ನಟಿ ಹಿತಾ ಚಂದ್ರಶೇಖರ್‌ ಮತ್ತು ಕಿರಣ್ ಶ್ರೀನಿವಾಸ್‌ ಕುಟುಂಬಕ್ಕೆ ಹೊಸ ಅತಿಥಿ ಆಗಮನ. ಖುಷಿ ವಿಷಯವನ್ನು ಶೇರ್ ಮಾಡಿಕೊಂಡಿರುವ  ಫ್ಯಾಮಿಲಿ ಫೋಟೋ ವೈರಲ್.. 

'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 3' ರಿಯಾಲಿಟಿ ಶೋ ಮೂಲಕ ಕಲರ್‌ಫುಲ್‌ ಜರ್ನಿ ಆರಂಭಿಸಿದ ನಟಿ ಹಿತಾ ಚಂದ್ರಶೇಖರ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪತಿಯೊಟ್ಟಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಈಗ ಅವರ ಕುಟುಂಬಕ್ಕೆ ಪುಟ್ಟ ಅತಿಥಿ ಆಗಮನವಾಗಿದೆ.

ಲಾಕ್‌ಡೌನ್‌ನಲ್ಲಿ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಇಷ್ಟೊಂದು ಸಣ್ಣ ಆಗೋದ್ರಾ?

ಲಿಟಲ್‌ ಗೆಸ್ಟ್‌:

ಹೌದು! ಹಿತಾ ಮತ್ತು ಕಿರಣ್‌ ನಾಯಿ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ.ಅದಕ್ಕೆ 'ಗೋಲಿ ಎಂಬ ಹೆಸರಿಟ್ಟಿದ್ದು ಆಕೆಗೆ ನಾಚಿಕೆ ಜಾಸ್ತಿ ಆಹಾರವನ್ನು ತುಂಬಾ ಇಷ್ಟ ಪಡುತ್ತಾಳೆ. ಮನೆಯಲ್ಲಿ ಎಲ್ಲಾ ಕಡೆ ಸುಸು ಮಾಡುತ್ತಾಳೆ, ತುಂಬಾ ಮಲಗುತ್ತಾಳೆ. ಭಾಗಶಃ ಕುರುಡಿಯಾಗಿದ್ದು ನಾವು ಕಣ್ಣಿಗೆ ಡ್ರಾಪ್ಸ್‌ ಹಾಕುವುದು ಇಷ್ಟವಿಲ್ಲ ಆದರೆ ತಿನ್ನಲು ಏನಾದರೂ ಸಿಗುತ್ತದೆ ಎಂದು ಹಾಕಿಸಿಕೊಳ್ಳುತ್ತಾಳೆ' ಎಂದು ಕಿರಣ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

View post on Instagram

ಇದೇ ಗೌರಿ ಗಣೇಶದ ಹಬ್ಬದ ದಿನ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದರು. 'ನಮ್ಮ ಕುಟುಂಬದಿಂದ ನಿಮ್ಮ ಕುಟುಂಬದವರಿಗೆ ಹಬ್ಬದ ಶುಭಾಶಯಗಳು' ಎಂದು ಬರೆದಿದ್ದಾರೆ. ಕಿರಣ್‌ ಮತ್ತು ಹಿತಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗೋಲಿ ಜೊತೆ ಆಟವಾಡುವ ವಿಡಿಯೋವನ್ನು ಶೇರ್ ಮಾಡುತ್ತಲ್ಲೇ ಇರುತ್ತಾರೆ.

ಸಿಹಿ-ಕಹಿ ಚಂದ್ರು ಕಿರಿಯ ಪುತ್ರಿ 'ಖುಷಿ' ಹೀಗಿದ್ದಾರೆ ನೋಡಿ!

View post on Instagram