ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್‌ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಸಕ್ರಿಯರಾಗಿರುತ್ತಾರೆ. ತಮ್ಮ ಜೀವನದ ಅದ್ಭುತ ಕ್ಷಣಗಳನ್ನು ನೆಟ್ಟಿಗರ ಜತೆ ಹಂಚಿಕೊಂಡು ಅಭಿಮಾನಿಗಳ ನೋವಿಗೆ ಸ್ಪಂದಿಸುತ್ತಾರೆ. ನಟನಾಗಿ ಮಾತ್ರವಲ್ಲದೆ ಅವರು ಮಾಡುವ  ಮಾನವೀಯ ಮೌಲ್ಯವುಳ್ಳ  ಕೆಲಸಗಳನ್ನು  ಜನರು ಮೆಚ್ಚಿಕೊಂಡಿದ್ದಾರೆ.

ಚಿರು ಬಗ್ಗೆ ಮೇಘನಾ ಹೇಳಿದ ಮಾತು ಕೇಳಿ ಕಣ್ಣೀರಿಟ್ಟ ನಟ ಜಗ್ಗೇಶ್!

ಫಾದರ್ಸ್‌ ಡೇ ಪೋಸ್ಟ್‌:

ಅಭಿಮಾನಿಗಳಿಗೆ ಜಗ್ಗಣ್ಣ  ತಾಯಿಯ ಮುದ್ದಿನ ಮಗ ಎಂದು ತಿಳಿದಿರುವ ವಿಚಾರವೇ,  ಹೌದು! ತನ್ನ ತಾಯಿಯನ್ನು ನೆನೆಯದೆ ಜಗ್ಗೇಶ್ ಅವರು ಒಂದು ದಿನವೂ ಕಳೆದಿದ್ದಿಲ್ಲ.  ಅಷ್ಟೇ ಅಲ್ಲ ಆ ಮಹಾ ತಾಯಿ ತನ್ನೊಟ್ಟಿಗೆ ಸದಾ ಇರುತ್ತಾರೆ ಎಂಬ ನಂಬಿಕೆಯಿಂದ  ತಾಳಿಯನ್ನು ತಮ್ಮ ಕತ್ತಿನಲ್ಲಿರುವ ಚಿನ್ನದ ಸರಕ್ಕೆ ಧರಿಸಿದ್ದಾರೆ . 

ಇದೀಗ ಅಪ್ಪಂದಿರ ದಿನದಂದು ತಂದೆ ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. 'ಅಪ್ಪ ಸಾಯುವ ಕೆಲದಿನದ ಹಿಂದೆ ಅವರಿಗೆ ಸ್ನಾನ , ಪೂಜೆ ಮಾಡಿಸಿದ ನಂತರ ನಾನು ತೆಗೆದ ವಿಡಿಯೋ! ಇದರಲ್ಲಿ ಅಮ್ಮ ಕಾರಿನ  ಬಳಿ ನಿಂತು ಅಪ್ಪನ ಕರೆದಳು ಎನ್ನುತ್ತಾರೆ! ಆಗ ಭ್ರಮೆ ಅನ್ನಿಸಿತು ಅವರು ಹೇಳಿದಂತೆ ತಿಂಗಳಲ್ಲಿ ತೀರಿಕೊಂಡರು. ನನ್ನ ಯೌವ್ವನದಲ್ಲಿ ನೆತ್ತಿಮೇಲಿನ ಸೂರ್ಯನಂತೆ ಇದ್ದವ ಸಾವು ಸಮೀಪಿಸಿದಾಗ ಹುಣ್ಣಿಮೆ ಚಂದ್ರನಂತಾದ ಅಪ್ಪ! I miss you' ಎಂದು ಟ್ಟೀಟ್ ಮಾಡಿದ್ದಾರೆ.

 

ಜಗ್ಗೇಶ್ ಅವರು ಹಳೆ ಪೋಟೋಗಳು ಅಥವಾ ಮಧುರ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳ ಜೊತೆ  ಶೇರ್ ಮಾಡುತ್ತಲೇ  ಇರುತ್ತಾರೆ. ' 2010ರ  ಚಿತ್ರವೊಂದನ್ನು ಶೇರ್ ಮಾಡಿರುವ ಇವರು ಇವರಿಬ್ಬರು  ನನ್ನಂತೆ ಸ್ವಾಭಿಮಾನಿಗಳು. ನಾನು ಅಪ್ಪನಿಗೆ ಸಹಾಯ ಕೇಳಲಿಲ್ಲಾ! ನನ್ನ ಮಕ್ಕಳು ನನ್ನ ಬಳಿ ಸಹಾಯ ಕೇಳದೆ ತಕ್ಕಮಟ್ಟಿಗೆ ಅವರ ಕಾಲಮೇಲೆ ನಿಂತರು. ನಮ್ಮ ವಂಶದಲ್ಲಿ  ತಾತನಿಂದ ಮಕ್ಕಳವರೆಗು ಒಂದು ತರಹ ಕೆಟ್ಟ ಸ್ವಾಭಿಮಾನಿ ಗುಣ!' ಎಂದು ಪೋಟೋಗೆ ಪತ್ರಿಕ್ರಿಯಿಸಿದ್ದಾರೆ.