ಸ್ಯಾಂಡಲ್‌ವುಡ್‌ನಲ್ಲಿ ಜಬರ್ದಸ್ತ್‌ ಬ್ಯಾಟಿಂಗ್ ಮಾಡಲು ರೆಡಿಯಾಗುತ್ತಿದೆ ಲವ್ ಒರಿಯಂಟೆಡ್‌ ಸಿನಿಮಾ 'ಲವ್ ಮಾಕ್ಟೇಲ್-2'. ಡಾರ್ಲಿಂಗ್ ಕೃಷ್ಣ ನ್ಯೂ ಲುಕ್‌ ಹೇಗಿದೆ ನೋಡಿ... 

'ಲವ್‌ ಮಾಕ್ಟೇಲ್‌' ಚಿತ್ರದ ಯಶಸ್ಸಿನ ನಂತರ ಕೃಷ್ಣ-ಮಿಲನಾ ಟೀಂ ಮತ್ತೊಂದು ಭಾಗದೊಂದಿಗೆ ಅಭಿಮಾನಿಗಳನ್ನು ಮನೋರಂಜಿಸಲು ಸಿದ್ಧವಾಗುತ್ತಿದೆ. ಕೊರೋನಾ ಲಾಕ್‌ಡೌನ್‌ ಟೈಂನಲ್ಲಿ ಇಬ್ಬರು ಚಿತ್ರಕಥೆ ತಯಾರಿಯಲ್ಲಿ ಬ್ಯುಸಿಯಾಗಿದ್ದರು. ಲವ್‌ ಮಾಕ್ಟೇಲ್‌ 2 ಹೇಗಿರುತ್ತದೆ ಎಂದು ಇಲ್ಲಿದೆ ನೋಡಿ..

ಕೃಷ್ಣ- ಮಿಲನ ಚಿತ್ರಕತೆ ಮುಂದುವರಿದಿದೆ; ಎರಡನೇ ಚಿತ್ರಕ್ಕೆ ತಯಾರಾಗಿದೆ ನವ ಜೋಡಿ!

74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಲವ್‌ ಮಾಕ್ಟೇಲ್‌-2 ಚಿತ್ರದ ಲುಕ್‌ ಬಿಡುಗಡೆ ಮಾಡಿದೆ ಈ ಟೀಂ. ಬಹು ನಿರೀಕ್ಷಿತ ಪೋಸ್ಟ್‌ ಇದಾಗಿದ್ದು, ಕೃಷ್ಣನ ಹೊಸ ಲುಕ್‌ಗೆ ಹುಡುಗಿಯರು ಫಿದಾ ಆಗಿದ್ದಾರೆ. ಹಳದಿ ಟೀ ಶರ್ಟ್‌ ಧರಿಸಿರುವ ಆದಿ ಉದ್ದ ಗಡ್ಡ ಬಿಟ್ಟಿದ್ದಾರೆ.

View post on Instagram

ಲವ್‌ ಮಾಕ್ಟೇಲ್‌ ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಆದರೆ 'ಹೆಂಗೆ ನಾವು' ಎಂದು ಹೇಳುತ್ತಿದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಇರುತ್ತವಾ ಎಂದು ಕಾದು ನೋಡಬೇಕಿದೆ. ಮೊದಲ ಭಾಗದಂತೆ ಎರಡನೇ ಭಾಗಕ್ಕೂ ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. 

'ಲವ್ ಮಾಕ್‌ಟೇಲ್' ತೆಲುಗು ರಿಮೇಕ್‌ನಲ್ಲಿ ತಮನ್ನಾ

ಪೋಸ್ಟರ್‌ ನೋಡಿ ಥ್ರಿಲ್ ಆಗಿರುವ ಅಭಿಮಾನಿಗಳು ಟೀಂ ಪರಿಚಯಿಸುವ ಹೊಸ ಕಲಾವಿದರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ದುರಂತ ಅಂತ್ಯದ ಲವ್ ಮಾಕ್ಟೈಲ್ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡದೇ ಇದ್ದರೂ, ಒಟಿಟಿಯಲ್ಲಿ ನೋಡಿ ಮೆಚ್ಚಿದ್ದಾರೆ. ಅದರಲ್ಲಿಯೂ ಕೊರೋನಾ ವೈರಸ್ ಹಾವಳಿಯಿಂದಾಗ ಲಾಕ್‌ಡೌನ್ ಆದ ಬಳಿಕ ಹಲವು ಈ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View post on Instagram