ಈ ಮೂಲಕ ಇಬ್ಬರು ನಟರ ಅಭಿಮಾನಿಗಳಿಗೆ ಈ ಚಿತ್ರಗಳು ಬಂಪರ್ ಸಂಭ್ರಮ ಮೂಡಿಸಿವೆ.

ದರ್ಶನ್ 'ರಾಬರ್ಟ್‌' ಸುತ್ತ ಏನಿದು ಹೊಸ ಗಾಸಿಪ್? ನಿಜನಾ ಈ ಸುದ್ದಿ?

ಕೆಲ ದಿನಗಳ ಹಿಂದೆಯಷ್ಟೆ ‘ಬಾ ಬಾ ನಾನ್ ರೆಡಿ ಇದ್ದೀನಿ’ ಎನ್ನುವ ‘ರಾಬರ್ಟ್’ ಪೋಸ್ಟರ್ ಮೂಲಕ ದರ್ಶನ್ ಎಂಟ್ರಿ ಕೊಟ್ಟಿದ್ದರು. ಆಗ ಕೈಯಲ್ಲಿ ಪಿಸ್ತೂಲು ಹಿಡಿದು ಬಂದವರು, ಈಗ ಬೈಕ್ ಮೇಲೆ ಬಂದಿದ್ದಾರೆ. ಎರಡನೇ ಪೋಸ್ಟರ್ ಕೂಡ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದಾರೆ ನಿರ್ದೇಶಕರ ತರುಣ್ ಸುಧೀರ್.

 

ಸಂತೋಷ್ ಆನಂದ್‌ರಾಮ್ ಕೂಡ ತಮ್ಮ ನಿರ್ದೇಶನದ ‘ಯುವರತ್ನ’ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೊದಲ ಪೋಸ್ಟರ್‌ನಲ್ಲಿ ರೆಗ್ಬಿ ಬಾಲ್ ಹಿಡಿದು ನಿಂತ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದಾಗ ಇದೊಂದು ಕ್ರೀಡಾಧಾರಿತ ಕತೆ ಒಳಗೊಂಡ ಸಿನಿಮಾ ಎಂದು ಬಹುತೇಕರು ಮಾತನಾಡಿಕೊಂಡಿದ್ದರು. ಈಗ ಮನುಷ್ಯನ ಅಸ್ಥಿಪಂಜರವನ್ನು ಬೆನ್ನ ಮೇಲೆ ಹೊತ್ತ ಪುನೀತ್ ಅವರನ್ನು ನೋಡಿ, ಇದು ಮತ್ತೊಂದು ಮಾಫಿಯಾ ಅಥವಾ ಸೋರ್ಟ್ಸ್‌ ಸ್ಕ್ಯಾಮ್ ಕತೆ ಹೇಳಲಿದೆಯೇ ಎನ್ನುವ ಕುತೂಹಲ ಶುರುವಾಗಿದೆ.

 

ಅಲ್ಲದೆ ಪೋಸ್ಟರ್‌ನಲ್ಲಿ ಡೈನೋಸಾರ್ ಅಸ್ಥಿಪಂಜರ ಕೂಡ ಇದೆ. ಈ ಕಾರಣಕ್ಕೆ ‘ಯುವರತ್ನ’ ಮತ್ತಷ್ಟು ನಿರೀಕ್ಷೆಯ ಜತೆಗೆ ಹೊಸ ಕತೆ ಇರುತ್ತದೆಂಬ ಭರವಸೆಗೂ ಕಾರಣವಾಗಿದೆ. ಒಟ್ಟಿನಲ್ಲಿ ಇಬ್ಬರು ಹೀರೋಗಳ ಎರಡನೇ ಪೋಸ್ಟರ್ ಹೊಸ ವರ್ಷದ ಧಮಾಕವನ್ನು ಕೊಂಚ ಜೋರಾಗಿಯೇ ಆಚರಿಸುತ್ತಿವೆ.