ಉತ್ತರ ಕರ್ನಾಟಕ ಪ್ರತಿಭೆಗಳೇ ಸೇರಿ ಮಾಡಿರುವ ಸಿನಿಮಾ 'ನೆನಪಾಗುತ್ತಿಲ್ಲ'. ಈಶ್ವರ ಕಟ್ಟೀಮನಿ ಬರೆದಿರುವ ಕತೆ ಆಧರಿಸಿ ರೂಪಿಸಿರುವ ಸಿನಿಮಾ ಇದು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 

ಉತ್ತರ ಕರ್ನಾಟಕ ಪ್ರತಿಭೆಗಳೇ ಸೇರಿ ಮಾಡಿರುವ ಸಿನಿಮಾ 'ನೆನಪಾಗುತ್ತಿಲ್ಲ' (Nenapaguttilla). ಈಶ್ವರ ಕಟ್ಟೀಮನಿ (Ishwar Kattimani) ಬರೆದಿರುವ ಕತೆ ಆಧರಿಸಿ ರೂಪಿಸಿರುವ ಸಿನಿಮಾ ಇದು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ (Sunil Puranic) ಚಿತ್ರದ ಟ್ರೇಲರ್‌ (Trailer) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಗಂಗಾಧರ್‌ ಬಡಿಗೇರ್‌ (Gangadhar Badiger) ನಾಯಕನಾಗಿ ಅಭಿನಯಿಸುವ ಜತೆಗೆ ಈ ಚಿತ್ರದ ನಿರ್ಮಾಪಕರೂ ಕೂಡ ಆಗಿದ್ದಾರೆ. ದೇವದಾಸ್‌ ನಿರ್ದೇಶನ ಮಾಡಿದ್ದಾರೆ. 

ಗ್ರಾಮೀಣ ಬಡ ವಿದ್ಯಾರ್ಥಿ ಬದುಕಿನಲ್ಲಿ ಶಿಕ್ಷಣದ ಬಗ್ಗೆ ಹಾಗೂ ಪ್ರಬುದ್ಧತೆಯ ವ್ಯಕ್ತಿ ಸಾಮಾಜಿಕ ಶಕ್ತಿಯಾಗಿ ಬೆಳೆದಲ್ಲಿ, ಹಳ್ಳಿಯಲ್ಲಿರುವ ತಂದೆ ತಾಯಿಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವೆ ಚಿತ್ರವಾಗಿದೆ. ನಿರ್ಮಾಪಕ ಗಂಗಾಧರ ಬಡಿಗೇರ ಮಾತನಾಡಿ, ‘ನಾನು ಮೂಲತಃ ಕನ್ನಡ ಉಪನ್ಯಾಸಕ. ಈಶ್ವರ ಕಟ್ಟೀಮನಿ ಬರೆದ ಈ ಕತೆ ನನಗೆ ತುಂಬಾ ಇಷ್ಟವಾಯ್ತು. ದೇಶದ ಈಗಿನ ಪರಿಸ್ಥಿತಿಯನ್ನು ತೆರೆದಿಡುವ ಕತೆ ಇಲ್ಲಿದೆ’ ಎಂದು ಹೇಳಿದರು. ಚಿತ್ರದಲ್ಲಿ ತಂದೆಯಾಗಿ ಬಿರಾದಾರ್‌, ಊರ ಗೌಡನಾಗಿ ಅಂಜಿನಪ್ಪ, ಶೋಭರಾಜ್‌, ನಾಯಕಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.

Premam Poojyam ನೂರು ದಿನಗಳ ಸಂಭ್ರಮದಲ್ಲಿ ಮಿಂದೆದ್ದ ನೆನಪಿರಲಿ ಪ್ರೇಮ್!

ಕಿಲ್ಲರ್‌ ವೆಂಕಟೇಶ್‌, ಶೋಭರಾಜ್‌, ಗುರುರಾಜ್‌ ಹೊಸಕೋಟೆ ನಟಿಸಿದ್ದಾರೆ. ಮ್ಯೂಸಿಕ್‌ ಬಾಕ್ಸ್‌ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆ ಆಗುತ್ತಿವೆ. ಕತೆ ಬರೆದ ಈಶ್ವರ ಕಟ್ಟಿಮನಿ ಮಾತನಾಡಿ, ‘ಒಬ್ಬ ವ್ಯಕ್ತಿ ವಿದ್ಯ ಕಲಿತು ಹೇಗೆ ಊರಿಗೆ ಮಾದರಿಯಾಗ್ತಾನೆ. ನಂತರ ಗುರು, ಹಿರಿಯರು ತಂದೆ, ತಾಯಿ ಸಹೋದರರಯನ್ನು ಹೇಗೆ ಮರೆಯುತ್ತಾನೆ ಎಂದು ಹೇಳಿರುವ ಕತೆ ಇಲ್ಲಿದೆ. ಇದೇ ಫೆ.26ಕ್ಕೆ ಗುಲ್ಬರ್ಗದಲ್ಲಿ ಆಡಿಯೋ ರಿಲೀಸ್‌ ಕಾರ್ಯಕ್ರಮ ನಡೆಯಲಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ’ ಎಂದರು. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ (Censor Board) ಯು/ಎ ಸರ್ಟಿಫಿಕೆಟ್ (U/A Certificate) ಪಡೆದುಕೊಂಡಿದೆ.

