Asianet Suvarna News Asianet Suvarna News

2020ರ ಮತ್ತೊಂದು ಸ್ಯಾಡ್ ನ್ಯೂಸ್, ಈ ವರ್ಷ ಬಿಗ್‌ಬಾಸ್ ಇರಲ್ಲ!

ಪ್ರೇಕ್ಷಕರೇ ಗಮನಿಸಿ, ನಿಮ್ಮ ನೆಚ್ಚಿನ ಬಿಗ್‌ಬಾಸ್ ರಿಯಾಲಿಟಿ ಶೋ ಈ ವರ್ಷ ಪ್ರಸಾರವಾಗಲ್ಲ! ಕಿರುತೆರೆಯಲ್ಲಿ ವಾರಾಂತ್ಯಕ್ಕೆ ಸುದೀಪ್‌ರನ್ನು ನೋಡಲು ಇನ್ನೇನಿದ್ದರು ಮುಂದಿನ ವರ್ಷದ ತನಕ ಕಾಯಬೇಕು.

Kannada  2020 reality show bigg boss season 8 goes off air
Author
Bangalore, First Published Sep 11, 2020, 1:07 PM IST
  • Facebook
  • Twitter
  • Whatsapp

 ಹೀಗೊಂದು ಸುದ್ದಿ ಕಿರುತೆರೆಯಿಂದ ಕೇಳಿ ಬರುತ್ತಿದೆ. 2020ರಲ್ಲಿ ಬೇಸರದ ಸುದ್ದಿಗಳೇ ಕೇಳಿಬರುತ್ತಿರುವ ಹೊತ್ತಿನಲ್ಲಿ ಬಿಗ್‌ಬಾಸ್ ಕೂಡ ಇಲ್ಲ ಎನ್ನುವ ಸಂಗತಿ ಕಿರುತೆರೆ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ಉಂಟುಮಾಡುವುದರಲ್ಲಿ ಅಚ್ಚರಿ ಇಲ್ಲ. ಜನ ಎಷ್ಟೇ ಮೆಚ್ಚಿಕೊಂಡರೂ ಬೈದುಕೊಂಡರೂ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಕುತೂಹಲವಂತೂ ಇದ್ದೇ ಇತ್ತು. ಅವರು ಹೋದರಂತೆ, ಇವರು ಜಗಳಾಡಿದರಂತೆ ಎಂಬ ಚರ್ಚೆಗಳು ಸಾಮಾನ್ಯವಾಗಿದ್ದವು. ಆದರೆ ಬಿಗ್‌ಬಾಸ್ ಕೊರೋನಾಗೆ ಶರಣಾಗಿದೆ. ಮೂಲಗಳ ಪ್ರಕಾರ ಈ ವರ್ಷ ಬಿಗ್‌ಬಾಸ್ ಪ್ರಸಾರವಾಗುವುದಿಲ್ಲ.

ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂದ ಬಿಗ್ ಬಾಸ್ ಸ್ಪರ್ಧಿ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಬಿಗ್‌ಬಾಸ್ ರಿಯಾಲಿಟಿ ಶೋ ಆರಂ‘ವಾಗುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಿನಿಂದಲೇ ಬಿಗ್‌ಬಾಸ್ ಸೀಸನ್ ೮ ಆರಂ‘ವಾಗಬೇಕಿತ್ತು. ಆದರೆ, ಈಗ ಬಂದಿರುವ ಮಾಹಿತಿ ಪ್ರಕಾರ ಈ ವರ್ಷ ಕನ್ನಡದಲ್ಲಿ ಬಿಗ್‌ಬಾಸ್ ಶೋ ಇರಲ್ಲ. ಹೆಚ್ಚು ಕಮ್ಮಿ ಆರು ತಿಂಗಳು ತಡವಾಗಿ ಬರಲಿದೆ. ಅಲ್ಲಿಗೆ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ  ಬಿಗ್‌ಬಾಸ್ ನೋಡುವ ಬಾಗ್ಯ ಕಿರುತೆರೆ ಪ್ರೇಕ್ಷಕರಿಗೆ ಸಿಗಲಿದೆ.

ಸುದೀಪ್ ನಿರೂಪಣೆಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಜನಪ್ರೀತಿ ಗಳಿಸಿಕೊಂಡಿದ್ದು ಇತಿಹಾಸ. ಅದೇ ಜನಪ್ರೀತಿಯಿಂದಲೇ ಅನೇಕ ಸೀಸನ್‌ಗಳು ಪ್ರಸಾರವಾಗಿವೆ. ಮುಂದಿನ ಸೀಸನ್‌ಗಾಗಿ ಕಾಯುತ್ತಿರುವ ವೇಳೆಯಲ್ಲಿ ಈ ಸುದ್ದಿ ಹೊರಬಿದ್ದಿದೆ. ಆದರೆ ತೆಲುಗಿನಲ್ಲಿ ಬಿಗ್‌ಬಾಗ್‌ಸ ಕಾರ್ಯಕ್ರಮ ಪ್ರಸಾರ ಆರಂ‘ವಾಗಿದೆ. ಅಲ್ಲಿ ನಾಗಾರ್ಜುನ ನಿರೂಪಣೆಯ ಹೊಣೆ ಹೊತ್ತುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್‌ ಮುಟ್ಟಿದ ನಿವೇದಿತಾ ಗೌಡ! 

Follow Us:
Download App:
  • android
  • ios