ಲಾಕ್‌ಡೌನ್‌ ಸಡಿಲಿಕೆ ನಂತರ ಮೊದಲು ಚಿತ್ರೀಕರಣ ಪ್ರಾರಂಭಿಸಿದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹೈದರಾಬಾದ್‌ನಲ್ಲಿ ಹಾಕಲಾಗಿದ್ದ ದುಬಾರಿ ಕಾಡಿನ ಸೆಟ್‌ನಲ್ಲಿ 'ಗುಮ್ಮ ಬಂತು ಗುಮ್ಮ' ದೃಶ್ಯ ಚಿತ್ರೀಕರಣ ನಡೆಸಿದ್ದರು. ಆ ನಂತರ ಅನೇಕ ಜಾಹಿರಾತುಗಳ ಕಾಣಿಸಿಕೊಂಡರು, ಅದರಲ್ಲಿ ಒಂದು ಫೋಟೋ ಮಾತ್ರ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. 

ಸುದೀಪ್‌- ಇಂದ್ರಜಿತ್‌ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ! 

ವಯಸ್ಸಾದ ಮುದುಕ:
ಲಾಕ್‌ಡೌನ್‌ನಿಂದ ಜನರು ಆನ್‌ಲೈನ್‌ ಮೂಲಕ ವ್ಯವಹಾರಿಸುವುದು ಹೆಚ್ಚಾಗಿದೆ. ಆರ್ಥಿಕ ಪರಿಸ್ಥಿತಿ ಸಹಜಕ್ಕೆ ಬಂದ ನಂತರ ಮಾರ್ಕೆಟಿಂಗ್ ಪ್ಲಾನ್‌ಗಳು, ಜಾಹಿರಾತುಗಳು ಹೆಚ್ಚಾಗಿರುವುದು ಹೌದು. ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್ ಸೇರಿ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಕಾಣಿಸಿಕೊಂಡಂತ ಖ್ಯಾತ ಇ-ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಜಾಹಿರಾತಿನಲ್ಲಿ ಕಿಚ್ಚ ಸುದೀಪ್‌ ವಯಸ್ಸಾದ ಹಾಗೂ ಯಂಗ್ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಈ ಜಾಹಿರಾತಿನಲ್ಲಿ ಕಿಚ್ಚನನ್ನು ನೋಡಿ ಜನರು ಸ್ವಾತಿ ಮುತ್ತು ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

'ಸರ್ ನೀವು ಏನೇ ಮಾಡಿದ್ದರೂ ತುಂಬಾ ಡಿಫರೆಂಟ್',' ಏನು ಕೊಳ್ಳದಿದ್ದರೂ ನಿಮ್ಮನ್ನು ನೋಡಲು ವಿಡಿಯೋ ಕ್ಲಿಕ್ ಮಾಡುತ್ತೇವೆ,' ಎಂದು ನೆಟ್ಟಿಗರು ತಮ್ಮ ಪ್ರೀತಿ, ವಿಶ್ವಾಸವನ್ನು ಕಿಚ್ಚನ ಮೇಲೆ ತೋರಿಸಿದ್ದಾರೆ.

"

2003ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಸ್ವಾತಿ ಮುತ್ತು'. ರಾಜೇಂದ್ರ ಬಾಬು ನಿರ್ದೇಶನ ಈ ಚಿತ್ರದಲ್ಲಿ ಸುದೀಪ್, ಮೀನಾ ಹಾಗೂ ಕೃಷ್ಣ ಶ್ರೀಕಾಂತ್ ಅಭಿನಯಿಸಿದರು. ರಾಜೇಶ್‌ ರಾಮ್‌ನಾಥ್‌ ನೇತೃತ್ವದಲ್ಲಿ ಮೂಡಿ ಬಂದ ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದ್ದವರು ಸುದೀಪ್‌ ಹಾಗೂ ಮೀನಾ ಇಬ್ಬರೂ ಈ ಚಿತ್ರಕ್ಕೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದುಕೊಂಡರು.

2020ರ ಮತ್ತೊಂದು ಸ್ಯಾಡ್ ನ್ಯೂಸ್, ಈ ವರ್ಷ ಬಿಗ್‌ಬಾಸ್ ಇರಲ್ಲ!

ಚಿತ್ರರಂಗ ಹಾಗೂ ಬಿಗ್‌ಬಾಸ್‌ನಂಥ ಖ್ಯಾತ ರಿಯಾಲಿಟಿ ಶೋ ನಿರೂಪಿಸುವ ಹೊರತಾಗಿ Kichcha Sudeep ಹಲವು ಜಾಹಿರಾತಿಗಳಲ್ಲಿ ಕಾಣಿಸುಕೊಳ್ಳುತ್ತಿದ್ದು, ಕನ್ನಡದಲ್ಲಿ ಹಲವು ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿ ಹೆಚ್ಚು ಸಂಭಾವನೆ ಪಡೆಯುವ ನಟನೂ ಹೌದು.

"