ಶೀರ್ಷಿಕೆ ಮೂಲಕ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿರುವ ಜಲ್ಲಿಕಟ್ಟು ಚಿತ್ರಕ್ಕೆ ಸೆನ್ಸರ್‌ಬೋರ್ಡ್‌ನಿಂದ ಸರ್ಟಿಫಿಕೇಟ್ ಸಿಕ್ಕಿದೆ.  

ದೇಶಾದ್ಯಂತ ಸದ್ದು ಮಾಡಿದ ತಮಿಳುನಾಡಿನ ಪಾರಂಪರಿಕ ಆಚರಣೆ ಜಲ್ಲಿಕಟ್ಟು ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡಲಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಕಾಳಿಕಾಂಬ ದೇವಾಲಯದ ಬಳಿ ಇರುವ ಸಭಾಂಗಣದಲ್ಲಿ ಅದ್ಧೂರಿಯಾಗಿ ಮುಹೂರ್ತ ಮಾಡಲಾಗಿತ್ತು.

ಇದೀಗ ಚಿತ್ರೀಕರಣ ಮುಗಿಸಿದ ತಂಡ ರಿಲೀಸ್‌ಗೆ ಸಿದ್ಧತೆ ನಡೆಸಿದೆ. ಸದ್ಯ ಈ ಚಿತ್ರ ಸೆನ್ಸರ್‌ ಮಂಡಳಿಯಿಂದ A ಸರ್ಟಿಫಿಕೇಟ್ ಪಡೆದುಕೊಂಡಿದೆ. ಆಲ್ವಿನ್‌ ಫ್ರಾನ್ಸಿಸ್‌ ನಿರ್ದೇಶನದ ‘ಜಲ್ಲಿಕಟ್ಟು’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ‘ಎ’ ಸರ್ಟಿಫಿಕೇಟ್‌ ನೀಡಿದೆ. ಸುರೇಶ್‌ ನಿರ್ಮಿಸಿರುವ ಚಿತ್ರದಲ್ಲಿ ಪ್ರಭು ಸೂರ್ಯ, ಶಿಲ್ಪ, ನಿಖಿತಾ, ಶೋಭರಾಜ್‌, ಸುಚೇಂದ್ರ ಪ್ರಸಾದ್‌ ನಟಿಸಿದ್ದಾರೆ. ವೀರೇಶ್‌ ಛಾಯಾಗ್ರಹಣ, ವಿಜಯ್‌ ಯಾಡ್ರ್ಲಿ ಸಂಗೀತ, ನಾಗೇಶ್‌ ನೃತ್ಯ, ವೈಲೆಂಟ್‌ ವೇಲು ಅವರ ಸಾಹಸವಿದೆ.

ಸಂಚಾರಿ ವಿಜಯ್‌ ಸಿನಿಮಾ 'ಪುಕ್ಸಟ್ಟೆ ಲೈಫ್‌' ಸೆಪ್ಟೆಂಬರ್‌ನಲ್ಲಿ ರಿಲೀಸ್‌!

ಚಿತ್ರಮಂದಿರಗಳಿಗೆ 100% ಸೀಟಿಂಗ್ ನೀಡಿದ್ದರೆ ಹಾಗೂ ಅಂದುಕೊಂಡಂತೆ ನಡೆದರೆ ಸಿನಿಮಾವನ್ನು ನವೆಂಬರ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.