಇರೋ ವಾರ್ಡ್‌ನಲ್ಲಿ ಚಿರು ಫೋಟೋ ಹಾಕಿಕೊಂಡಿದ್ದಾರೆ. 

ಚಿರು-ಮೇಘನಾ ಕಂದನಿಗಾಗಿ ಮನೆಗೆ ಬಂತು ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು

ಕಳೆದ ಮೂರು ತಿಂಗಳಿಂದ ಈ ವಾರ್ಡ್ ಅನ್ನು ಮೇಘನಾಗಾಗಿ ಆಸ್ಪತ್ರೆ ರಿಸರ್ವ್ ಮಾಡಿದ್ದು ಮನೆಯಂತೆ ಆಸ್ಪತ್ರೆ ವಾರ್ಡ್ ಅನ್ನು ಅಕ್ಷ ಆಸ್ಪತ್ರೆಯ ಸಿಬ್ಬಂದಿ ಮನೆಯಂತೆ ರೆಡಿ ಮಾಡಿದ್ದಾರೆ. 

ಚಿರು ಅಗಲಿಕೆ ನಂತರ ಪ್ರತಿಕ್ಷಣ ಚಿರು ನೆನಪಲ್ಲೇ ಇರುವ ಮೇಘನಾ ಸೀಮಂತದ ವೇಳೆಯೂ ತಮ್ಮ ಪಕ್ಕದಲ್ಲಿ ಚಿರು ಕಟೌಟ್​ ನಿಲ್ಲಿಸಿಕೊಂಡಿದ್ದರು. ಚಿರು ಅಗಲಿಕೆ ನಂತರವೂ ಕುಟುಂಬದವರು ಪ್ರತಿಯೊಂದನ್ನೂ ಚಿರು ಆಸೆಯಂತೆಯೇ ನಡೆಸುತ್ತಿದ್ದಾರೆ.

Follow Us:
Download App:
  • android
  • ios