ಸ್ಯಾಂಡಲ್‌ವುಡ್‌ನಲ್ಲಿ 'ಮುಂಗಾರು ಮಳೆ'ಯಿಂದ 'ಮುಗುಳುನಗೆ' ತರಿಸಿದ 'ಹುಡುಗಾಟ'ದ 'ಕೃಷ್'ನಾದ ಗೋಲ್ಡನ್ ಸ್ಟಾರ್ ಗಣೇಶ್‌ ಇಂದು ಸರಳವಾಗಿ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

ಮಾಹಾಮಾರಿ ಕೊರೋನಾ ವೈರಸ್‌ ಕಾಟ ಹೆಚ್ಚಾಗುತ್ತಿರುವ ಕಾರಣ ವಿಡಿಯೋ ಮೂಲಕ, ಅಭಿಮಾನಿಗಳು ಮನೆ ಬಳಿ ಬಂದು ತಮ್ಮ ಹುಟ್ಟಿದಬ್ಬ ಆಚರಿಸದಂತೆ ಮನವಿ ಮಾಡಿಕೊಂಡಿದ್ದರು ಮುಂಗಾರು ಮಳೆ ಹುಡುಗ ಗಣೇಶ್. ಅಭಿಮಾನಿಗಳ ಜೊತೆ ಆಚರಣೆ ಮಾಡದಿದ್ದರೇನು, ಅವರಿಗೆ ಸಿಹಿ ಸುದ್ದಿ ನೀಡಬಹುದಲ್ವಾ ಎಂದು ನಿರ್ದೇಶಕ ಸಿಂಪಲ್ ಸುನಿ 'ಸಖತ್' ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್‌ಗೆ ಶುಭ ಕೋರಿದ್ದಾರೆ. ಪೋಸ್ಟರ್‌ನಲ್ಲಿ ಗಣೇಶ್‌ Rap ಸಾಂಗ್ ಹಾಡುತ್ತಿರುವ ಶೈಲಿಯಲ್ಲಿ ಫೋಸ್ ನೀಡಿದ್ದಾರೆ.

ಗಣೇಶ್‌ ಲೈಫಿನ 'ಗೋಲ್ಡನ್‌' ಕ್ವೀನ್‌; ಶಿಲ್ಪಾ ಗಣೇಶ್‌ ಎಷ್ಟು ಸ್ಟೈಲಿಶ್‌ ನೋಡಿ!

ಯೋಗರಾಜ್‌ ಭಟ್ ನಿರ್ದೇಶನದ  'ಗಾಳಿಪಟ 2' ಚಿತ್ರದಲ್ಲಿ ಅಭಿನಯಿಸುತ್ತಿರುವ ಗಣಿ ಕೈಯಲ್ಲಿ ಈಗ 'ಸಖತ್' ಆಫರ್ ಇದೆ. ಈ ಹಿಂದೆ ಫ್ಯಾಮಿಲಿ ಓರಿಯಂಟೆಡ್‌ 'ಚಮಕ್'ನಲ್ಲಿ ಇಬ್ಬರ ಕಾಂಬಿನೇಶನ್‌ ಕ್ಲಿಕ್‌ ಆದ ಕಾರಣ ಅಭಿಮಾನಿಗಳಲ್ಲಿ 'ಸಖತ್' ಸಿನಿಮಾದ ಬಗ್ಗೆ ಭರವಸೆ ಹೆಚ್ಚಾಗಿದೆ. ಗಣೇಶ್‌ ತಮ್ಮ ಪ್ರತಿಯೊಂದೂ ಸಿನಿಮಾದಲ್ಲೂ ವಿಭಿನ್ನವಾದ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ, ಚಿತ್ರದಲ್ಲಿ ಒಂಚೂರು  ರೊಮ್ಯಾನ್ಸ್‌, ಕಾಮಿಡಿ ಹಾಗೂ ಮಾಸ್‌ ಫೈಟಿಂಗ್ ಇದ್ದೇ ಇರುತ್ತದೆ. 

 

ಈ ಬರ್ತಡೇ ಅಂದು ಮತ್ತೊಂದು ವಿಶೇಷ ಸುದ್ದಿ ಹೊರಬಂದಿದೆ. ಸಿಂಪಲ್ ಸುನಿ ಮತ್ತು ಗಣೇಶ್‌ ಮತ್ತೊಂದು ಸಿನಿಮಾಗೆ ಒಟ್ಟಾಗಿದ್ದಾರಂತೆ. ಆ ಚಿತ್ರಕ್ಕೆ 'ದಿ ಸ್ಟೋರಿ ಆಫ್‌ ರಾಯಘಡ' ಎಂದು ಹೆಸರಿಸಲಾಗಿದೆ. ಈ ಚಿತ್ರವನ್ನು ಜ್ಯುಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದು, ಸಂತೋಷ್ ರೈ ಛಾಯಾಗ್ರಹಣ ಮಾಡಲಿದ್ದಾರೆ.

ಬರ್ತ್‌ಡೇ ದಿನ ಮನೆಗೆ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್..! ಫ್ಯಾನ್ಸ್‌ಗೆ ಹೊಸ ರಿಕ್ಷೆಸ್ಟ್

ಇನ್ನೂ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಕಲಾವಿದರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುವ ಗಣೇಶ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.