ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್ ದರ್ಶನ್‌ ಅಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ಅಚ್ಚುಮೆಚ್ಚು. ದರ್ಶನ್ ಅಭಿನಯಕ್ಕೆ ಕೆಲವರು ಅಭಿಮಾನಿಯಾದರೆ, ಇನ್ನು ಕೆಲವರು ನಟ ಪ್ರಾಣಿ-ಪಕ್ಷಿಗಳ ಮೇಲೆ ತೋರುವ ಪ್ರೀತಿ, ಕಷ್ಟ ಎಂದು ಮನೆ ಬಾಗಿಲಿಗೆ ಬಂದ ಅಭಿಮಾನಿಗಳಿಗೆ ಸಹಾಯ ಮಾಡುವ ರೀತಿಗೆ ಮನ ಸೋತಿದ್ದಾರೆ. ಒಟ್ಟಿನಲ್ಲಿ ದರ್ಶನ ಸಹಾಯ ಮಾಡುವ ಗುಣ ಎಲ್ಲರಿಗೂ ಪ್ರೀಯ.

ನಟ ಶ್ರೀಮುರಳಿಗೆ ಸರ್ಪ್ರೈಸ್‌ ಕೊಟ್ಟ ದರ್ಶನ್; ಏನಾಯ್ತು ಮದಗಜ ಸೆಟ್‌ನಲ್ಲಿ?

ಈಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಿಂದ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಿದೆ. ಬರ್ತಡೇ ವಿಶ್, ಸಹಾಯ, ಪುಟ್ಟ ಮಕ್ಕಳ ಅಭಿನಯ ಹಾಗೂ ವಯಸ್ಕರರ ಬಯಕೆ ಹೀಗೆ ಅನೇಕ ವಿಡಿಯೋಗಳಿಗೆ ದರ್ಶನ್‌ ಅವರನ್ನು ಟ್ಯಾಗ್ ಮಾಡಿ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಅದರಂತೆ ಈಗ ಎಲ್ಲೆಡೆ ಅಜ್ಜಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಭೇಟಿ ಮಾಡಲೇ ಬೇಕು:
ಸುಮಾರು 60-70 ಆಸುಪಾಸಿನ ಅಜ್ಜಿಯೊಬ್ಬರು ನಟ ದರ್ಶನ್‌ ಅವರನ್ನು ಭೇಟಿ ಮಾಡಲೇ ಬೇಕೆಂದು ಹಟ ಹಿಡಿದಿದ್ದಾರೆ. ಕೊರೋನಾ ಕಾಟ, ಅವರು ಈಗ ಸಿಗುವುದಿಲ್ಲ ಎಂದು ಹೇಳಿದರೂ, 'ಪರವಾಗಿಲ್ಲ ಮೈಸೂರಿನಲ್ಲಿ ಸಿಗದಿದ್ದರೇನು? ಬೆಂಗಳೂರಿಗೆ ಹುಡಿಕೊಂಡು ಹೋಗುವೆ,' ಎಂದೂ ಹೇಳಿದ್ದಾರೆ.

 

ಮಾಸ್ಕ್‌ ಹಾಕಿ ಕೊರೋನಾ ಪರೀಕ್ಷೆ ಮಾಡಿಸಬೇಕು ಎಂದರೂ, 'ನನ್ನ ಚಿನ್ನದ ಓಲೆಯನ್ನು ಮಾರಿ, ಬಾಡಿಗೆ ಕಾರು ಮಾಡಿಕೊಂಡು, ಕೊರೋನಾ ಟೆಸ್ಟ್ ಮಾಡಿಸಿಕೊಂಡು ಮಾಸ್ಕ್‌ ಹಾಕಿಕೊಂಡಾದರೂ ಸರಿ, ನಾನು ದರ್ಶನ್‌ ಅವರನ್ನು ಭೇಟಿ ಮಾಡಲೇ ಬೇಕು,' ಎಂದು ಹಟ ಹಿಡಿದಿದ್ದಾರೆ. ಈ ವಿಡಿಯೋವನ್ನು ಬಾಕ್ಸ್ ಆಫೀಸ್‌ ಸುಲ್ತಾನ್ ಡಿ ಬಾಸ್‌ ಫೇಸ್‌ಬುಕ್‌ ಫ್ಯಾನ್‌ ಪೇಜ್‌ ಶೇರ್ ಮಾಡಿಕೊಂಡಿದೆ.

'ಸಾರಥಿ'ಗೆ 9 ವರ್ಷ; ಡಿ-ಬಾಸ್ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ!

ಸುಮಾರು 8 ತಿಂಗಳಿಂದ ತೆರೆ ಮೇಲೆ ದರ್ಶನ್‌ ಅವರನ್ನು ನೋಡದೆ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಏನೇ ಆದರೂ ನಮ್ಮ ಡಿ-ಬಾಸ್ 'ರಾಬರ್ಟ್‌' ಸಿನಿಮಾ ರಿಲೀಸ್ ಆಗಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ನಿಶ್ಚಯವಾಗಿರುವ ದಿನಾಂಕದ ಪ್ರಕಾರ ಲವ್‌ ಮಾಕ್ಟೇಲ್‌, ಶಿವಾರ್ಜುನ ಹಾಗೂ ಜೆಂಟಲ್‌ಮ್ಯಾನ್‌ ಮೊದಲು ಬಿಡುಗಡೆಯಾಗುತ್ತವೆ. ಮುಂದಿನ ವರ್ಷ 2020ರ ಸಂಕ್ರಾಂತಿ ಹಬ್ಬಕ್ಕೆ ದರ್ಶನ್, ಸುದೀಪ್, ದುನಿಯಾ ವಿಜಯ್, ಧ್ರುವ ಸರ್ಜಾ ಸೇರಿದಂತೆ ಅನೇಕ ಸ್ಟಾರ್ ಸಿನಿಮಾಗಳು ರಿಲೀಸ್ ಆಗಲು ಸಜ್ಜಾಗಿವೆ.

"