ಕ್ಯಾಮೆರಾ ಹೆಗಲಿಗೆ ನೇತು ಹಾಕಿಕೊಂಡು ತಮ್ಮ ಮುಕ್ಕಾಲು ಪಾಲು ಜೀವನವನ್ನು ಬಣ್ಣದ ಜಗತ್ತಿನಲ್ಲೇ ಕಳೆದ, ಎಲ್ಲರಿಂದಲೂ ಸ್ಟಿಲ್‌ ಸೀನು ಎಂದೇ ಕರೆಸಿಕೊಳ್ಳುತ್ತಿದ್ದ ಸಿನಿಮಾ ಸ್ಟಿಲ್‌ ಫೋಟೋಗ್ರಾಫರ್‌ ಆರ್‌ ಶ್ರೀನಿವಾಸ್‌ ಇನ್ನು ನೆನಪು ಮಾತ್ರ. 

ಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಸ್ಟಿಲ್‌ ಸೀನು ಸೆ.3ರಂದು ಬೆಳಗ್ಗೆ ಕೊನೆಯುಸಿರಳೆದಿದ್ದಾರೆ. ಆ ಮೂಲಕ ಚಿತ್ರರಂಗದಲ್ಲಿನ ತಮ್ಮ ಹಲವು ವರ್ಷಗಳ ಪಯಣವನ್ನು ಚಿತ್ತಾರಗಳ ರೂಪದಲ್ಲಿ ಉಳಿಸಿ ಹೋಗಿದ್ದಾರೆ.

ಒಂದು ವಾರದ ಹಿಂದೆಯಷ್ಟೆ ಮೈಸೂರು ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನು ತುಮಕೂರು ರಸ್ತೆಯಲ್ಲಿರುವ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಟಿಲ್‌ ಸೀನು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ದ್ರೋಣಾಚಾರ‍್ಯ ಪ್ರಶಸ್ತಿ ಸ್ವೀಕರಿಸುವ ಮುನ್ನಾ ಕೊನೆಯುಸಿರೆಳೆದ ಅಥ್ಲೆಟಿಕ್ಸ್‌ ಕೋಚ್‌ ಪುರುಷೋತ್ತಮ್ ರೈ

ನಟ, ನಟಿಯರ ಹಾಗೂ ಸಿನಿಮಾಗಳ ದೊಡ್ಡ ದೊಡ್ಡ ಪೋಸ್ಟರ್‌ಗಳಲ್ಲಿ ನೋಡಿರುತ್ತೀರಿ. ಆ ಪೋಸ್ಟರ್‌ಗಳಿಗೆ ಅದೇ ಕಲಾವಿದರ ಫೋಟೋ ಕ್ಲಿಕ್ಕಿಸುತ್ತಿದ್ದವರು ಈ ಸ್ಟಿಲ್‌ ಸೀನು. ಕನ್ನಡ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದ್ದ ಹೆಸರು ಸ್ಟಿಲ್‌ ಸೀನು. ಕಳೆದ 30 ವರ್ಷಗಳಿಂದ 250ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಟಿಲ್‌ ಫೋಟೋಗ್ರಾಫರ್‌ ಆಗಿ ಕೆಲಸ ಮಾಡಿದ ಇವರು ‘ಗಹನ’ ಚಿತ್ರವನ್ನು ನಿರ್ಮಿಸಿದ್ದರು. ನಟ ದರ್ಶನ್‌ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಸ್ಟಿಲ್‌ ಸೀನು ಕೆಲಸ ಮಾಡಿದ ಕೊನೆಯ ಸಿನಿಮಾ.