Asianet Suvarna News Asianet Suvarna News

ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಹಾರರ್ ಚಿತ್ರ 'ಸೆಕ್ಟರ್ 7'!

ಸಂಜೀವ್ ಗವಂಡಿ ನಿರ್ದೇಶನದ ಈ ಚಿತ್ರಕ್ಕೆ ಶ್ರೀ ಮುನೇಶ್ವರ ದೇವಸ್ಥಾನದಲ್ಲಿ ಚಾಲನೆ. ಸೆಕ್ಟರ್ 7 ಹೆಸರು ಯಾಕೆ?

Kannada horror film Sector 7 shooting in Bengaluru Ooty vcs
Author
First Published Apr 17, 2023, 12:17 PM IST | Last Updated Apr 17, 2023, 12:40 PM IST

ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚಾಗಿ ಗೆಲುತ್ತಿದೆ‌. ಅಂತಹ ವಿಭಿನ್ನ ಹಾಗೂ ನೈಜಘಟನೆ ಆಧಾರಿತ 'ಸೆಕ್ಟರ್ 7' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಉಲ್ಲಾಳದ ಶ್ರೀಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕೃಷ್ಣರಾಜೇ ಅರಸ್ ಆರಂಭ ಫಲಕ ತೋರಿದರು. ಶ್ರೀಕಾಂತ್ ರಾಜೇ ಅರಸ್ ಕ್ಯಾಮೆರಾ ಚಾಲನೆ ಮಾಡಿದರು. ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ.

ನೈಜಘಟನೆ ಆಧಾರಿತ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಂಜೀವ್ ಗವಂಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜೀವ್ ಗವಂಡಿ ಅವರೆ ಬರೆದಿದ್ದಾರೆ. "ಮಂಗಾಟ" ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದ ಸಂಜೀವ್ ಅವರಿಗೆ "ಸೆಕ್ಟರ್ 7" ಐದನೇ ನಿರ್ದೇಶನದ ಚಿತ್ರ.  ಎಂ.ಎಸ್ ಮೂವೀಸ್ ಲಾಂಛನದಲ್ಲಿ ಮಂಜುಳ ಅರಸ್ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ವಿನು ಮನಸ್ಸು ಸಂಗೀತ ನೀಡುತ್ತಿದ್ದಾರೆ. ವೀರೇಶ್ (ಎನ್ ಟಿ ಎ) ಛಾಯಾಗ್ರಹಣ, ಆದಿ ಆದರ್ಶ(ಬಾಂಬೆ) ಸಂಕಲನ ಹಾಗೂ ವಿ.ನಾಗೇಶ್ ಅವರ ನೃತ್ಯ ನಿರ್ದೇಶನ "ಸೆಕ್ಟರ್ 7" ಚಿತ್ರಕ್ಕಿದೆ. 

ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಸೆಟ್‌ನಲ್ಲಿ ನಾನ್‌ವೆಜ್ ಇಲ್ಲವೇ ಇಲ್ಲ; ಮಡಿವಂತಿಕೆ ಮಾಡಿದ್ದು ಯಾಕೆಂದು ಹೇಳಿದ ರವಿಶಂಕರ್

ನೂತನ ಪ್ರತಿಭೆ ಸುನೀಲ್ ಕುಮಾರ್ ಈ ಚಿತ್ರದ ನಾಯಕ. ಐಶ್ವರ್ಯ ನಾಯಕಿ. ನಿರ್ಮಾಪಕಿ ಮಂಜುಳ ಅರಸ್ ಅವರು ಸಹ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ನೇಹ, ನಾಗರಾಜು, ಹನುಮಂತೇ ಗೌಡ, ಗಿರೀಶ್ ಜತ್ತಿ, ಹೇಮಾ, ವಿನೋದ್ ಗೊಬ್ಬರಗಾಲ, ಚೇತನ್, ಮೈಕೋ ಶಿವಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Latest Videos
Follow Us:
Download App:
  • android
  • ios