YouTube video player

ಗಂಗಾಧರ ಎಂ ಬಡಿಗೇರ ಹಾಗೂ ಡಾ. ಹೆಜ್ಜಾಜಿ ಮಹದೇವ ಬರೆದಿರುವ ಗೀತರಚನೆಗೆ ಅಲೇನ್ ಶಾಸ್ತಾ ಸಂಗೀತ ನೀಡಿದ್ದಾರೆ. ರಮೇಶ್ ಕೊಯಿರ ಛಾಯಾಗ್ರಹಣ,ಲಕ್ಷ್ಮೀರಾಜ್ ಶೆಟ್ಟಿ ಸಂಕಲನವಿದೆ.ಇನ್ನು ನಿರ್ದೇಶಕ ದೇವದಾಸ್ ನಿರ್ದೇಶನದ ಜೊತೆಗೆ ಈ ಸಿನಿಮಾದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಹ ನಿರ್ದೇಶಕನಾಗಿ ಪ್ರವೀಣ್ ಕುಮಾರ್ ಕೆಲಸ ಮಾಡಿದ್ದು. ರಾಜೇಶ್ ಕೃಷ್ಣ, ರಮೇಶ್ಚಂದ್ರ, ಸುನೀತಾ ಸಿನಿಮಾಗೆ ಹಾಡಿದ್ದಾರೆ. ಸದ್ಯ ಟ್ರೈಲರ್​​​ನಿಂದ ಗಮನ ಸೆಳೆಯುತ್ತಿರೋ ನೆನಪಾಗುತ್ತಿಲ್ಲ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. 

Drishya 2: ಫೆಬ್ರವರಿ 25ರಂದು ಓಟಿಟಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ರಿಲೀಸ್!

'ಬಿಸಿಲು ಕುದುರೆ' ಚಿತ್ರದ ಪೋಸ್ಟರ್‌ ರಿಲೀಸ್: ಗೀತ ರಚನೆಕಾರ ಹೃದಯ ಶಿವ (Hrudaya Shiva) ನಿರ್ದೇಶನದ ಹೊಸ ಸಿನಿಮಾದ ಹೆಸರು ‘ಬಿಸಿಲು ಕುದುರೆ’ (Bisilu Kudure). ಸಂಪತ್‌ ಮೈತ್ರೇಯ (Sampath Maitreya), ಸುನಿತಾ, ಕರಿಸುಬ್ಬು, ಜೋಸೈಮನ್‌, ಮಳವಳ್ಳಿ ಸಾಯಿಕೃಷ್ಣ , ವಿಕ್ಟರಿ ವಾಸು, ವೆಂಕಟೇಶ್‌ ನಟಿಸಿರುವ ಈ ಚಿತ್ರದ ಪೋಸ್ಟರ್‌ (Poster) ಬಿಡುಗಡೆ ಆಗಿದೆ.

‘ಚಿತ್ರದಲ್ಲಿ ಅರಣ್ಯದ ಅಂಚಿನ ಬಗರ್‌ ಹುಕುಂ ಸಾಗುವಳಿದಾರರ ತಲ್ಲಣಗಳನ್ನು ಚಿತ್ರಿಸಲಾಗಿದೆ. ಆಡಳಿತ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ನಡುವೆ ಸಿಲುಕಿದ ಮುಗ್ಧ ರೈತನೊಬ್ಬ ಸರ್ಕಾರಿ ಭೂಮಿಯನ್ನು ಪಡೆಯಲು ಮಾಡುವ ಹೋರಾಟ ಮತ್ತು ಆ ಭೂಮಿಯನ್ನು ಪಡೆದ ನಂತರ ಎದುರಾಗುವ ಅನಿರೀಕ್ಷಿತ ಸಂಕಷ್ಟಗಳು ಹಾಗು ಮಧ್ಯವರ್ತಿಗಳ ದೆಸೆಯಿಂದ ತಾನು ಎದುರಿಸುವ ಆಘಾತವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಹೃದಯ ಶಿವ. ಮೆಟಾಫರ್‌ ಮೀಡಿಯಾ ಹೌಸ್‌ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ನಾಗಾರ್ಜುನ್‌ ಡಿ ಕ್ಯಾಮೆರಾ ಚಿತ್ರಕ್ಕಿದೆ.