ತಮ್ಮದೇ ಸ್ವಂತ ನಿರ್ಮಾಣದ ಚಿತ್ರವೂ ಸೇರಿದಂತೆ ಐದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಹೊಸದಾಗಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.ಅಲ್ಲಿಗೆ ಧನಂಜಯ್‌ ಅವರಿಗೆ ಕೊರೋನಾ ಅಡ್ಡಿ ಆಗಿಲ್ಲ. ಚಿತ್ರಗಳ ಮೇಲೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ಹೊಸದಾಗಿ ಒಪ್ಪಿಕೊಂಡಿರುವ ಚಿತ್ರವನ್ನು ನಿರ್ಮಿಸುತ್ತಿರುವುದು ‘ತ್ರಿವಿಕ್ರಮ್‌’ ಚಿತ್ರವನ್ನು ನಿರ್ಮಿಸಿದ್ದ ಸೋಮಣ್ಣ ಹಾಗೂ ಸುರೇಶ್‌. ಕತೆ ಹಾಗೂ ನಿರ್ದೇಶಕರು ಆಯ್ಕೆ ಆಗಬೇಕಿದ್ದು, ಹೊಸ ಚಿತ್ರಕ್ಕೆ ಕಮಿಟ್‌ ಆಗಿ ಅಡ್ವಾನ್ಸ್‌ ಪಡೆದುಕೊಂಡಿದ್ದಾರೆ ಧನಂಜಯ್‌.

ಅಲ್ಲು ಅರ್ಜುನ್ 'ಪುಷ್ಪ'ದ ಒಂದು ಫೈಟಿಂಗ್‌ ಸೀನ್‌ಗೆ 6 ಕೋಟಿ? 

ಹೊಸ ರೀತಿಯ ಕತೆಯೊಂದಿಗೆ ದೊಡ್ಡ ಬಜೆಟ್‌ನ ಸಿನಿಮಾ ಮಾಡುವ ನಿಟ್ಟಿನಲ್ಲಿ ಧನಂಜಯ್‌ ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ಮಾಪಕರು. ರವಿಚಂದ್ರನ್‌ ಪುತ್ರ ವಿಕ್ರಮ್‌ ರವಿಚಂದ್ರನ್‌ ಅವರ ನಟನೆಯಲ್ಲಿ ‘ತ್ರಿವಿಕ್ರಮ’ ಸಿನಿಮಾ ಮಾಡಿದ್ದು, ಆ ಬ್ರಾಂಡ್‌ನಿಂದ ಮುಂದೆ ಮತ್ತಷ್ಟುದೊಡ್ಡ ಸಿನಿಮಾ ಮಾಡಬೇಕೆಂಬ ಇವರ ಆಸೆಗೆ ಧನಂಜಯ್‌ ಸಾಥ್‌ ನೀಡುತ್ತಿದ್ದಾರೆ.

ಈ ನಡುವೆ ಅಗ್ನಿ ಶ್ರೀಧರ್‌ ತಂಡದ ‘ಜಯರಾಜ್‌’ ಚಿತ್ರವನ್ನೂ ಒಪ್ಪಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ಸಾಕಷ್ಟುಮಾಡಿಕೊಳ್ಳುತ್ತಿದ್ದಾರೆ. ‘ಡಾಲಿ’ ಸಿನಿಮಾ ಶೂಟಿಂಗ್‌ ಸೆಟ್‌ಗೆ ಹೋಗಬೇಕಿದೆ. ತಮ್ಮದೇ ಮೊದಲ ನಿರ್ಮಾಣದ ‘ಬಡವ rascal ‌’ ಚಿತ್ರೀಕರಣ ಮುಗಿಸಿದ್ದು, ಸದ್ಯ ಡಬ್ಬಿಂಗ್‌ ಮಾಡುತ್ತಿದ್ದಾರೆ. ಇದಿಷ್ಟುಧನಂಜಯ್‌ ಅವರ ಸೋಲೋ ಚಿತ್ರಗಳ ಕತೆ ಆದರೆ, ಪುನೀತ್‌ ರಾಜ್‌ಕುಮಾರ್‌ ಅವರ ‘ಯುವರತ್ನ’ ಹಾಗೂ ಧ್ರುವ ಸರ್ಜಾ ಅವರ ‘ಪೊಗರು’ ಚಿತ್ರಗಳಲ್ಲಿ ಮಹತ್ವ ಪಾತ್ರವನ್ನೇ ಮಾಡಿದ್ದಾರೆ.

‘ಚಿತ್ರರಂಗದಲ್ಲಿ ಸಾಕಷ್ಟುಬ್ಯುಸಿ ಆಗಿದ್ದೇನೆ. ನಾನು ಒಪ್ಪಿಕೊಳ್ಳುತ್ತಿರುವ ಚಿತ್ರಗಳು ವಿಶೇಷತೆಯಿಂದ ಕೂಡಿದ್ದು, ಎಲ್ಲವೂ ಒಂದೇ ರೀತಿಯಲ್ಲಿ ಇಲ್ಲ ಎಂಬುದು ಖುಷಿ. ಖಳನಾಯಕ, ನಾಯಕ ಎಲ್ಲ ರೀತಿಯ ಪಾತ್ರಗಳು ನನ್ನ ಹುಡುಕಿಕೊಂಡು ಬರುತ್ತಿವೆ. ಅಲ್ಲು ಅರ್ಜುನ್‌ ಅವರ ಪುಷ್ಪ ಚಿತ್ರದಲ್ಲೂ ನಟಿಸುವಂತೆ ಕೇಳಿದ್ದಾರೆ. ಲಾಕ್‌ಡೌನ್‌ ಕಾರಣ ಆ ಬಗ್ಗೆ ಹೆಚ್ಚಿನ ಮಾತುಕತೆ ಮಾಡಲು ಆಗಿಲ್ಲ. ಈ ತಿಂಗಳಲ್ಲಿ ಅದು ಅಂತಿಮ ಆಗಲಿದೆ. ಈ ಎಲ್ಲಾ ಚಿತ್ರಗಳ ಪೈಕಿ ನನ್ನದೇ ನಿರ್ಮಾಣದ ಬಡವ ರಾರ‍ಯಸ್ಕಲ್‌ ಸಿನಿಮಾ ಅಂದುಕೊಂಡಂತೆ ಮೂಡಿ ಬಂದಿದೆ. ಡಬ್ಬಿಂಗ್‌ ನಡೆಯುತ್ತಿದೆ. ಇದೇ ವರ್ಷ ತೆರೆಗೆ ಬರಲಿದೆ.- ಧನಂಜಯ್‌

ತೆಲುಗಿನ ಅಲ್ಲೂ ಅರ್ಜುನ್‌ ನಟನೆಯ ‘ಪುಷ್ಪ’ ಚಿತ್ರದಲ್ಲೂ ನೆಗೆಟಿವ್‌ ಪಾತ್ರ ಮಾಡುವುದಕ್ಕೆ ಆಹ್ವಾನ ಬಂದಿದ್ದು, ಕೊರೋನಾ ಸಂಕಷ್ಟತಿಳಿಯಾದ ಮೇಲೆ ಈ ಬಗ್ಗೆ ಮಾತುಕತೆ ಮಾಡಲಿದ್ದಾರೆ ಎನ್ನಲಾಗಿದೆ.