ನಿರ್ಮಾಪಕರ ಹೆಸರು ಗಣೇಶ್‌. ಇವರ ಪುತ್ರಿ ರಜನಿ ಅವರೇ ಚಿತ್ರರಂಗಕ್ಕೆ ಈಗಷ್ಟೆಪ್ರವೇಶ ಪಡೆಯುತ್ತಿರುವ ಪ್ರತಿಭೆ.

ತಂದೆ ನಿರ್ಮಾಪಕರು, ಮಗಳು ನಾಯಕಿ ಆಗಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಕನ್ನಡ, ತಮಿಳು ಹಾಗೂ ಮರಾಠಿಯಲ್ಲಿ ಈ ಚಿತ್ರ ಮೂಡಿ ಬರಲಿದ್ದು ಪ್ರೊಡಕ್ಷನ್‌ ನಂ.1 ಹೆಸರಿನಲ್ಲಿ ಚಿತ್ರ ಸೆಟ್ಟೇರಿದೆ. ಎಚ್‌.ಕೆ.ಆರ್‌ ಪ್ರೊಡಕ್ಷನ್‌ ಬ್ಯಾನರ್‌ ಮೂಲಕ ಶಿವಮೊಗ್ಗ ಮೂಲದ ಗಣೇಶ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸತ್ಯ ಸಾಮ್ರಾಟ್‌ ನಿರ್ದೇಶನ ಮಾಡುತ್ತಿದ್ದಾರೆ.

ಬಾಲಿವುಡ್‌ನಲ್ಲಿ ನಕಲಿ ಸೋಷಿಯಲ್‌ ಮೀಡಿಯಾ ದಂಧೆ; ಹಣಕೊಟ್ಟು ಫಾಲೋವರ್ಸ್‌ ಖರೀದಿಸುತ್ತಿರುವ‌ ಸೆಲೆಬ್ರಿಟಿಗಳು!

‘ನಮ್ಮ ತಂದೆಯವರಿಗೆ ಸಿನಿಮಾಗಳ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ. ನನಗೂ ಚಿತ್ರಗಳಲ್ಲಿ ನಟಿಸುವ ಆಸೆ. ಹೀಗಾಗಿ ಮೊದಲ ಚಿತ್ರವೇ ನಮ್ಮ ನಿರ್ಮಾಣದ ಚಿತ್ರವಾಗಲಿ ಎನ್ನುವುದು ನಮ್ಮ ಆಸೆ ಆಗಿತ್ತು. ಅದರಂತೆ ಅಪ್ಪನ ಚಿತ್ರದ ಮೂಲಕ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಅಭಿನಯ ತರಬೇತಿ ಪಡೆದುಕೊಂಡ ನಂತರವೇ ಚಿತ್ರರಂಗಕ್ಕೆ ಬರುತ್ತಿದ್ದೇನೆ. ಈ ಚಿತ್ರದ ಮೂಲಕ ನನಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತದೆಂಬ ನಂಬಿಕೆ ಇದೆ’ ಎನ್ನುತ್ತಾರೆ ರಜನಿ.

ಹಾಗೆ ನೋಡಿದರೆ ಈ ಹಿಂದೆ ತಂದೆ ನಾಯಕನಾಗಿ, ಮಗಳು ನಾಯಕಿಯಾಗಿ ಮುಸ್ಸಂಜೆ ಗೆಳತಿ ಎನ್ನುವ ಸಿನಿಮಾ ಬಂದಿತ್ತು. ಅಪ್ಪ- ಮಗಳೇ ಚಿತ್ರದ ಜೋಡಿ ಎಂಬುದು ಎಲ್ಲರ ಅಚ್ಚರಿಗೆ ಆಗ ಕಾರಣವಾಗಿತ್ತು ಆ ಸಿನಿಮಾ. ಅಲ್ಲದೆ ಈ ಚಿತ್ರಕ್ಕೆ ನಾಯಕನಾಗುವ ಜತೆಗೆ ಅಪ್ಪನೇ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಆಗಿದ್ದರು.