ಕನ್ನಡದ ನಟಿ ಹಂಸ ನಂದಿನಿಗೆ ಸ್ತನದ ಕ್ಯಾನ್ಸರ್, 16 ಕೀಮೋಥೆರಪಿ ಪಡೆದಿರುವ ನಟಿ ಹೀಗಿದ್ದಾರೆ.....
'ಮೋಹಿನಿ 9886788888' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಕಾಲಿಟ್ಟ ತೆಲುಗು ನಟಿ ಹಂಸ ನಂದಿನಿ (Hamsa Nandini) ಕಳೆದ ವರ್ಷ ತಮಗೆ ಸ್ತನದ ಕ್ಯಾನ್ಸರ್ (Breast Cancer) ಇರುವುದಾಗಿ ಹೇಳಿಕೊಂಡಿದ್ದರು. ನಟಿ ಬರೆದ ಭಾವುಕ ಪತ್ರ ನೋಡಿ ಸಿನಿ ಸ್ನೇಹಿತರು ಮಾತ್ರವಲ್ಲದೇ ಅಭಿಮಾನಿಗಳು ಕೂಡ ಕಣ್ಣೀರಿಟ್ಟರು. ದಿನ ಕಳೆಯುತ್ತಿದ್ದಂತೆ, ಗಟ್ಟಿಗಿತ್ತಿ ಆದ ನಟಿ ಈಗ 16 ಕೀಮೋಥೆರಪಿ (chemotherapy) ಮುಗಿಸಿದ್ದಾರೆ. ತಮ್ಮ ತಲೆ ಕೂದಲು ಶೇವ್ ಮಾಡಿಸಿರುವ ಫೋಟೋಶೂಟ್ ಹಂಚಿ ಕೊಂಡಿದ್ದಾರೆ.
'ಕೊನೆಗೂ 16 ಕೀಮೋಥೆರಪಿ ಮುಗಿಸಿರುವೆ. ಈಗ ನಾನು ಆಫೀಶಿಯಲಿ ಕೀಮೋ ಸರ್ವೈವರ್. ಅದರೆ ಇಲ್ಲಿಗೆ ಮುಗಿದಿಲ್ಲ. ನಾನು ಇನ್ನೂ ಗೆದ್ದಿಲ್ಲ. ದೊಡ್ಡ ಯುದ್ಧ ಎದುರಿಸುವ ಸಮಯ ಬಂದಿದೆ. ಈಗ ಸರ್ಜರಿ ಮಾಡಿಸಬೇಕು,' ಎಂದು ಒಂದು ಕೈಯಲ್ಲಿ ಡ್ರಿಪ್ಸ್ ಬಾಟಲ್ ಹಿಡಿದುಕೊಂಡು ಆಕಾಶಕ್ಕೆ ಮುತ್ತು ಕೊಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
'ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು. ಈ ಕಷ್ಟದ ಸಮಯದಲ್ಲಿ ನಿಮ್ಮ ಪ್ರೀತಿ ನನಗೆ ಧೈರ್ಯ ಕೊಟ್ಟಿದೆ, ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ಈ ಯುದ್ಧದಲ್ಲಿ ನಾನೊಬ್ಬಳೇ ಅಲ್ಲ ಅನ್ನುವುದನ್ನು ತೋರಿ ಕೊಟ್ಟಿದ್ದೀರಿ. ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದವರು ತೋರಿಸುತ್ತಿರುವ ಕಾಳಜಿ ಎಂದೂ ಮರೆಯುವುದಿಲ್ಲ. ನಾನು ಸ್ಟ್ರಾಂಗ್ ಆಗಿರುವೆ, ಇದು ನನ್ನನ್ನು ಇನ್ನೂ ಸ್ಟ್ರಾಂಗ್ ಮಾಡುತ್ತಿದೆ,' ಎಂದು ಹಂಸ ಬರೆದುಕೊಂಡಿದ್ದಾರೆ.
