ಹೊಸಬರ ಚಿತ್ರ ‘ಮರೆಯದೇ ಕ್ಷಮಿಸು’ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆಯಿತು.
ನಟ ಶ್ರೀನಗರ ಕಿಟ್ಟಿಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡುಗಳನ್ನು ಕೇಳಬಹುದು.
ಗಾರೆ ಕೆಲಸ ಮಾಡುವ ಹುಡುಗನ ಪ್ರೇಮಕತೆ ಇದಾಗಿದ್ದು, ಪ್ರಮೋದ್ ಬೋಪಣ್ಣ, ಮೇಘನಾ ಗೌಡ ಮುಖ್ಯ ಪಾತ್ರಗಳಲ್ಲಿದ್ದಾರೆ. ಆರನ್ ಕಾರ್ತಿಕ್ ವೆಂಕಟೇಶ್ ಸಂಗೀತವಿದೆ. ಈ ಸಂದರ್ಭ ಮಾತನಾಡಿದ ನಿರ್ದೇಶಕ ರಾಘವ್, ‘ಈ ಚಿತ್ರದಲ್ಲಿ ಪ್ರೀತಿ, ಮನರಂಜನೆ ಜೊತೆಗೆ ತಾಯಿ ಸೆಂಟಿಮೆಂಟೂ ಇದೆ. ಜಾನಿ ಮಾಸ್ಟರ್ ಫೈಟ್ ಇದೆ’ ಎಂದರು.
ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್' ರಿಲೀಸ್‌ಗೆ ಸಿದ್ಧತೆ!
ನಿರ್ಮಾಪಕ ಶಿವರಾಮ್, ನಾಯಕ ಪ್ರಮೋದ್ ಬೋಪಣ್ಣ, ನಾಯಕಿ ಮೇಘನಾ, ಸಿರಿ ಮ್ಯೂಸಿಕ್‌ನ ಚಿಕ್ಕಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು. ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಹಣವಿದೆ. ರಮೇಶ್ ಭಟ್, ರಾಕ್‌ಲೈನ್ ಸುಧಾಕರ್ ನಟಿಸಿದ್ದಾರೆ.

