ಜುಲೈ 2ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಪ್ರತಿ ವರ್ಷ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಬಂದು ಶುಭ ಹಾರೈಸಿ ಹೋಗುತ್ತಿದ್ದರು. ಈ ಬಾರಿ ಹಾಗಿಲ್ಲ. ಗಣೇಶ್ ಪ್ಲಾನ್ ಬೇರೆ ಇದೆ.

ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಜುಲೈ -2 ರಂದು 42 ನೇ ಜನ್ಮ ದಿನ ಅದ್ಧೂರಿಯಾಗಿ ಆಚರಿಸದಿರಲು ನಿರ್ಧಾರ ಮಾಡಿದ್ದಾರೆ. ಕೊವಿಡ್ -19 ಹಿನ್ನೆಲೆಯಲ್ಲಿ ವೈಭವದಿಂದ ಹುಟ್ಟು ಹಬ್ಬ ಆಚರಿಸುತ್ತಿಲ್ಲ.. ಮನೆ ಬಳಿಗೆ ಬಂದು ತೊಂದರೆ ಪಡೆಬೇಡಿ ಎಂದು ಫ್ಯಾನ್ಸ್ ಗೆ ಮನವಿ ಮಾಡಿದ್ದಾರೆ.

'ಹೇರ್ ಕಟ್ ಮಾಡಿದ್ರೆ ಡಿಪ್ರೆಷನಲ್ಲಿದ್ದೀನಿ ಎಂದಲ್ಲ, ಈ ಫೋಟೋಸ್ ನಿಮಗಾಗಿ'..! ಹೀಗಿದೆ ಸಿಂಧು ಪೋಸ್ಟ್

ಬೇರೆ ಬೇರೆ ಜಿಲ್ಲೆಯಲ್ಲಿರೋ ಅಭಿಮಾನಿಗಳು ಎಲ್ಲಿದ್ದಿರೋ ಅಲ್ಲಿಂದಲೇ ಹರೆಸಿ ಹಾರೈಸಿ ಅಂತ ಕೇಳಿಕೊಂಡ ಮಳೆ ಹುಡುಗ ಗಣೇಶ್ ತಮ್ಮ ಬರ್ತ್ ಡೇ ದೊಮಟ್ಟದಲ್ಲಿ ಆಚರಿಸಿಕೊಳ್ಳೊದಿಲ್ಲ ಅಂತ ತಮ್ಮ ಫೇಸ್ ಬುಕ್ ಮೂಲಕ ಹೇಳಿಕೊಂಡಿದ್ದಾರೆ.

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ನನ್ನೆಲ್ಲಾ ಅಭಿಮಾನಿಗಳೇ, ಬಂಧುಗಳೇ, ಸ್ನೇಹಿತರೇ, ಹಿತೈಷಿಗಳೇ ಈ ಕೊರೋನಾದ ಸಂಕಷ್ಟ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆ ತಾಲೂಕುಗಳಲ್ಲೂ ನೀವು ನೊಂದವರ, ಅಸಹಾಯಕರ, ಹಸಿದವರ ಬೆಂಬಲಕ್ಕೆ ನಿಂತಿರಿ. ಇದಕ್ಕೆ ಯಾವ ಪ್ರಚಾರವನನ್ಊ ಬಯಸದೆ ಸದ್ದುಗದ್ದಲವಿಲ್ಲದೆ ನಿಮ್ಮ ಮಾನವೀಯತೆಯನ್ನು ತೋರಿಸಿದಿರಿ. ಇದಕ್ಕಾಗಿ ನಾನು ನಿಮಗೆ ಅಭಾರಿಯಾಗಿದ್ದೇನೆ. ನಿಮ್ಮ ಕಾರ್ಯಗಳಿಗಾಗಿ ಹೆಮ್ಮೆ ಪಡುತ್ತೇನೆ.

ನಿಮಗೆಲ್ಲ ಗೊತ್ತಿರುವ ಹಾಗೆ ಜುಲೈ 2ರಂದು ಪ್ರತಿವರ್ಷ ಸಾವಿರಾರು ಮಂದಿ ಬೆಂಗಳೂರಿಗೆ ಬಂದು ನನ್ನ ಜನ್ಮ ದಿನವನ್ನ ಅತ್ಯಂತ ಅದ್ಧೂರಿಯಾಗಿ ಆಚರಿಸಿದ್ದೀರಿ. ಇದಕ್ಕೆ ನಾನು ಸದಾ ಚಿರಖಣಿ

 ಅವಕಾಶಕ್ಕೆ ಏನು ಬೇಕಾದರೂ ಮಾಡುವ ನಟಿಯರಿಗೆ ಮಾದರಿಯಾಗಲಿ ಸಾಯಿ ಪಲ್ಲವಿ!

ಆದರೆ ಈ ವರ್ಷ ಎಂದಿನಂತಿಲ್ಲ. ಕರೋನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದು ನಿರುದ್ಯೋಗಿಗಳಾಗಿದ್ದಾರೆ. ಬಡಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ.

ಹೊರಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು ಅದೇ ದಿನ ಬಡ ಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದ. ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ, ನೀವೆಲ್ಲಿದ್ದೀರೋ ಅಲ್ಲಿಂದಲೆ ನನಗೆ ಶುಭಕೋಡಿ ಶಿರ್ವದಿಸಿ ಎಂದು ಪೋಸ್ಟ್ ಮಾಡಿದ್ದಾರೆ.