Film lovers ಸಖತ್ ಶುಕ್ರವಾರ; ಸಖತ್ -ಅಮೃತ ಅಪಾರ್ಟ್‌ಮೆಂಟ್ -ಗೋವಿಂದ ಗೋವಿಂದ -ಗೋರಿ
ಕಳೆದ ವಾರ ತೆರೆ ಕಂಡ ‘ಗರುಡಗಮನ ವೃಷಭವಾಹನ’, ‘100’ ಹಾಗೂ ‘ಮುಗಿಲ್‌ಪೇಟೆ’ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿ ಮಾಡಲಿಲ್ಲ. ಮಳೆಯ ನಡುವೆಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆದವು. ಈ ವಾರವೂ ನಾಲ್ಕು ಚಿತ್ರಗಳು ತೆರೆ ಕಾಣುತ್ತಿವೆ.
ಗಣೇಶ್ (Ganesh) ನಟನೆಯ ‘ಸಖತ್’ (Sakkath), ಸುಮಂತ್ ಶೈಲೇಂದ್ರ ಬಾಬು ಅಭಿನಯದ ‘ಗೋವಿಂದ ಗೋವಿಂದ’, ತಾರಕ್ ಪೊನ್ನಪ್ಪ ನಟನೆಯ ‘ಅಮೃತ ಅಪಾರ್ಟ್‌ಮೆಂಟ್ಸ್’ ಹಾಗೂ ಹೊಸ ನಟ ಕಿರಣ್ ಅವರ ‘ಗೋರಿ’ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ನಿಧಾನವಾಗಿ ವಿಷಾದದ ಪೊರೆ ಕಳಚಿಕೊಳ್ಳುತ್ತಿರುವ ಚಿತ್ರೋದ್ಯಮಕ್ಕೆ ಈ ನಾಲ್ಕು ಚಿತ್ರಗಳು ಚೇತರಿಕೆ ನೀಡುತ್ತವೆಯೇ!
- ಗಣೇಶ್ ಸಖತ್
ಸಿಂಪಲ್ ಸುನಿ (Simple Suni) ಹಾಗೂ ಗಣೇಶ್ ಕಾಂಬಿನೇಶನ್‌ನ ಸಖತ್ ಸಿನಿಮಾ ಇವತ್ತೇ (ನ.26) ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸುರಭಿ (Surabi) ಹಾಗೂ ನಿಶ್ವಿಕಾ ನಾಯ್ಡು (Nishvika Naidu) ಜತೆಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಗಣೇಶ್ ಅವರು ವಿಶೇಷವಾದ ಪಾತ್ರ ಮಾಡಿದ್ದಾರೆ ಎಂಬುದು ಚಿತ್ರದ ಹೈಲೈಟ್. ಮೊದಲ ಬಾರಿಗೆ ಕುರುಡನ (Blind) ಪಾತ್ರದಲ್ಲಿ ಸಿಕ್ಕಾಪಟ್ಟೆಮನರಂಜನೆ ಕೊಟ್ಟಿರುವ ಗಣೇಶ್, ಸಿಂಪಲ್ ಡೈಲಾಗ್‌ಗಳಿಂದ ಪ್ರೇಕ್ಷಕರನ್ನು ನಗಿಸಲಿದ್ದಾರೆ ಎಂಬುದು ಚಿತ್ರದ ಟೀಸರ್, ಟ್ರೇಲರ್ (Trailer) ನೋಡಿದವರ ಅಭಿಪ್ರಾಯ. ನಿಜಕ್ಕೂ ಚಿತ್ರದಲ್ಲಿ ಹೀರೋಗೆ ಕಣ್ಣು ಕಾಣುವುದಿಲ್ಲವೇ ಎಂಬುದೇ ಚಿತ್ರದ ಅಸಲಿ ಟ್ವಿಸ್ಟ್ ಎಂಬುದು ಚಿತ್ರದ ಮತ್ತೊಂದು ಹೈಲೈಟ್. ಸುಪ್ರಿತ್ ನಿರ್ಮಿಸಿರುವ ಈ ಚಿತ್ರ ಇದಾಗಿದ್ದು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಸುನಿ ಹಾಗೂ ಗಣೇಶ್ ಕಾಂಬಿನೇಶನ್‌ನಲ್ಲಿ ಈಗಾಗಲೇ ಚಮಕ್ (Chamak) ಚಿತ್ರ ಗೆದ್ದಿರುವುದರಿಂದ ‘ಸಖತ್’ ಮೇಲೆ ಮತ್ತಷ್ಟುನಿರೀಕ್ಷೆ ಹೆಚ್ಚಾಗಿದೆ. ಮಾ.ವಿಹಾನ್ (Master Vihan), ಸಾಧು ಕೋಕಿಲಾ (Sadhu kokila), ಧರ್ಮಣ್ಣ ಕಡೂರು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.
