ಕೊರೋನಾ ವೈರಸ್‌ ಮತ್ತು ಹಲವು ಆರೋಗ್ಯ ಸಮಸ್ಯೆಯಿಂದ ನಿಧನರಾದ ನಿರ್ದೇಶಕ ಪ್ರದೀಪ್ ರಾಜ್. 

ಇಡೀ ಕನ್ನಡ ಚಿತ್ರರಂಗದಲ್ಲಿ ಹಳ್ಳಿ ಕಥೆ ಹಾಗೂ ಮುದ್ದಾದ ಲವ್‌ ಸ್ಟೋರಿ (Love story) ಕೊಟ್ಟ ನಿರ್ದೇಶಕ ಪ್ರದೀಪ್ ರಾಜ್‌ (Pradeep Raj) ಜನವರಿ 20ರಂದು ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಖ್ಯಾತ ನಿರ್ದೆಶಕರು ಹಲವು ತಿಂಗಳಿನಿಂದ ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೊರೋನಾ ವೈರಸ್‌ಗೆ (Covid19) ಬಲಿಯಾಗಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊನೆ ಉಸಿರೆಳೆದಿದ್ದಾರೆ. 

Add Asianetnews Kannada as a Preferred SourcegooglePreferred

ಪಾಂಡಿಚೇರಿಯ (Puducherry) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಪ್ರದೀಪ್ ಅವರ ಅಂತ್ಯಕ್ರಿಯೆಯನ್ನು ಪಾಂಡಿಚೇರಿಯಲ್ಲಿಯೇ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. 'ಪ್ರದೀಪ್ ರಾಜ್‌ ಅವರು 15 ವರ್ಷಗಳಿಂದಲೂ ಮಧುಮೇಹದಿಂದ (Diabetes) ಬಳಲುತ್ತಿದ್ದರು. ಈಚಿಗೆ ಅವರಿಗೆ ಕೊರೋನಾ ಸೋಂಕು ಕೂಡ ತಗುಲಿತ್ತು. ಆದರಿಂದ ಅವರು ಸಾವನ್ನಪ್ಪಿದ್ದರು,' ಎಂದು ಪ್ರದೀಪ್ ರಾಜ್ ಸಹೋದರ ಪ್ರಶಾಂತ್ ರಾಜ್‌ ಮಾಧ್ಯಮ ಸ್ನೇಹಿತರಿಗೆ ತಿಳಿಸಿದ್ದಾರೆ. 

ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಮಧುಮೇಹದಿಂದ ಬಳಲುತ್ತಿದ್ದ ಪ್ರದೀಪ್ ರಾಜ್‌ ಅವರಿಗೆ 6 ತಿಂಗಳ ಹಿಂದೊಯೂ ಕೊರೋನಾ ವೈರಸ್ ತಗುಲಿತ್ತು. ಆದರೆ ಕುಟುಂಸ್ಥರೇ ಕೊರೋನಾದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಕಾರಣ, ಮತ್ತೆ ಸೋಂಕು ತಗುಲಿರಬಹುದು ಎನ್ನಲಾಗಿದೆ. ಪ್ರದೀಪ್ ರಾಜ್‌ ಅವರಿಗೆ ಲೀವರ್‌ ಸಂಪೂರ್ಣವಾಗಿ ಹಾನಿಯಾಗಿತ್ತು ಎನ್ನಲಾಗಿದೆ. 

'ನನ್ನಮ್ಮ ಸೂಪರ್ ಸ್ಟಾರ್' Samanvi ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ!

ಯಶ್ ಕಿರಾತಕ (Kirataka), ಗಣೇಶ್ (Ganesh) ಮಿ. 420, ದುನಿಯಾ ವಿಜಯ್ (Duniya Vijay) ರಜನಿಕಾಂತ, ಸತೀಶ್ ನೀನಾಸಂ ಅಂಜದ ಗಂಡು, ಬೆಂಗಳೂರು -23 ಮತ್ತು ಕಿಚ್ಚ ಸುದೀಪ್ (Kiccha Sudeep) ಅವರ ಕಿಚ್ಚ ಸಿನಿಮಾವನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದಾರೆ.