ಐಪಿಎಲ್‌ ಬೆಟ್ಟಿಂಗ್‌ ಕಥನ ಕ್ರಿಟಿಕಲ್‌ ಕೀರ್ತನೆಗಳು  ಮೇ 13ಕ್ಕೆ ತೆರೆ ಮೇಲೆ ಮೂಡುತ್ತಿದೆ

‘ಕ್ರಿಟಿಕಲ್‌ ಕೀರ್ತನೆಗಳು’ ಮೇ 13ಕ್ಕೆ ತೆರೆ ಮೇಲೆ ಮೂಡುತ್ತಿದೆ. ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿರುವ ‘ಕ್ರಿಟಿಕಲ್‌ ಕೀರ್ತನೆಗಳು’ ಚಿತ್ರದ ಟ್ರೈಲರ್‌ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

‘ಐಪಿಎಲ್‌ ಬೆಟ್ಟಿಂಗ್‌ ಅಡಿಕ್ಟ್ ಅದವರು ಹೇಗೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರುತ್ತಾರೆ ಎಂಬುದನ್ನು ಹಲವಾರು ಘಟನೆಗಳ ಮೂಲಕ ಈ ಚಿತ್ರದಲ್ಲಿ ಹೇಳಲಾಗಿದೆ. ಗಂಭೀರವಾದ ವಿಷಯವನ್ನು ಹಾಸ್ಯದ ಧಾಟಿಯಲ್ಲಿ ಹೇಳಿದರೆ ಎಲ್ಲರಿಗೂ ತಲುಪುತ್ತದೆ ಎನ್ನುವ ಉದ್ದೇಶ ಈ ಹಿಂದೆ ಅಡಗಿದೆ. ಬೆಂಗಳೂರು, ಕುಂದಾಪುರ, ಮಂಡ್ಯ ಹಾಗೂ ಬೆಳಗಾವಿ ಹೀಗೆ ನಾಲ್ಕು ಜಿಲ್ಲೆಗಳಲ್ಲಿ ಬೇರೆ ಬೇರೆ ಕತೆಗಳು ನಡೆಯುತ್ತವೆ. ಈ ನಾಲ್ಕೂ ಕತೆಗಳು ಒಂದು ಕಡೆ ಬಂದಾಗ ಏನಾಗುತ್ತದೆ ಎಂಬುದು ಸಿನಿಮಾದಲ್ಲಿ ನೋಡಬಹುದು’ ಎಂಬುದು ನಿರ್ದೇಶಕ ಕುಮಾರ್‌ ಕೊಡುವ ಮಾಹಿತಿ.

5.5 ಕೋಟಿಗೂ ಅಧಿಕ ಜನರಿಂದ ಕೆಜಿಎಫ್‌ 2 ವೀಕ್ಷಣೆ!

ಶಿವಸೇನಾ ಕ್ಯಾಮೆರಾ, ವೀರ ಸಮಥ್‌ರ್‍ ಸಂಗೀತ ಚಿತ್ರಕ್ಕಿದೆ. ತಬಲಾನಾಣಿ, ಸುಚೇಂದ್ರ ಪ್ರಸಾದ್‌, ರಾಜೇಶ್‌ ನಟರಂಗ, ತರಂಗವಿಶ್ವ, ದೀಪಾ ಜಗದೀಶ್‌, ಅಪೂರ್ವ ಭಾರದ್ವಾಜ್‌, ಅರುಣ ಬಾಲ್‌ರಾಜ್‌, ಧರ್ಮ, ದಿನೇಶ್‌ ಮಂಗಳೂರು, ರಘು ಪಾಂಡೇಶ್ವರ, ಯಶಸ್‌ ಅಭಿ, ಗುರುರಾಜ ಹೊಸಕೋಟೆ, ಮಾ.ಮಹೇಂದ್ರ, ಮಾ.ಪುಟ್ಟರಾಜು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಯಶವಂತ್‌ ಶೆಟ್ಟಿ, ವೀರ ಸಮಥ್‌ರ್‍, ತರಂಗ ವಿಶ್ವ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

'ಕ್ರಿಟಿಕಲ್‌ ಕೀರ್ತನೆಗಳು' ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ!

ನಟ ತಬಲಾ ನಾಣಿ ಮಾತನಾಡುತ್ತಾ, ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ ನನಗೆ ಅದೃಷ್ಟತಂದ ಚಿತ್ರ. ಆ ಸಿನಿಮಾದ ಬಳಿಕ ಹಲವು ಕಡೆ ಆಫರ್‌ಗಳು ಬಂದವು. ಇದೀಗ ಅದೇ ತಂಡದ ಜೊತೆಗೆ ಮತ್ತೆ ಕೆಲಸ ಮಾಡಲು ಖುಷಿ ಎನಿಸುತ್ತದೆ’ ಎಂದರು.

ಫಿಸಿಕ್ಸ್‌ ಟೀಚರ್‌ ಟ್ರೇಲರ್‌ ಬಿಡುಗಡೆ

ಸುಚೇಂದ್ರ ಪ್ರಸಾದ್‌, ತರಂಗ ವಿಶ್ವ, ರಾಜೇಶ್‌ ನಟರಂಗ, ಅಪೂರ್ವ, ಅರುಣಾ ಬಾಲರಾಜ್‌ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವೀರ್‌ ಸಮಥ್‌ರ್‍ ಸಂಗೀತ, ಶಿವ ಸೇನಾ ಮತ್ತು ಶಿವ ಶಂಕರ್‌ ಡಿಓಪಿ ಇದೆ. ಕೇಸರಿ ಫಿಲಂಸ್‌ ಕ್ಯಾಪ್ಚರ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸೆನ್ಸಾರ್‌ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.

YouTube video player