ಮಗನ ಮದುವೆ ಬಗ್ಗೆ ಸುಳಿವು ಕೊಟ್ಟ ಮಾಲತಿ ಸುಧೀರ್. ನಾನು ಇದ್ದಾಗಲೇ ಅವನ ಮದುವೆ ಆಗಬೇಕು ಅನ್ನೋದು ನನ್ನ ಆಸೆ..... 

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಘಟನೆಗಳಿಂದ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದುವೇ ನಿರ್ದೇಶಕ ಕಮ್ ನಟ ತರುಣ್ ಸುಧೀರ್ ಮದುವೆ ವಿಚಾರ. ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಆಗಲಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು, ಇದಕ್ಕೆ ತರುಣ್ ಪ್ರತಿಕ್ರಿಯೆ ನೀಡಿಲ್ಲವಾದರೂ ಅವರ ತಾಯಿ ಸಣ್ಣ ಸುಳಿವು ನೀಡಿದ್ದಾರೆ.

'ಮದುವೆ ಆಗುತ್ತೆ ಆದರೆ ಡೇಟ್ ಏನೂ ಕನ್‌ಫರ್ಮ್‌ ಆಗಿಲ್ಲ. ಕನ್ಫರ್ಮ್ ಆದ್ಮೇಲೆ ನಾವೇ ತಿಳಿಸುತ್ತೀವಿ. ಸೋನಲ್ ವಿಚಾರವಾಗಿ ಏನೂ ಹೇಳಲ್ಲಿ ಕಾನ್ಫಿಡೆನ್ಸ್‌ ಆದ್ಮೇಲೆ ಅಲ್ವಾ ಹೇಳ್ಬೇಕು? ಹೀಗಾಗಿ ಇನ್ನು ಏನೂ ಹೇಳಿಲ್ಲ. ಸೋನಲ್‌ ಅವರ ಸಂಬಂಧಿಕರು ದುಬೈನಿಂದ ಬರಬೇಕು ಇಲ್ಲಿ ಮಾತುಕತೆ ಮಾಡಬೇಕು ಅದೆಲ್ಲಾ ಆದ ಮೇಲೆ ಫೈನಲ್ ಆಗುವುದು. ನಮ್ಮ ಮನೆಗೆ ಯಾರೇ ಬಂದರೂ ಖುಷಿನೇ, ನನ್ನ ಮಗನಿಗೆ ಹೆಂಡತಿಯಾಗಿ ಬಂದ್ರೆ ಅದೇ ಸಂತೋಷ. ಮೊದಲಿನಿಂದಲೂ ನನಗೆ ಒಂದು ಆಸೆ..ನನ್ನ ಮಗನಿಗೆ ಬೇಗ ಮದುವೆ ಆಗಲಿ ನಾನು ಇರುವಾಗಲೇ ಮದುವೆ ಆಗಬೇಕು ಅನ್ನೋ ಆಸೆ ಇತ್ತು ಈಗ ಮದುವೆ ಆಗುತ್ತಿದ್ದಾನೆ ಅಂದ್ರೆ ಅದೇ ಸಂತೋಷ. ಒಂದು ಅಥವಾ ಎರಡು ತಿಂಗಳಲ್ಲಿ ಮದುವೆ ಆದರೂ ಆಗಬಹುದು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾಲತಿ ಸುಧೀರ್ ಮಾತನಾಡಿದ್ದಾರೆ.

ಮಗು ಆದ್ಮೇಲೆ 3 ತಿಂಗಳು ಊರಿನಲ್ಲಿರುತ್ತೀನಿ, 5 ತಿಂಗಳು ತುಂಬುತ್ತಿದ್ದಂತೆ ಲವ್ ಮಾಕ್ಟೇಲ್ 3 ಶುರು: ಮಿಲನಾ ನಾಗರಾಜ್

ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸೋನಲ್ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಮಾಡಿದಾಗ ಇಲ್ಲ ಇದೆಲ್ಲಾ ಸುಳ್ಳು ತಾಳಿ ಮಾತುಗಳು ಎಂದು ಹೇಳಿ ಎಸ್ಕೇಪ್ ಆಗಿಬಿಟ್ಟರು. 2022ರಲ್ಲಿ ಬನಾರಸ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸೋನಲ್ ಗರಡಿ, ರಾಬರ್ಟ್‌, ಶುಗರ್ ಫ್ಯಾಕ್ಟರ್ ಸೇರಿದಂತ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ತರುಣ್ ಸುಧೀರ್ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.