ಪ್ರೆಸ್‌ಮೀಟ್ ಮಾಡುವ ಮೂಲಕ ಸಲಗ ಸಿನಿಮಾ ಹಿಟ್‌ ಬಗ್ಗೆ ಮಾತನಾಡಿದ ದುನಿಯಾ ವಿಜಯ್.  ಅಭಿಮಾನಿಗಳನ್ನು ಭೇಟಿ ಮಾಡಲು ಯಾತ್ರೆ ಶುರು...

ಸಲಗ ಚಲನಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ರಾಜ್ಯೋತ್ಸವ ಬಳಿಕ ಮೈಸೂರಿನಿಂದ ಆರಂಭಿಸಿ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವುದಾಗಿ ದುನಿಯಾ ವಿಜಯ್‌ ತಿಳಿಸಿದರು.

'ಸಲಗ' ನೋಡಿ ಫುಲ್ ಮಾರ್ಕ್ಸ್ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!

ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಮಾರ್ಗವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ತೆರಳುವ ಉದ್ದೇಶವಿದೆ. ಸಲಗ ಚಲನಚಿತ್ರವು ಅಭೂತ ಪೂರ್ವ ಯಶಸ್ಸು ಕಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಿನಿಮಾದಲ್ಲಿ ಮೈಸೂರಿನ ಪ್ರತಿಭೆಗಳು ನಟಿಸಿದ್ದು, ಮಕ್ಕಳೇ ಈ ಸಿನಿಮಾದ ಬೆನ್ನೆಲುಬಾಗಿದ್ದಾರೆ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಮಕ್ಕಳ ಬದುಕು ಹಾಳಾಗಬಾರದು. ಮಕ್ಕಳು ರೌಡಿಸಂ ಜೀವನಕ್ಕೆ ಆಕರ್ಷಿತರಾಗಬಾರದು ಎಂಬ ದೃಷ್ಟಿಕೋನದಿಂದ ಚಿತ್ರವನ್ನು ಮಾಡಿದ್ದೇನೆ. ಭೂಗತ ಲೋಕದ ಬಗ್ಗೆ ಚಿತ್ರವಾಗಿರುವುದರಿಂದ ಮತ್ತು ಈ ಸಿನಿಮಾದಲ್ಲಿ ಬಳಸಿದ ಭಾಷೆ ಹಾಗೆ ಇರುವುದರಿಂದ ಚಿತ್ರಕ್ಕೆ ಎ ಪ್ರಮಾಣ ಪತ್ರ ದೊರೆತಿದೆ. ಭೂಗತ ಲೋಕದ ಚಿತ್ರ ಎಂಬ ಕಾರಣಕ್ಕಾಗಿ ಚಿತ್ರದಲ್ಲಿ ಅಶ್ಲೀಲ ಸಂಭಾಷಣೆ ಇದೆ. ಹಾಗೆ ನೋಡಿದರೆ ಅಮೆಜಾನ್‌ ಪ್ರೈಮ್‌ ಮುಂತಾದ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸಿನಿಮಾಗಳನ್ನೇ ನೋಡುತ್ತಿರುವಾಗ, ನಾವು ನಮ್ಮ ಸಿನಿಮಾದಲ್ಲಿ ಅತಿರೇಖ ಎಂಬುದೇನಿಲ್ಲ. ಭೂಗತ ಲೋಕದ ವಾಸ್ತವಯ ಭಾಷೆಯನ್ನಷ್ಟೇ ಬಳಸಿದ್ದೇವೆ. ಕೆಲವರಿಗೆ ಅದು ಮುಜುಗರ ಆಗಬಹುದು, ಅಂತಹವರು ಸಿನಿಮಾ ಮಂದಿರಕ್ಕೆ ಬರುವುದು ಬೇಡ. ಚಿತ್ರ ಮಕ್ಕಳು ಸುಳ್ಳು ಹೇಳಿ ಹೇಗೆ ದಾರಿ ತಪ್ಪುತ್ತಾರೆ ಎಂಬುದನ್ನು ಈ ಸಿನಿಮಾ ಹೇಳುತ್ತದೆ’ ಎಂದರು.

ಬಂಡೆ ಮಹಾಕಾಳಿ: ದುನಿಯಾ ವಿಜಯ್ 'ಸಲಗ' ಸಕ್ಸಸ್‌ ಕೊಟ್ಟಿದ್ದು ಹೀಗೆ..

ಸುದ್ದಿಗೋಷ್ಠಿಯಲ್ಲಿ ಕೀರ್ತಿ ವಿಜಯ್‌, ಪುತ್ರ ಸಾಮ್ರಾಟ್‌, ಬಾಲನಟರಾದ ರಮ್ಯಾ, ಮೋಹನ, ಶರತ್‌, ಶ್ರೀಧರ್‌ ಮೊದಲಾದವರು ಇದ್ದರು.

View post on Instagram