"
ಹಂಸ ಪತ್ರ:
'ಜೀವನ ನನ್ನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಇದಕ್ಕೆ ಗುರಿಯಾಕೆ ಆದೆ ಎನ್ನುವುದೂ ಅರ್ಥವಾಗುತ್ತಿಲ್ಲ. ಆದರೆ ನಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಧೈರ್ಯದಿಂದಲೇ ಎಲ್ಲವನ್ನೂ ಎದುರಿಸುತ್ತೇನೆ. ನಾಲ್ಕು ತಿಂಗಳ ಹಿಂದೆ ನನ್ನ ಸ್ತನದಲ್ಲಿ ಸಣ್ಣ ಗೆಡ್ಡೆ ಕಾಣಿಸಿಕೊಂಡಿತು. ನನ್ನ ಜೀವನ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎನ್ನುವುದು ಆ ಸಂದರ್ಭದಲ್ಲಿ ಅರಿವಿಗೆ ಬಂದತು. ಹದಿನೆಂಟು ವರ್ಷಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೆ. ಇದೇ ರೋಗ ಅವರನ್ನು ಬಲಿ ಪಡೆದುಕೊಂಡಿತ್ತು. ಅದನ್ನೆಲ್ಲ ಮೆಟ್ಟಿ ಮುಂದಕ್ಕೆ ಸಾಗಿ ಬಂದಿದ್ದೆ. ಅನುಮಾನ ಬಂದ ಕೆಲವೇ ಗಂಟೆಯಲ್ಲಿ ಚಿಕಿತ್ಸೆಗೆಂದು ತೆರಳಿದೆ. ಹಲವಾರು ಸ್ಕ್ಯಾನ್‌ಗಳು (Scan) ಮತ್ತು ಪರೀಕ್ಷೆಗಳ ನಂತರ, ನಾನು ಧೈರ್ಯವಾಗಿ ಆಪರೇಷನ್ ಥಿಯೇಟರ್‌ಗೆ (Operation Theater) ಹೋದೆ. ಅಲ್ಲಿ ನನ್ನ ಗಡ್ಡೆಯನ್ನು ತೆಗೆದುಹಾಕಲಾಯಿತು. ಈ ಹಂತದಲ್ಲಿ ಯಾವುದೇ ಹರಡುವಿಕೆ ಇಲ್ಲ ಎಂದು ವೈದ್ಯರು ದೃಢಪಡಿಸಿದರು. ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹು ಬೇಗನೇ ಕಂಡು ಹಿಡಿದು ಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವೂ ಕ್ಯಾನ್ಸರ್ ಆಗುವ ಶೇ. 70 ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್ (Ovarian Cancer) ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗ ನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ. ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹುಬೇಗನೇ ಕಂಡುಹಿಡಿದುಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವು ಕ್ಯಾನ್ಸರ್ ಆಗುವ ಶೇ. 70 ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ.ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಇಂಥ ಚಿಕಿತ್ಸೆಗಳು ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡುತ್ತಿವೆ. ಸ್ತನ ಕ್ಯಾನ್ಸರ್ (Hereditary Breast Cancer) ನನ್ನನ್ನು ಆವರಿಸಿರುವುದು ಗೊತ್ತಾಯಿತು. ನನ್ನಷ್ಟಕ್ಕೇ ನಾನು ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡೆ. ಈ ರೋಗದೊಂದಿಗೆ ಹೋರಾಟಲು ಮಾನಸಿಕವಾಗಿ ಸಿದ್ಧಳಾದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಾ ಬೇರೆಯವರಿಗೂ ಧೈರ್ಯ ತುಂಬಲು ತೀರ್ಮಾನಿಸಿದೆ. ನಾನು ಸಾಮಾಜಿಕ ಜೀವನದಿಂದ ದೂರವಾಗಿದ್ದಕ್ಕೆ ಅನೇಕರು ಕಾರಣ ಕೇಳಿ ಸಂದೇಶ ರವಾನಿಸಿದ್ದಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರಋಣಿ. ನಾನು ಹಿಂದಕ್ಕೆ ಸರಿಯುವ ಮಾತೇ ಇಲ್ಲ. ಹೋರಾಡುತ್ತಲೇ ಇರುತ್ತೇನೆ. ನನ್ನ ಜತೆ ನಿಂತ ನಿಮಗೆಲ್ಲ ಮತ್ತೊಂದು ಸಾರಿ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಪ್ರೀತಿಯ ಹಂಸ! ಎಂದು ಪತ್ರ ಬರೆದಿದ್ದರು.
