ಈ ಪ್ರಯುಕ್ತ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅದಿತ್‌ ನವೀನ್‌, ‘ಚಿತ್ರ ನಾವಂದುಕೊಂಡ ಹಾಗೇ ಬಂದಿದೆ. ಕಾಲೇಜ್‌ನಲ್ಲಿ ಬೇಜವಾಬ್ದಾರಿಯಿಂದಿರುವ ಹುಡುಗರಿಗೆ ಕಾಡಿನೊಳಗೆ ಡಾಕ್ಯುಮೆಂಟರಿ ಮಾಡುವ ಅಸೈನ್‌ಮೆಂಟ್‌ ಸಿಗುತ್ತೆ. ಡಾಕ್ಯುಮೆಂಟರಿ ಮಾಡಲೆಂದು ಕಾಡಿಗೆ ಬರುವ ಹುಡುಗ, ಹುಡುಗಿಯರಿಗೆ ಒಬ್ಬ ಭಯಾನಕ ವ್ಯಕ್ತಿ ಎದುರಾಗುತ್ತಾನೆ. ಆತನಿಂದಾಗಿ ಟೀಮ್‌ನಲ್ಲಿದ್ದ ಹಲವರು ಸಾಯುತ್ತಾರೆ. ಕೊನೆಗೆ ಯಾರು ಉಳಿದುಕೊಳ್ಳುತ್ತಾರೆ. ಆ ವಿಲಕ್ಷಣ ವ್ಯಕ್ತಿ ಯಾಕೆ ಅವರನ್ನೆಲ್ಲ ಕೊಲೆ ಮಾಡುತ್ತಾನೆ ಅನ್ನೋದು ಕತೆ. ಚಿತ್ರದಲ್ಲಿ ಎರಡು ಹಾಡಿದೆ’ ಎಂದರು.

ಇಂದು ಆನ್‌ಲೈನ್‌ನಲ್ಲಿ 'ಮಹಾನ್‌ ಹುತಾತ್ಮ' ರಿಲೀಸ್‌; ಸಾಗರ್‌ ಪುರಾಣಿಕ್‌ ನಿರ್ದೇಶನದ ಕಿರುಚಿತ್ರ! 

ನಟ ಉಗ್ರಂ ರವಿ ಮಾತನಾಡಿ, ‘ದಾಂಡೇಲಿ ಕಾಡಿನಲ್ಲಿ ಹಲವು ದಿನಗಳ ಶೂಟಿಂಗ್‌ ನಡೆಯಿತು. ಆಗಾಗ ಕಾಡಲ್ಲಿ ಕೇಳುತ್ತಿದ್ದ ವಿಚಿತ್ರ ಶಬ್ದಕ್ಕೆ ನಾವೆಲ್ಲ ಹೆದರಿಕೊಂಡಿದ್ದೆವು. ಕೊನೆಗೂ ಶೂಟಿಂಗ್‌ ಮುಗಿಸಿ ಕಾಡಿಂದಾಚೆ ಬಂದಾಗ ಬದುಕಿದೆಯಾ ಬಡ ಜೀವವೇ ಎಂಬ ಫೀಲ್‌ ಬಂತು’ ಎಂದರು.

ಡಿಜಿಟಲ್‌ ಲೋಕಲ್ಲಿ ಕ್ರೇಜಿ ಲೋಕ; ಯುಗಾದಿಗೆ ಶುರು ರವಿಚಂದ್ರನ್‌ ಯೂಟ್ಯೂಬ್‌ ಚಾನಲ್‌ 1N1LY

ನಾಯಕಿ ಕೃತಿ ಗೌಡ ಅವರಿಗೆ ಕಾಡಿಗೆ ಹೋದ ಮೇಲೆ ನೀರು, ಆಹಾರದ ಬೆಲೆ ತಿಳಿಯಿತಂತೆ. ನಿರ್ಮಾಪಕ ರಾಜು ಅಬ್ದುಲ್‌ ಗಣಿ ತಾಳಿಕೋಟೆ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು.