Asianet Suvarna News Asianet Suvarna News

ನಂದಮೂರಿ ಚಿತ್ರದಲ್ಲಿ ವಿಲನ್‌; ಪಾತ್ರದ ಬಗ್ಗೆ ರಿವೀಲ್ ಮಾಡಿದ Duniya Vijay!

ನಿರ್ಮಾಣ ಸಂಸ್ಥೆ ಫೋಟೋ ರಿಲೀಸ್‌ ಮಾಡುವ ಮೂಲಕ ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವುದು ಅಧಿಕೃತ. 

Kannada Duniya Vijay reveals about telugu villain role in Nandamuri Balakrishna film vcs
Author
Bangalore, First Published Jan 4, 2022, 10:44 AM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗ (Sandalwood) ಹಂಬಲ್ ವ್ಯಕ್ತಿ ಅಂದ್ರೆ ದುನಿಯಾ ವಿಜಯ್ (Duniya Vijay). ವಿಜಯ್ ನಿರ್ದೇಶಿಸಿ ನಟಿಸಿರುವ ಸಲಗ (Salaga) ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿ,ಕೋಟಿಯಲ್ಲಿ ಕಲೆಕ್ಷನ್‌ ಮಾಡಿದ ನಂತರ ಅವರ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ ಎನ್ನಬಹುದು. ಅದರಲ್ಲೂ ಇತ್ತೀಚಿಗೆ ವಿಜಯ್ ಕಾಣಿಸಿಕೊಳ್ಳುತ್ತಿರುವ ಲುಕ್‌ ಎಲ್ಲರಿಗೂ ಇಷ್ಟವಾಗುತ್ತಿದೆ. ವಿಜಯ್ ಸೈಲೆಂಟ್ ಆಗಿ, ಯಾವುದಾದರೂ ಸಿನಿಮಾ ಒಪ್ಪಿಕೊಂಡಿರಬಹುದು ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಹೀಗಾಗಿ ಸ್ವತಃ ಚಿತ್ರತಂಡದವರೇ ಪೋಸ್ಟರ್ ರಿವೀಲ್ ಮಾಡುವ ಮೂಲಕ ಸ್ವಾಗತ ಮಾಡಿಕೊಂಡಿದ್ದಾರೆ. 

ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ತೆಲುಗು ಹಿರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಜೊತೆ ವಿಜಯ್ ನಟಿಸಲಿದ್ದು, ವಿಲನ್ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಬಾಲಕೃಷ್ಣ ನಟನೆಯ 'ಅಖಂಡ' ಸೂಪರ್ ಹಿಟ್ ಆಗಿದ ಬೆನ್ನಲೇ ಮುಂದಿನ ಸಿನಿಮಾ ಬಗ್ಗೆ ರಿವೀಲ್ ಮಾಡಿದ್ದಾರೆ. 'ಕ್ರ್ಯಾಕ್' (Crack) ಎಂದು ಶೀರ್ಷಿಕೆ ನೀಡಲಾಗಿದ್ದು, ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. 

Kannada Duniya Vijay reveals about telugu villain role in Nandamuri Balakrishna film vcs

'ಸ್ಯಾಂಡಲ್‌ವುಡ್‌ ಸೆನ್ಸೇಷನ್‌ ದುನಿಯಾ ವಿಜಯ್ ಅವರನ್ನು ನಮ್ಮ ಸಿನಿಮಾದಲ್ಲಿ ವಿಲನಿಸಂ ತೋರಿಸಲು ನಾವು ಸಂತೋಷದಿಂದ ಸ್ವಾಗತಿಸುತ್ತಿದ್ದೇವೆ,' ಎಂದು ವಿಜಯ್ ಅವರ ಸ್ಟೈಲಿಷ್ ಫೋಟೋ ರಿವೀಲ್ ಮಾಡಿದ್ದಾರೆ. ಇದಕ್ಕೆ ವಿಜಯ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. 

ಕರಿಯಾ ಅಂತ ಒಪ್ಕೊಬೇಕು, ಹೆದರ್ಕೊಂಡ್ರೆ ಹೆದರಿಸುತ್ತಾರೆ ಅದಿಕ್ಕೆ ಎದ್ರಾಕೊಳ್ಳಿ: Duniya Vijay

