Asianet Suvarna News Asianet Suvarna News

ಮಗು ಆದ್ಮೇಲೆ 3 ತಿಂಗಳು ಊರಿನಲ್ಲಿರುತ್ತೀನಿ, 5 ತಿಂಗಳು ತುಂಬುತ್ತಿದ್ದಂತೆ ಲವ್ ಮಾಕ್ಟೇಲ್ 3 ಶುರು: ಮಿಲನಾ ನಾಗರಾಜ್

ಸಿನಿಮಾ ಸೆಟ್‌ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲು ಕಾಯುತ್ತಿರುವ ಮಿಲನಾ ನಾಗರಾಜ್. ಲವ್ ಮಾಕ್ಟೇಲ್ 3 ಸುಳಿವು ಕೊಟ್ಟ ಸುಂದರಿ.....

Kannada actress Milana Nagaraj await for baby to arrive to begin love mocktail 3 shooting vcs
Author
First Published Jul 3, 2024, 12:08 PM IST

ಕನ್ನಡ ಚಿತ್ರರಂಗದ ಪವರ್ ಕಪಲ್ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್‌ಗೆ ಜೂನಿಯರ್ ಕೃಷ್ಣ ಅಥವಾ ಜ್ಯೂನಿಯರ್ ಮಿಲನಾ ಎಂಟ್ರಿ ಕೊಡಲಿದ್ದಾರೆ. ಬಾಣಂತನ ಚೆನ್ನಾಗಿ ಮಾಡಿಸಿಕೊಳ್ಳಿ ಎಂದು ಸಲಹೆ ಕೊಡುತ್ತಿದ್ದ ಅಭಿಮಾನಿಗಳಿಗೆ ಮಿಲನಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.

'ಮಗು ಹುಟ್ಟಿದ ಮೇಲೆ ನನ್ನ ಹುಟ್ಟೂರು ಹಾಸನಕ್ಕೆ ಹೋಗಿ ಮೂರು ತಿಂಗಳ ನಂತರ ಬರುವೆ. ಮಗುವಿಗೆ 5 ತಿಂಗಳು ತುಂಬುತ್ತಿದ್ದಂತೆ ಕೃಷ್ಣ ಮತ್ತು ನಾನು ನಮ್ಮ ಮುಂದಿನ ಸಿನಿಮಾ ಲವ್ ಮಾಕ್ಟೇಲ್ 3 ಶುರು ಮಾಡಬೇಕು ಎಂದುಕೊಂಡಿದ್ದೀವಿ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಿಲನಾ ನಾಗರಾಜ್ ಮಾತನಾಡಿದ್ದಾರೆ. 

ಪ್ರೆಗ್ನೆಂಟ್ ಎಂದು ತಿಳಿದಾಗ ವಿಡಿಯೋ ಕಾಲ್ ಮಾಡಿ ಕಣ್ಣೀರಿಟ್ಟೆ, ನಮ್ಮಲ್ಲಿ ಸೀಮಂತ ಇಲ್ಲ: ಹರ್ಷಿಕಾ ಪೂಣಚ್ಚ

'ಕೃಷ್ಣ ಮತ್ತು ನಾನು ವೃತ್ತಿ ಜೀವನದ ಬಗ್ಗೆ ತುಂಬಾನೇ ಪ್ಯಾಷನೇಟ್ ಆಗಿದ್ದೀವಿ ಹೀಗಾಗಿ ಸದಾ ಕೆಲಸ ಮಾಡಲು ಇಷ್ಟ ಪಡುತ್ತೀವಿ. ಒಂದು ವೇಳೆ ಶೂಟಿಂಗ್ ಸೆಟ್‌ಗೆ ಹೋಗಿ ಚಿತ್ರೀಕರಣ ಮಾಡಬಹುದು ಎಂದು ಡಾಕ್ಟರ್ ಹೇಳಿದರೆ ನಾನು ಅದನ್ನು ಮಾಡಲು ಈಗಲೂ ರೆಡಿಯಾಗಿರುವೆ. ನಾವಿಬ್ಬರೂ ಒಟ್ಟಿಗೆ ಶೂಟಿಂಗ್ ಮಾಡುತ್ತಿರುತ್ತೀವಿ ಹೀಗಾಗಿ ಮಗುವನ್ನು ನೋಡಿಕೊಳ್ಳಲು ಕಷ್ಟ ಆಗುವುದಿಲ್ಲ ಅಲ್ಲದೆ ನಮ್ಮ ಫ್ಯಾಮಿಲಿ ಸಪೋರ್ಟ್ ಚೆನ್ನಾಗಿದೆ ಅವರು ಕೂಡ ಜೊತೆಗಿರುತ್ತಾರೆ...ಈಗ ಮಗು ಹುಟ್ಟುವ ದಿನಕ್ಕೆ ಕಾಯುತ್ತಿದ್ದೀವಿ' ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ.

ಸಿಟಿ ಬಿಟ್ಟು ಊರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸೋನು ಗೌಡ; ಪಬ್-ಎಣ್ಣೆ ಬಿಟ್ಬಿಟ್ಟಾ ಸುಂದ್ರಿ ಎಂದ ನೆಟ್ಟಿಗರು!

ಲವ್ ಮಾಕ್ಟೇಲ್ 1 ಮತ್ತು ಲವ್ ಮಾಕ್ಟೇಲ್ 2 ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಲವ್ ಮಾಕ್ಟೇಲ 3 ಯಾವಾಗ ಅನ್ನೋ ಪ್ರಶ್ನೆ ಶುರುವಾಗಿತ್ತು. ಯಾವುದಕ್ಕೂ ಉತ್ತರ ಕೊಡದ ಈ ಜೋಡಿ ತಮ್ಮ ಮುಂದಿನ ಬೇರೆ ಸಿನಿಮಾ ಪ್ರಾಜೆಕ್ಟ್‌ಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಈಗ ಪ್ರೆಗ್ನೆನ್ಸಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮೂರನೇ ಭಾಗ ಚಿತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಈ ಡವಲ್ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. 

 

Latest Videos
Follow Us:
Download App:
  • android
  • ios