- ಸುಮಂತ್ ಗೋವಿಂದ ಗೋವಿಂದ
ತುಂಬಾ ದಿನಗಳ ನಂತರ ಯುವ ನಟ ಸುಮಂತ್ ಶೈಲೇಂದ್ರಬಾಬು (Suman Shilendra) ‘ಗೋವಿಂದ ಗೋವಿಂದ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮಾಸ್ ಹಾಗೂ ಪ್ರೇಮ ಕತೆಯ ಚಿತ್ರಗಳನ್ನೇ ಹೆಚ್ಚಾಗಿ ಮಾಡಿರುವ ಸುಮಂತ್, ಈ ಬಾರಿ ಹಾಸ್ಯ (Comedy) ಚಿತ್ರದಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ತಿಲಕ್ (Thilak) ನಿರ್ದೇಶನ ಮಾಡಿರುವ ಈ ಚಿತ್ರವನ್ನು ರವಿ ಆರ್ ಗರಣಿ (Ravi R Garani), ಕಿರೋಶ್ ಎಂ ಮಧುಗಿರಿ, ಶೈಲೇಂದ್ರ ಬಾಬು ನಿರ್ಮಿಸಿದ್ದಾರೆ. ಕನ್ನಡದಲ್ಲಿ ತುಂಬಾ ದಿನಗಳ ನಂತರ ಜಾಕಿ ಭಾವನಾ (Bhavana) ಕಾಣಿಸಿಕೊಳ್ಳುತ್ತಿರುವುದು ‘ಗೋವಿಂದ ಗೋವಿಂದ’ (Govinda Govinda) ಚಿತ್ರದ ವಿಶೇಷತೆ. ಉಳಿದಂತೆ ಕವಿತಾ, ರೂಪೇಶ್, ಅಚ್ಯುತ್ ಕುಮಾರ್, ಶೋಭರಾಜ್ (Shobaraj), ಮಜಾ ಟಾಕೀಸ್ ಪವನ್ (Maja talkies Pavan) ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಮನರಂಜನೆಗೆ ಕೊರತೆ ಇಲ್ಲದಂತೆ ಈ ಚಿತ್ರವನ್ನು ರೂಪಿಸಿರುವುದಾಗಿ ಚಿತ್ರತಂಡ ಹೇಳಿಕೊಳ್ಳುತ್ತಿದೆ.
Govinda Govinda: ನಮ್ಮ ಸಿನಿಮಾದಲ್ಲಿ ನೋ ಫಸ್ಟ್ ನೈಟ್, ನೋ ಕಾಂಟ್ರವರ್ಸಿ: ಶೈಲೇಂದ್ರ ಬಾಬು-ಅಮೃತ ಅಪಾರ್ಟ್‌ಮೆಂಟ್ ಮತ್ತು ಗೋರಿ
ಈ ಎರಡೂ ಚಿತ್ರಗಳ ಜತೆಗೆ ಗುರುರಾಜ್ ಕುಲಕರ್ಣಿ (Gururaj Kulkarni) ನಿರ್ದೇಶನದ ‘ಅಮೃತ ಅಪಾರ್ಟ್‌ಮೆಂಟ್ಸ್’ ಹಾಗೂ ಹೊಸಬರೇ ಸೇರಿ ಮಾಡಿರುವ ‘ಗೋರಿ’ ಚಿತ್ರಗಳು ಕೂಡ ಪ್ರೇಕ್ಷಕರ ಮುಂದೆ ಬರುತ್ತಿವೆ. ಕಾಮಿಡಿ, ಕ್ರೈಮ್ ಥ್ರಿಲ್ಲರ್ (Crime Thriller) ಹಾಗೂ ಪ್ರೇಮ... ಈ ಮೂರು ಅಂಶಗಳನ್ನು ಹೊತ್ತ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರವನ್ನು ಪ್ರೇಕ್ಷಕ ಕೈ ಹಿಡಿಯುತ್ತಾನೆ ಎಂಬುದನ್ನು ನೋಡಿಬೇಕಿದೆ.
"