'ಸಲಗ ರಿಲೀಸ್ ಸಮಯದಲ್ಲಿ ನನ್ನನ್ನು ತೆಲುಗು ಚಿತ್ರ ನಿರ್ದೇಶಕರೊಬ್ಬರು ನಿಮ್ಮನ್ನು ಭೇಟಿಯಾಗಬೇಕು ಎಂದು ಕರೆ ಮಾಡಿದರು. ಅವರು ಕ್ರ್ಯಾಕ್ ಸಿನಿಮಾ ನಿರ್ದಶಕರು ಎಂದು ತಿಳಿದು ನನಗೆ ಖುಷಿ ಆಯ್ತು. ಬೆಂಗಳೂರಿಗೆ ಬಂದು ಭೇಟಿ ಮಾಡಿ ಕಥೆ ಹೇಳಿದರು. ನೆಗೆಟಿವ್ ಪಾತ್ರವನ್ನೂ ಇಷ್ಟು ಪವರ್‌ಫುಲ್ ಆಗಿ ಬರೆಯಲು ಸಾಧ್ಯವೇ ಎಂದು ನನಗೆ ಗೊತ್ತಿರಲಿಲ್ಲ. ನನ್ನನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಂಡಿದ್ದಕ್ಕೆ ನಿರ್ದೇಶಕ ಗೋಪಿಚಂದ್‌ (Gopichand) ಮಲ್ಲಿನೇನಿ ಅವರಿಗೆ ನಾನು ಥ್ಯಾಂಕ್ಸ್‌ ಹೇಳಬೇಕು. ಬಾಲಯ್ಯ ಅವರ ಜೊತೆ ನಟಿಸುತ್ತಿದ್ದೇನೆ, ಎಂದರೆ ಅದೊಂದು ರೀತಿಯಲ್ಲಿ ಅದೃಷ್ಟ ಎನ್ನಬಹುದು. ಚಿಕ್ಕ ವಯಸ್ಸಿನಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡ ಬೆಳೆದಿದ್ದೇನೆ. ಈಗ ಅವರ ಸಿನಿಮಾದಲ್ಲಿ ನಾನು ಒಂದು ಪಾತ್ರ ಮಾಡುತ್ತಿರುವುದಕ್ಕೆ ನನಗೆ ಖುಷಿ ನೀಡಿದೆ,' ಎಂದು ದುನಿಯಾ ವಿಜಯ್ ಹೇಳಿದ್ದಾರೆ.

Duniya Vijay Wife Workout: ಪತಿಯ ಹಾಗೆ ಪತ್ನಿ ಕೀರ್ತಿ ವಿಜಯ್ ಫುಲ್ ಫಿಟ್!

'ದುನಿಯಾ ವಿಜಯ್ ಅವರ ಬಗ್ಗೆ ನಾನು ಬಹಳ ಕೇಳಿದ್ದೆ. ಅವರ ದುನಿಯಾ (Duniya Film) ಸಿನಿಮಾ ಸೇರಿದಂತೆ ಒಂದಿಷ್ಟು ಚಿತ್ರಗಳನ್ನೂ ನೋಡಿರುವೆ. ಸಲಗ ಸಿನಿಮಾ ಪ್ರಚಾರ ಮತ್ತು ಸಿನಿಮಾ ಸಣ್ಣ ಸಣ್ಣ ತುಣುಕುಗಳನ್ನು ನೋಡಿ ಬಾಲಯ್ಯ ಅವರ 107ನೇ ಸಿನಿಮಾದ ವಿಲನ್‌ ಇವರೇ ಎಂದು ಡಿಸೈಡ್ ಮಾಡಿದ್ದೆ. ಒಮ್ಮೆ ಬೆಂಗಳೂರಿಗೆ (Bangalore) ಬಂದು ಅವರನ್ನು ಭೇಟಿ ಮಾಡಿ ಕಥೆ ಹೇಳಿದೆ. ಅವರು ಬಹಳ ಸಂತೋಷಪಟ್ಟರು. ಕನ್ನಡದಲ್ಲಿ ದೊಡ್ಡ ಸ್ಟಾರ್ ಆದರೂ ತುಂಬಾನೇ ಸರಳ ವ್ಯಕ್ತಿ ಎಂಬುವುದು ತಿಳಿಯಿತು. ಪಾತ್ರಕ್ಕಾಗಿ ಏನು ಬೇಕಾದರೂ ಮಾಡೋಣ ಎಂದು ಹೇಳಿದ್ದರು. ಈ ಸಿನಿಮಾದಲ್ಲಿ ಅವರದ್ದು ಸಿಕ್ಕಾಪಟ್ಟೆ ಪವರ್‌ಫುಲ್‌ ಕ್ಯಾರೆಕ್ಟರ್,' ಎಂದು ನಿರ್ದೇಶಕ ಗೋಪಿಚಂದ್ ಹೇಳಿದ್ದಾರೆ. 

'ಸಲಗ ರಿಲೀಸ್ ಸಮಯದಲ್ಲಿ ಗೋಪಿಚಂದ್ ಮಲಿನೇನಿ ನನ್ನನ್ನು ಭೇಟಿ ಮಾಡಿದರು. ಬಹಳ ಅದ್ಭುತವಾಗಿ ಈ ಪಾತ್ರ ಬರೆದಿದ್ದಾರೆ. ಆ ಕಾರಣಕ್ಕಾಗಿ ನಾನು ಒಪ್ಪಿಕೊಂಡೆ. ಒಳ್ಳೆ ಸಿನಿಮಾ ಮತ್ತು ಪಾತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ,' ಎಂದಿದ್ದಾರೆ ವಿಜಯ್ ಕುಮಾರ್.

"

Follow Us:
Download App:
  • android
  • ios