ಬೆಂಗಳೂರು (ಜು. 15): ಕನ್ನಡದ ಲವ್ ಮಾಕ್‌ಟೇಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದ್ದು ತಮನ್ನಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಲ್ಲಿ ತಮನ್ನಾಗಿ ನಾಯಕನಾಗಿ ಸತ್ಯದೇವ್ ಕಾಣಿಸಿಕೊಳ್ಳಲಿದ್ದಾರೆ. ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. 

ದೀಪವೂ ನಿನ್ನದೇ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್

ಇದೇ ಸತ್ಯದೇವ್ ನಟನೆಯ ಮಮ್ಮುಬ್ರೋಚೆವಾರವರು ಎನ್ನುವ ಸಿನಿಮಾ ಗೋವಿಂದ ಗೋವಿಂದ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗಿದ್ದು ಶೈಲೆಂದ್ರ ಬಾಬು ಪುತ್ರ ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿದ್ದರು. ತೆಲುಗಿನಲ್ಲೂ ಚಿತ್ರಕ್ಕೆ ಲವ್ ಮಾಕ್‌ಟೇಲ್ ಹೆಸರಿಟ್ಟಿದ್ದು ಸತ್ಯ ಹೆಗಡೆ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಭಾವನಾ ರವಿ ಹಾಗೂ ನಾಗಶೇಖರ್ ಅವರೇ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಕಾಲಭೈರವ ಸಂಗೀತ ನೀಡುತ್ತಿದ್ದಾರೆ.